ನಾಳೆ ಭಾರತದಲ್ಲಿ Xiaomi 17 ಮತ್ತು Xiaomi 17 Ultra ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!

HIGHLIGHTS

ಶಿಯೋಮಿ 17 ಸರಣಿಯು ಮಾರ್ಚ್ 11 ರಂದು ಭಾರತದಲ್ಲಿ ಲಾಂಚ್‌ ಆಗಲಿದೆ

ಈ ಸರಣಿಯ ಫೋನ್‌ಗಳು Snapdragon 8 Elite Gen 5 ಪ್ರೊಸೆಸರ್‌ ಪಡೆದಿರಲಿವೆ

ಶಿಯೋಮಿ 17 ಅಲ್ಟ್ರಾ ಮೊಬೈಲ್‌ 200MP ಕ್ಯಾಮೆರಾ ಸೆನ್ಸಾರ್‌ ಸೌಲಭ್ಯ ಪಡೆದಿರಲಿದೆ

ನಾಳೆ ಭಾರತದಲ್ಲಿ Xiaomi 17 ಮತ್ತು Xiaomi 17 Ultra ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!

ಶಿಯೋಮಿ ಸಂಸ್ಥೆಯು ತನ್ನ ಬಹುನಿರೀಕ್ಷಿತ ಶಿಯೋಮಿ 17 ಸರಣಿಯು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸರಣಿಯು ನಾಳೆ (ಮಾರ್ಚ್ 11 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಅಂದಹಾಗೆ ಈ ಹೊಸ ಸರಣಿಯು Xiaomi 17 ಮತ್ತು Xiaomi 17 Ultra ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ಎರಡೂ ಮೊಬೈಲ್‌ಗಳು ಕ್ವಾಲ್ಕಾಮ್‌ನ ಉನ್ನತ ಶ್ರೇಣಿಯ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿವೆ. ಹಾಗೆಯೇ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮಾಡೆಲ್‌ಗಳು ಲೈಕಾ-ಟ್ಯೂನ್ಡ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಅಲ್ಲದೇ ಶಿಯೋಮಿ 17 ಅಲ್ಟ್ರಾ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಅನ್ನು ಸಹ ಒಳಗೊಂಡಿದೆ. ಹಾಗಾದರೆ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮೊಬೈಲ್‌ಗಳ ಲಾಂಚ್ ಡೇಟ್, ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Amazon EPL 2026 ಸೇಲ್‌: Redmi Note 15 5G ಖರೀದಿಸುವು ಪ್ಲಾನ್‌ ಇದ್ರೆ, ತಡ ಮಾಡಬೇಡಿ!

Xiaomi 17 ಸರಣಿ ಬಿಡುಗಡೆ ದಿನಾಂಕ ಹಾಗೂ ಇತರೆ

ನೂತನ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮೊಬೈಲ್‌ಗಳು ನಾಳೆ (ಮಾರ್ಚ್ 11 ರಂದು) ಭಾರತದಲ್ಲಿ ಲಾಂಚ್‌ ಆಗಲಿವೆ. ಶಿಯೋಮಿ 17 ಫೋನ್‌ ಆಲ್ಪೈನ್ ಪಿಂಕ್, ಕಪ್ಪು, ಐಸ್ ಬ್ಲೂ ಮತ್ತು ವೆಂಚರ್ ಗ್ರೀನ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಾಗಬಹುದು. ಅದೇ ರೀತಿ ಶಿಯೋಮಿ 17 ಅಲ್ಟ್ರಾ ಫೋನ್ ಬ್ಲ್ಯಾಕ್‌, ಸ್ಟಾರ್‌ಲಿಟ್ ಗ್ರೀನ್‌ ಮತ್ತು ವೈಟ್‌ ಬಣ್ಣಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಇನ್ನು ಈ ಸರಣಿಯು ಅಮೆಜಾನ್‌ ಇ ಕಾಮರ್ಸ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ.

Xiaomi 17

ಶಿಯೋಮಿ 17 ಮೊಬೈಲ್‌ ಫೀಚರ್ಸ್‌

ಶಿಯೋಮಿ 17 ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.3 ಇಂಚಿನ 1.5K OLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಫೋನ್‌ ಸ್ಕ್ರೀನ್‌ 3,500 nits ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ 2,656×1,220 ಪಿಕ್ಸಲ್‌ ರೆಸಲ್ಯೂಶನನ್ನು ಹೊಂದಿದೆ. ಹಾಗೆಯೇ ಈ ನೂತನ ಮೊಬೈಲ್‌ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯ ಪಡೆದಿದೆ. ಅಲ್ಲದೇ 100W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,330mAh ಬ್ಯಾಟರಿ ಪವರ್‌ ಹೊಂದಿದೆ. ಈ ಫೋನ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಅವುಗಳು ಕ್ರಮವಾಗಿ 50MP + 50MP + 50MP ಸೆನ್ಸಾರ್‌ ಪಡೆದಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಸಹ 50MP ಸೆನ್ಸಾರ್‌ ಹೊಂದಿದೆ.

ಶಿಯೋಮಿ 17 ಅಲ್ಟ್ರಾ ಫೋನಿನ ಫೀಚರ್ಸ್‌

ನೂತನ ಶಿಯೋಮಿ 17 ಅಲ್ಟ್ರಾ ಮೊಬೈಲ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.9 ಇಂಚಿನ 1.5K LTPO AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಫೋನ್‌ ಸ್ಕ್ರೀನ್‌ 1,060 nits ಪೀಕ್ ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ 3 ರಕ್ಷಣೆ ಹೊಂದಿದೆ. ಹಾಗೆಯೇ ಈ ಹೊಸ ಮೊಬೈಲ್‌ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯ ಪಡೆದಿದೆ. ಅಲ್ಲದೇ 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಜೊತೆಗೆ 6,000mAh ಬ್ಯಾಟರಿ ಪಡೆದಿದೆ. ಹಾಗೆಯೇ 22.5W ನಲ್ಲಿ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಈ ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಅನ್ನು ಹೊಂದಿದ್ದು ಅವುಗಳು ಕ್ರಮವಾಗಿ 200MP + 50MP + 50MP ಸೆನ್ಸಾರ್‌ ಒಳಗೊಂಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಸಹ 50MP ಸೆನ್ಸಾರ್‌ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo