Xiaomi 15 Ultra
Xiaomi 15 Ultra: ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2025) ಕ್ಕೂ ಮುನ್ನ Xiaomi ಜಾಗತಿಕ ಮಾರುಕಟ್ಟೆಗಳಲ್ಲಿ Xiaomi 15 Ultra ಅನ್ನು ಬಿಡುಗಡೆ ಮಾಡಿದೆ. ಜಾಗತಿಕ ಮಾರುಕಟ್ಟೆಗೂ ಮುನ್ನ Xiaomi 15 Ultra ಅನ್ನು ಫೆಬ್ರವರಿ 27 ರಂದು ಚೀನಾದಲ್ಲಿ ಬಿಡುಗಡೆ ಮಾಡಲಾಯಿತು. Xiaomi 15 ಸರಣಿಯಲ್ಲಿ 16GB RAM ಬೆಂಬಲವನ್ನು ಒದಗಿಸಲಾಗಿದೆ. ಅಲ್ಲದೆ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಪ್ರೊಸೆಸರ್ ಬೆಂಬಲವಾಗಿ ಒದಗಿಸಲಾಗಿದೆ. ಈ ಫೋನ್ 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಈ ಫೋನ್ 6.73-ಇಂಚಿನ WQHD+ ಡಿಸ್ಪ್ಲೇಯನ್ನು ಹೊಂದಿದ್ದು, ಇದು 1,440×3,200 ಪಿಕ್ಸೆಲ್‌ಗಳ ಕ್ವಾಡ್ ಕರ್ವ್ಡ್ LTPO AMOLED ನೊಂದಿಗೆ ಬರುತ್ತದೆ. ಫೋನ್ 120Hz ರಿಫ್ರೆಶ್ ದರ ಮತ್ತು 3200nits ಗರಿಷ್ಠ ಹೊಳಪನ್ನು ಹೊಂದಿದೆ. ಇದು ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ಹೈಪರ್ಓಎಸ್ 2 ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
Also Read: UPI Lite Update: ಯುಪಿಐ ಬಳಕೆದಾರರಿಗೆ ಹೊಸ ‘Transfer Out’ ಫೀಚರ್ ಪರಿಚಯ! ಇದರ ವಿಶೇಷತೆಗಳೇನು?
ಈ ಫೋನ್ ನಾಲ್ಕು ವರ್ಷಗಳ OS ನವೀಕರಣಗಳೊಂದಿಗೆ ಬರುತ್ತದೆ. ಅಲ್ಲದೆ, ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ನೀಡಲಾಗಿದೆ. ಯುಫೋನ್ 16GB LPDDR5x RAM ನೊಂದಿಗೆ ಬರುತ್ತದೆ. ಅಲ್ಲದೆ ಫೋನ್ 5410mAh ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ.
ಅಲ್ಲದೆ ಕ್ವಾಡ್-ಕ್ಯಾಮೆರಾ ವ್ಯವಸ್ಥೆಯು 50MP 1-ಇಂಚಿನ ಲೈಕಾ ಮುಖ್ಯ ಕ್ಯಾಮೆರಾ, 70mm ಫ್ಲೋಟಿಂಗ್ ಟೆಲಿಫೋಟೋ ಕ್ಯಾಮೆರಾ, 100mm 200MP ಅಲ್ಟ್ರಾ-ಟೆಲಿಫೋಟೋ ಕ್ಯಾಮೆರಾ ಮತ್ತು 14mm ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಇದು 120fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್, 60fps ನಲ್ಲಿ Dolby Vision ಮತ್ತು ವೃತ್ತಿಪರ-ಗುಣಮಟ್ಟದ ವೀಡಿಯೊಗಳಿಗಾಗಿ ಸುಧಾರಿತ ಸ್ಥಿರೀಕರಣ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. 16GB RAM ಮತ್ತು 512GB ಸ್ಟೋರೇಜ್ ಹೊಂದಿರುವ ಮೂಲ ಮಾದರಿ EUR 1,499 (ಸರಿಸುಮಾರು ರೂ. 1,36,100) ರೂಗಳಾಗಿವೆ.
Xiaomi 15 ಅಲ್ಟ್ರಾ ಫೋಟೋಗ್ರಫಿ ಕಿಟ್ ಲೆಜೆಂಡ್ ಆವೃತ್ತಿಯು ಕ್ಯಾಮೆರಾ-ಪ್ರೇರಿತ ಹಿಡಿತ, ಶಟರ್ ಬಟನ್‌ಗಳು ಮತ್ತು ವಿಸ್ತೃತ ಬಳಕೆಗಾಗಿ ಹೆಚ್ಚುವರಿಈ ಫೋನ್ 50ಮೆಗಾಪಿಕ್ಸೆಲ್ ಸೋನಿ IMX858 ಟೆಲಿಫೋಟೋ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಅಲ್ಲದೆ 200 ಮೆಗಾಪಿಕ್ಸೆಲ್ ISOCELL HP9 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು OIS ಮತ್ತು 4.3x ಆಪ್ಟಿಕಲ್ ಜೂಮ್‌ನೊಂದಿಗೆ ಹೊಂದಿದೆ. ಈ ಫೋನ್ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. Xiaomi 15 Ultra ಸ್ಮಾರ್ಟ್ಫೋನ್ ಫೋಟೋಗ್ರಾಫಿ ಉತ್ಸಾಹಿಗಳಿಗೆ ಸೂಕ್ತವಾಗಿದೆ. ಬಾಳಿಕೆ ಬರುವ ಗ್ಲಾಸ್ ಫೈಬರ್ ಮತ್ತು PU ಚರ್ಮದ ಮುಕ್ತಾಯದೊಂದಿಗೆ ಲೈಕಾ-ಪ್ರೇರಿತ ವಿನ್ಯಾಸವನ್ನು ಹೊಂದಿದೆ.