Xiaomi ತನ್ನ ಮುಂಬರಲಿರುವ ಬಹು ನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Xiaomi 17 Ultra ಸ್ಮಾರ್ಟ್ಫೋನ್ 25ನೇ ಡಿಸೆಂಬರ್ 2025 ರಂದು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಈ ಮಾಹಿತಿಯನ್ನು ಕಂಪನಿ ತನ್ನ ಅಧಿಕೃತ Weibo ಖಾತೆಯಲ್ಲಿ ಹಂಚಿಕೊಂಡಿದೆ. ಕ್ರಿಸ್‌ಮಸ್ ಹಬ್ಬದ ದಿನ ನಡೆಯುವ ಈ ಲಾಂಚ್ ಈವೆಂಟ್ ತಂತ್ರಜ್ಞಾನ ಪ್ರಿಯರ ಗಮನ ಸೆಳೆದಿದೆ. ಈ ಕಾರ್ಯಕ್ರಮವು ಚೀನಾ ಸಮಯ ಸಂಜೆ 7 ಗಂಟೆಗೆ (ಭಾರತೀಯ ಸಮಯ ಸಂಜೆ 4:30PM) ಪ್ರಾರಂಭವಾಗಲಿದೆ. ಈ ಸ್ಮಾರ್ಟ್ ಫೋನ್‌ನ ವಿನ್ಯಾಸ, ಕ್ಯಾಮೆರಾ ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ.
Also Read: BSNL Christmas Offer: ಬಿಎಸ್ಎನ್ಎಲ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್! ಕೇವಲ ₹1 ರೂಗಳ ಜಬರದಸ್ತ್ ಆಫರ್ ಪರಿಚಯ!
Xiaomi 17 Ultra ಫೋನ್‌ನ ವಿನ್ಯಾಸವನ್ನು ಅಧಿಕೃತ ಚಿತ್ರಗಳ ಮೂಲಕ ಟೀಸರ್ ರೂಪದಲ್ಲಿ ತೋರಿಸಿದೆ. ಈ ಸ್ಮಾರ್ಟ್‌ಫೋನ್ ಫ್ಲಾಟ್ ಡಿಸ್ಪ್ಲೇ ಹೊಂದಿದ್ದು ದೊಡ್ಡ ಗೋಳಾಕಾರದ ಮೂಲೆಗಳು ಇದ್ದು ಕೆಲವು ಹಿಂದಿನ ಮಾದರಿಗಳಲ್ಲಿ ಇದ್ದ ಕರ್ವ್ ಎಡ್ಜ್‌ಗಳಿಂದ ಭಿನ್ನವಾಗಿದೆ. ಹಿಂಭಾಗದಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಇದ್ದು ಅದರ ಮೇಲೆ ಲೈಕಾ ಬ್ರ್ಯಾಂಡಿಂಗ್ ಸ್ಪಷ್ಟವಾಗಿ ಕಾಣಿಸುತ್ತದೆ. ಹಿಂದಿನ ಅಲ್ಟ್ರಾಗಳಲ್ಲಿ ಕಂಡಿದ್ದ ಸಣ್ಣ ಸೆಕೆಂಡರಿ ಡಿಸ್ಪ್ಲೇ ಅನ್ನು ಈ ಬಾರಿ ತೆಗೆದು ಹಾಕಲಾಯಿತು ಸರಳ ಮತ್ತು ಕ್ಲೀನ್ ಲುಕ್ ಮಾದರಿ. ಫೋನ್ ಕಪ್ಪು, ಬಿಳಿ ಮತ್ತು ವಿಶೇಷವಾಗಿ ಮಿನುಗುವ ಸ್ಟಾರ್ರಿ ಸ್ಕೈ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.
Xiaomi 17 Ultra ಯ ಪ್ರಮುಖ ಆಕರ್ಷಣೆ ಅದರ ಪವರ್ಫುಲ್ ಕ್ಯಾಮೆರಾ ವ್ಯವಸ್ಥೆಯಾಗಿದೆ. ಲೈಕಾ ಜೊತೆಗೆಗಿನ ಸಹಕಾರ ಈ ಬಾರಿ ಇನ್ನಷ್ಟು ಬಲವಾಗಿದ್ದು ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ ಇದರ ಮುಖ್ಯ ಕ್ಯಾಮೆರಾ 50MP 1-ಇಂಚ್ ಸೆನ್ಸರ್ ಹೊಂದಿದ್ದು ಜೊತೆಗೆ 200MP ಲೈಕಾ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇರುತ್ತದೆ. ಇದರ ಜೂಮ್ ಫೋಟೋಗಳು ಮತ್ತು ದೂರದ ಚಿತ್ರಗಳು ಹೆಚ್ಚು ಸ್ಪಷ್ಟವಾಗಿರುತ್ತವೆ. ಕಡಿಮೆ ಬೆಳಕಿನಲ್ಲಿ ಫೋಟೋಗ್ರಫಿ ಮತ್ತು ಜೂಮ್ ಗುಣಮಟ್ಟದಲ್ಲಿ ದೊಡ್ಡ ಮಟ್ಟದ ಸುಧಾರಣೆ ಸಾಧ್ಯ.
ಈ ಫೋನ್‌ನಲ್ಲಿ ಹೊಸ ತಲೆಮಾರಿನ Qualcomm Snapdragon 8 Elite Gen 5 ಪ್ರೊಸೆಸರ್ ಅನ್ನು ನಿರೀಕ್ಷಿಸಲಾಗಿದೆ. ಇದು ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ಹೈ-ಪರ್ಮೆನ್ಸ್ ಕೆಲಸಗಳಿಗೆ ಅತ್ಯುತ್ತಮ ಅನುಭವ ನೀಡಲಿದೆ. ಬ್ಯಾಟರಿ ವಿಷಯದಲ್ಲಿ ಈ ಫೋನ್‌ನಲ್ಲಿ ದೊಡ್ಡ 6,800mAh ಬ್ಯಾಟರಿ ನೀಡುವ ಸಾಧ್ಯತೆಯಿದೆ. 100W ಫಾಸ್ಟ್ ವೈರ್ಡ್ ಚಾರ್ಜಿಂಗ್ ಮತ್ತು ವೇಗವಾದ ವೈರ್ಲೆಸ್ ಚಾರ್ಜಿಂಗ್ ಬೆಂಬಲವೂ ಇರಲಿದೆ. ಜೊತೆಗೆ 2K LTPO OLED ಡಿಸ್ಪ್ಲೇ, ಹೈ ರಿಫ್ರೆಶ್ ರೇಟ್ ಮತ್ತು ಹೊಸ ಕನೆಕ್ಟಿವಿಟಿ ಫೀಚರ್‌ಗಳು ಕೂಡ ಇರಬಹುದು.
Also Read: Christmas Gifts 2025: ಈ ಕ್ರಿಸ್‌ಮಸ್ ಆಚರಣೆಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಅತ್ಯುತ್ತಮವಾದ ಗಿಫ್ಟ್ ನೀಡಬಹುದು
Xiaomi 17 Ultra ಮೊದಲು ಚೀನಾದಲ್ಲಿ ಇದೆ 25ನೇ ಡಿಸೆಂಬರ್ 2025 ರಂದು ಲಾಂಚ್ ಆಗಲಿದೆ. ನಂತರ ಇತರ ದೇಶಗಳಲ್ಲಿ ವಿಶೇಷವಾಗಿ ಭಾರತದಲ್ಲಿ 2026 ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು Xiaomi ಇತ್ತೀಚೆಗೆ ಅನುಸರಿಸುತ್ತಿರುವ ಲಾಂಚ್ ತಂತ್ರದಂತೆ ಆಗಿದೆ. ಅಧಿಕೃತ ಲಾಂಚ್ ಬಳಿಕ ಬೆಲೆ ಮತ್ತು ಭಾರತದಲ್ಲಿ ಲಭ್ಯತೆಯ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. ಸೇರಿಸು ಸ್ಮಾರ್ಟ್‌ಫೋನ್ ಪ್ರಿಯರು ಈ ಫೋನ್‌ಗಾಗಿ ಉತ್ಸುಕರಾಗಿದ್ದಾರೆ.