50MP ಟ್ರಿಪಲ್‌ ಕ್ಯಾಮೆರಾ ಇರುವ ದೈತ್ಯ Xiaomi 17 ಸ್ಮಾರ್ಟ್‌ಫೋನ್‌ ಖರೀದಿಗೆ ಇದುವೇ ಬೆಸ್ಟ್‌ ಆಫರ್‌!

HIGHLIGHTS

ಅಮೆಜಾನ್‌ನಲ್ಲಿ ಶಿಯೋಮಿ 17 ಮೊಬೈಲ್‌ಗೆ ಬಿಗ್ ಡಿಸ್ಕೌಂಟ್‌

ಶಿಯೋಮಿ 17 ಮೊಬೈಲ್‌ ಟ್ರಿಪಲ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ

ಈ ಫೋನ್‌ ಸ್ನಾಪ್‌ಡ್ರ್ಯಾಗನ್ 8 ಎಲೈಟ್ Gen 5 ಪ್ರೊಸೆಸರ್‌ ಹೊಂದಿದೆ

50MP ಟ್ರಿಪಲ್‌ ಕ್ಯಾಮೆರಾ ಇರುವ ದೈತ್ಯ Xiaomi 17 ಸ್ಮಾರ್ಟ್‌ಫೋನ್‌ ಖರೀದಿಗೆ ಇದುವೇ ಬೆಸ್ಟ್‌ ಆಫರ್‌!

ಗ್ರಾಹಕರ ನಿರೀಕ್ಷೆ ಹೆಚ್ಚಿಸಿರುವ Amazon Great Indian Festival Sale 2026 ಸೇಲ್ ಇದೇ ಅಕ್ಟೋಬರ್ 8 ರಂದು ಶುರುವಾಗಲಿದೆ. ಈ ಮಾರಾಟ ಪ್ರಾರಂಭಕ್ಕೂ ಮುನ್ನವೇ ಅಮೆಜಾನ್ ತಾಣವು ಮೊಬೈಲ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಆಫರ್‌ಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರು ಮುಖ್ಯ ಸೇಲ್ ಪ್ರಾರಂಭವಾಗುವ ಮೊದಲೇ ಕೆಲವು ಡಿವೈಸ್‌ಗಳನ್ನು ಖರೀದಿಸುವ ಅವಕಾಶವನ್ನು ಲಭ್ಯವಾಗಿದೆ. ಈ ಮಾರಾಟದಲ್ಲಿ ಶಿಯೋಮಿ 17 ಮೊಬೈಲ್‌ ಆಕರ್ಷಕ ಕೊಡುಗೆ ಪಡೆದಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಮೂಲಕ ಖರೀದಿದಾರರು ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಬಹುದು. ಹಾಗಾದರೆ ಅಮೆಜಾನ್‌ನಲ್ಲಿ ಶಿಯೋಮಿ 17 ಮೊಬೈಲ್‌ಗೆ ಲಭ್ಯವಿರುವ ಕೊಡುಗೆಯ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಕಡಿಮೆ ಬೆಲೆಯಲ್ಲಿ ಲಭ್ಯವಿರುವ Jio ಟೆಲಿಕಾಂನ ಈ ಪ್ಲಾನ್‌ ಉತ್ತಮವೇ? ಪ್ರತಿದಿನ 2GB ಡೇಟಾ ಸೌಲಭ್ಯ

Xiaomi 17 ಫೋನಿಗೆ ಭಾರೀ ಡಿಸ್ಕೌಂಟ್‌

ಶಿಯೋಮಿ ಕಂಪನಿಯ ಇತ್ತೀಚಿನ ಶಿಯೋಮಿ 17 ಸ್ಮಾರ್ಟ್‌ಫೋನ್ ಸದ್ಯದಲ್ಲೇ ಪ್ರಾರಂಭವಾಗಲಿರುವ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026 ಸೇಲ್‌ನಲ್ಲಿ ಬೊಂಬಾಟ್‌ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಾಗಲಿದೆ. ಅಮೆಜಾನ್‌ನಲ್ಲಿ ದೈತ್ಯ ಶಿಯೋಮಿ 17 ಮೊಬೈಲ್‌ನ 12GB + 512GB ವೇರಿಯಂಟ್‌ ಬೆಲೆ 1,19,999 ರೂ.ಗಳ ಬೆಲೆಯನ್ನು ಹೊಂದಿದೆ. ಆದರೆ ಪ್ರಸ್ತುತ ಇದರ ಬೆಲೆ 89,999 ರೂ.ಗಳು ಎಂದು ಲಿಸ್ಟ್‌ ಮಾಡಲಾಗಿದೆ.

Xiaomi 17

ಶಿಯೋಮಿ 17 ಮೊಬೈಲ್‌ ಫೀಚರ್ಸ್‌

ಶಿಯೋಮಿ 17 ಮೊಬೈಲ್‌ 6.3 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 3500 nits ಬ್ರೈಟ್ನೆಸ್‌ ಸೌಲಭ್ಯ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 8 ಎಲೈಟ್ Gen 5 ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್‌ IP68/IP69 ರೇಟಿಂಗ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಇದು 512GB ಸ್ಟೋರೇಜ್‌ ವೇರಿಯಂಟ್‌ ಸಪೋರ್ಟ್ ಪಡೆದಿದೆ.

ಹಾಗೆಯೇ ಶಿಯೋಮಿ 17 ಮೊಬೈಲ್‌ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮೂರು ಕ್ಯಾಮೆರಾಗಳು ಕ್ರಮವಾಗಿ 50MP + 50MP + 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇವೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಪಡೆದುಕೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 6330mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಸಪೋರ್ಟ್‌ ಹೊಂದಿರುವ ಜೊತೆಗೆ 100W ಹೈಪರ್‌ಚಾರ್ಜ್ ಸಪೋರ್ಟ್‌ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile