ಚೀನಾ ಮೂಲಕ Xiaomi ಕಂಪನಿಯು ಹಲವು ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಆ ಪೈಕಿ Xiaomi 14 Civi ಸಹ ಒಂದಾಗಿದೆ. ಸದ್ಯ ಈ ಆಕರ್ಷಕ ಮೊಬೈಲ್ Flipkart ಇ ಕಾಮರ್ಸ್ ತಾಣದಲ್ಲಿ ಭರ್ಜರಿ ಬೆಲೆ ಇಳಿಕೆ ದರದಲ್ಲಿ ಖರೀದಿಗೆ ಲಭ್ಯವಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಸಹ ಲಭ್ಯವಾಗಲಿದೆ. ಇನ್ನು ಈ ಮೊಬೈಲ್ ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿರುವ ಜೊತೆಗೆ ಹಿಂಬಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಕ್ವಾಲ್ಕಮ್ Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. Flipkart ಪ್ಲಾಟ್‌ಫಾರ್ಮ್ ನಲ್ಲಿ ಈ ಫೋನಿಗೆ ಲಭ್ಯ ಇರುವ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಶೀಘ್ರದಲ್ಲೇ Google Pixel 10a ಬಿಡುಗಡೆ! ನಿರೀಕ್ಷಿತ ಫೀಚರ್ಸ್ ಮತ್ತು ಬೆಲೆ ಮಾಹಿತಿ ಇಲ್ಲಿದೆ
Xiaomi ಬ್ರ್ಯಾಂಡ್‌ನ Xiaomi 14 Civi ಮೊಬೈಲ್ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. Flipkart ಇ ಕಾಮರ್ಸ್ ತಾಣದಲ್ಲಿ 12 GB RAM + 512 GB ವೇರಿಯಂಟ್‌ನ ಈ ಮೊಬೈಲ್ 59,999 ರೂಗಳ ಪ್ರೈಸ್‌ಟ್ಯಾಗ್ ಹೊಂದಿದ್ದು, ಆದರೆ ಇದೀಗ 36,999 ರೂಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಪಡೆಯಬಹುದು. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ಭಿನ್ನ ಯೋಜನೆಗಳ EMI ಆಯ್ಕೆಗಳನ್ನು ಪಡೆಯಬಹುದು. ಇನ್ನು ಈ ಫೋನ್ ಪಾಂಡಾ ವೈಟ್, ಹಾಟ್ ಪಿಂಕ್ ಹಾಗೂ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
Xiaomi 14 Civi ಮೊಬೈಲ್ 6.55 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ 1.5K ರೆಸಲ್ಯೂಶನ್ ಮತ್ತು 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಹೊಂದಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 3,000 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸೌಲಭ್ಯ ಒಳಗೊಂಡಿದೆ. ಇದು HDR10+ ಮತ್ತು ಡಾಲ್ಬಿ ವಿಷನ್ ಸಪೋರ್ಟ್ ಕೂಡಾ ಪಡೆದಿರುವ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ವ್ಯವಸ್ಥೆ ಹೊಂದಿದೆ. ಈ ಮೊಬೈಲ್ ಕ್ವಾಲ್ಕಮ್ Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 12GB RAM ಮತ್ತು 512GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ Xiaomi 14 Civi ಮೊಬೈಲ್ ಕ್ಯಾಮೆರಾ ವಿಭಾಗದಿಂದಲೂ ಗಮನ ಸೆಳೆಯುವಂತೆ ಇದೆ. ಈ ಫೋನ್ 50MP ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು ಹಾಗೆಯೇ ಇದರ ಸೆಕೆಂಡರಿ 50MP ಪೆರಿಸ್ಕೋಪ್ ಟೆಲಿಫೋಟೋ ಪಡೆದಿದೆ. ಅಲ್ಲದೇ ತೃತೀಯ ಕ್ಯಾಮೆರಾವು 12MP ಅಲ್ಟ್ರಾವೈಡ್ ಸೆನ್ಸರ್ ಸೌಲಭ್ಯ ಅನ್ನು ಪಡೆದಿವೆ. ಮುಂಭಾಗದಲ್ಲಿ ಸೆಲ್ಫಿಗಾಗಿ ಈ ಫೋನ್ 32MP ಯ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 4,700mAh ಬ್ಯಾಟರಿ ಮತ್ತು 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.