ಶುರುವಾಯ್ತು Amazon Great Freedom Sale 2026 ಸೇಲ್‌; ಬೆಸ್ಟ್ ಸ್ಮಾರ್ಟ್‌ಫೋನ್ ಡೀಲ್‌ಗಳು ಇಲ್ಲಿವೆ

HIGHLIGHTS

ಅಮೆಜಾನ್‌ ಗ್ರೇಟ್ ಫ್ರೀಡಂ ಸೇಲ್‌ ಆಫರ್‌ ಪ್ರಾರಂಭ

ಈ ಸೇಲ್‌ನಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌

ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ವಿವೋ ಬ್ರಾಂಡ್‌ಗಳ ಫೋನ್‌ಗಳು ರಿಯಾಯಿತಿ ಪಡೆದಿವೆ

ಶುರುವಾಯ್ತು Amazon Great Freedom Sale 2026 ಸೇಲ್‌; ಬೆಸ್ಟ್ ಸ್ಮಾರ್ಟ್‌ಫೋನ್ ಡೀಲ್‌ಗಳು ಇಲ್ಲಿವೆ

ಜನಪ್ರಿಯ ಇ-ಕಾಮರ್ಸ್‌ ವೇದಿಕೆ ಅಮೆಜಾನ್‌ನ ಬಹುನಿರೀಕ್ಷಿತ Amazon Great Freedom Sale 2026 ಇದೀಗ ಅಧಿಕೃತವಾಗಿ ಆರಂಭವಾಗಿದೆ. ಆನ್‌ಲೈನ್‌ ಶಾಪಿಂಗ್ ಪ್ರಿಯರು ಕುತೂಹಲದಿಂದ ಕಾದಿರುವ ಈ ಮೆಗಾ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಎಲೆಕ್ಟ್ರಾನಿಕ್ಸ್‌, ಸ್ಮಾರ್ಟ್ ಟಿವಿ, ಗೃಹೋಪಯೋಗಿ ಉಪಕರಣಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಇದಷ್ಟೇ ಅಲ್ಲದೆ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್‌ಸ್ಟಂಟ್‌ ರಿಯಾಯಿತಿ, ಎಕ್ಸ್‌ಚೇಂಜ್ ಕೊಡುಗೆ, ನೋ-ಕಾಸ್ಟ್ EMI ಹಾಗೂ ಕ್ಯಾಶ್‌ಬ್ಯಾಕ್‌ ಸೌಲಭ್ಯಗಳನ್ನೂ ಗ್ರಾಹಕರು ಪಡೆಯಬಹುದು. ಹೊಸ ಸ್ಮಾರ್ಟ್‌ಫೋನ್‌ ಅಥವಾ ಇತರ ಅಗತ್ಯ ಗ್ಯಾಡ್ಜೆಟ್ಸ್‌ ಅನ್ನು ಕಡಿಮೆ ಬೆಲೆಗೆ ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಹಾಗಾದರೆ ಅಮೆಜಾನ್‌ ಗ್ರೇಟ್ ಫ್ರೀಡಂ ಸೇಲ್‌ 2026 ನಲ್ಲಿ ಯಾವೆಲ್ಲ ಆಫರ್‌ಗಳು ಲಭ್ಯವಿವೆ ಎಂಬುದನ್ನು ಮುಂದೆ ವಿವರವಾಗಿ ತಿಳಿಯೋಣ.

Digit.in Survey
✅ Thank you for completing the survey!

Also Read : ಭಾರತದಲ್ಲಿ Vivo S2 ಮೊಬೈಲ್‌ ಬಿಡುಗಡೆ! 7,050mAh ಬ್ಯಾಟರಿ, 32MP ಸೆಲ್ಫಿ ಕ್ಯಾಮೆರಾ

Amazon Great Freedom Sale ಆಫರ್‌

ಅಮೆಜಾನ್‌ ಗ್ರೇಟ್ ಫ್ರೀಡಂ ಸೇಲ್‌ 2026 ಈ ಸೇಲ್‌ನಲ್ಲಿ ಎಲ್ಲ ಬಗೆಯ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳು ಬೊಂಬಾಟ್‌ ಕೊಡುಗೆ ಪಡೆದಿವೆ. ಮುಖ್ಯವಾಗಿ ಪ್ರಿಮಿಯಂ ರೇಂಜ್‌ನ, ಫ್ಲ್ಯಾಗ್‌ಶಿಪ್ ಮಾದರಿಯ ಮೊಬೈಲ್‌ಗಳು ದೊಡ್ಡ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ. ಬ್ಯಾಂಕ್‌ ಆಫರ್‌, ಇಎಮ್‌ಐ ಸೌಲಭ್ಯದ ಆಯ್ಕೆಗಳು ಲಭ್ಯ ಇರುತ್ತವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Amazon Great Freedom Sale 2026 Live Best Smartphone Deals to Grab

Samsung Galaxy S25 Ultra 5G

ಸ್ಯಾಮ್‌ಸಂಗ್ ಸಂಸ್ಥೆಯ ಈ ಮೊಬೈಲ್‌ 6.90 ಇಂಚಿನ ಡಿಸ್‌ಪ್ಲೇ ಪಡೆದಿದೆ. ಅಲ್ಲದೇ ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದುಕೊಂಡಿದೆ. ಹಾಗೆಯೇ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್‌ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್‌ ಅನ್ನು ಒಳಗೊಂಡಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಕೂಡಾ ಈ ಮೊಬೈಲ್‌ 12MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 5,000 mAh ಬ್ಯಾಟರಿಯನ್ನು ಒಳಗೊಂಡಿದ್ದು, ಇದು 45W ವರೆಗೆ ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದಿದೆ. ಅಮೆಜಾನ್ ಮಾರಾಟದಲ್ಲಿ ಈ ಫೋನ್‌ 93,849 ರೂ.ಗಳಿಗೆ ಲಭ್ಯ. Samsung Galaxy S25 Ultra ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ಒನ್‌ಪ್ಲಸ್‌ 15R ಮೊಬೈಲ್‌

ಒನ್‌ಪ್ಲಸ್‌ 15R ಮೊಬೈಲ್‌ 165Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.83 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 2800 x 1272 ಪಿಕ್ಸಲ್‌ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಈ ಮೊಬೈಲ್‌ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದೆ. ಈ ಫೋನ್‌ 7400 mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 80W SUPERVOOC ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ. ಅಮೆಜಾನ್ ಮಾರಾಟದಲ್ಲಿ ಈ ಫೋನ್‌ (12GB+256GB ವೇರಿಯಂಟ್) 59,999 ರೂ.ಗಳಿಗೆ ಲಭ್ಯ. ಒನ್‌ಪ್ಲಸ್‌ 15R ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ರೆಡ್ಮಿ ಟರ್ಬೋ 5 ಸ್ಮಾರ್ಟ್‌ಫೋನ್‌

ಭಾರತೀಯ ಮಾರುಕಟ್ಟೆಗೆ ಇತ್ತೀಚಿಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ Redmi Turbo 5 ಫೋನ್‌ ಅಮೆಜಾನ್‌ ಗ್ರೇಟ್ ಫ್ರೀಡಂ ಸೇಲ್‌ 2026 ನಲ್ಲಿ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಫೋನ್‌ 8GB + 256GB ವೇರಿಯಂಟ್‌ ಬೆಲೆ 54,999 ರೂ. ಆಗಿದೆ. ಆದರೆ ಈ ಸೇಲ್‌ನಲ್ಲಿ 37,999 ರೂ.ಗಳ ಬೆಲೆಗೆ ಲಭ್ಯವಾಗಲಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕೊಡುಗೆ ಮೂಲಕ ಇನ್ನಷ್ಟು ರಿಯಾಯಿತಿ ದರದಲ್ಲಿ ಫೋನ್‌ ಖರೀದಿಸಬಹುದು. ಅಂದಹಾಗೆ Redmi Turbo 5 ಫೋನ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile