Cinematic ಕ್ಯಾಮೆರಾಗಳೊಂದಿಗೆ Xiaomi 14 Civi ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಫೀಚರ್‌ಗಳೇನು?

Updated on 27-May-2024
HIGHLIGHTS

ಭಾರತದಲ್ಲಿ Xiaomi ಸ್ಮಾರ್ಟ್ಫೋನ್ ಬ್ರಾಂಡ್ ತಲ್ಲ ಲೇಟೆಸ್ಟ್ ಸ್ಮಾಟ್ಫೋನ್ ಅನ್ನನ್ ಬಿಡುಗಡೆಗೊಳಿಸಲು ಸಜ್ಜಾಗಿದೆ.

Xiaomi 14 Civi ಸ್ಮಾರ್ಟ್ಫೋನ್ ಮುಂದಿನ ತಿಂಗಳು 12ನೇ ಜೂನ್ 2024 ರಂದು ಬಿಡುಗಡೆಯಾಗಲು ಸಜ್ಜಾಗಿದೆ.

120Hz ರಿಫ್ರೆಶ್ ದರದೊಂದಿಗೆ ಸ್ಮಾರ್ಟ್ಫೋನ್ ಕ್ವಾಡ್-ಕರ್ವ್ಡ್ 1.5K AMOLED 120Hz ಡಿಸ್ಪ್ಲೇಯನ್ನು ಹೊಂದಲಿದೆ.

ಭಾರತದಲ್ಲಿ ಅತಿ ಶೀಘ್ರದಲ್ಲೇ Xiaomi ಸ್ಮಾರ್ಟ್ಫೋನ್ ಬ್ರಾಂಡ್ ತಲ್ಲ ಲೇಟೆಸ್ಟ್ ಸ್ಮಾಟ್ಫೋನ್ ಅನ್ನನ್ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದನ್ನು ಕಂಪನಿ Xiaomi 14 Civi ಎಂದು ಹೆಸರಿಸಿದ್ದು ಬಿಡುಗಡೆಗೂ ಮುಂಚೆಯೇ ಇದರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ನೀಡಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಅಂತಿಮವಾಗಿ ಭಾರತದಲ್ಲಿ ಸಾಧನದ ಬಿಡುಗಡೆ ದಿನಾಂಕವನ್ನು ದೃಢಪಡಿಸಿದ್ದಾರೆ. ಈ Xiaomi 14 Civi ಸ್ಮಾರ್ಟ್ಫೋನ್ ಮುಂದಿನ ತಿಂಗಳು 12ನೇ ಜೂನ್ 2024 ರಂದು ಬಿಡುಗಡೆಯಾಗಲು ಸಜ್ಜಾಗಿದೆ.

Xiaomi 14 Civi ಸ್ಮಾರ್ಟ್ಫೋನ್ ಟೀಸರ್ ಪೋಸ್ಟ್‌ನಿಂದ ಫೋನ್‌ನ ಕ್ಯಾಮೆರಾ ಅತಿ ಅದ್ಭುತವಾಗಿರಲಿದ್ದು ಸಿನಿಮ್ಯಾಟಿಕ್ ಲುಕ್ ಅನುಭವವನ್ನು ನೀಡುವ ಬಗ್ಗೆ ಮಾಹಿತಿ ಹೊಸ ಬಂದಿದೆ. ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ನೀಡಲಾಗಿದೆ. ಅದರೊಳಗೆ ಲೈಕಾ ಆಪ್ಟಿಕ್ಸ್ (Leica Optics) ಅನ್ನು ಕಾಣಬಹುದು. ಕಂಪನಿ ಈ ಸ್ಮಾರ್ಟ್ಫೋನ್ ಅನ್ನು ಕ್ರೂಸ್ ಬ್ಲೂ, ಮ್ಯಾಚಾ ಗ್ರೀನ್ ಮತ್ತು ಶ್ಯಾಡೋ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ರೂಪಾಂತರಗಗಳಲ್ಲಿ ಲೇವಡಿ ಮಾಡಿದೆ.

Also Read: Vote without Voter ID: ಲೋಕಸಭೆ ಚುನಾವಣೆಯಲ್ಲಿ ವೋಟರ್ ಕಾರ್ಡ್ ಇಲ್ಲದೆ ಮತದಾನ ಮಾಡುವುದು ಹೇಗೆ?

Xiaomi 14 Civi confirmed to launch in India 2024

ಭಾರತದಲ್ಲಿ Xiaomi 14 Civi ನಿರೀಕ್ಷಿತ ವಿಶೇಷಣಗಳು

ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಮತ್ತು 120Hz ರಿಫ್ರೆಶ್ ದರದೊಂದಿಗೆ ಸಾಧನವು ಕ್ವಾಡ್-ಕರ್ವ್ಡ್ 1.5K AMOLED 120Hz ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು Xiaomi ದೃಢಪಡಿಸಿದೆ. ಹ್ಯಾಂಡ್‌ಸೆಟ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಲೋಹದ ಚೌಕಟ್ಟನ್ನು ಹೊಂದಿರುತ್ತದೆ ಮತ್ತು 7.6 ಎಂಎಂ ದಪ್ಪವಾಗಿರುತ್ತದೆ. ಹೆಚ್ಚುವರಿಯಾಗಿ Xiaomi 14 Civi ಮುಂಭಾಗದಲ್ಲಿ 32MP ಪ್ರೈಮರಿ + 32MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಸ್ಮಾರ್ಟ್ಫೋನ್ Snapdragon 8s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು Xiaomi HyperOS ನಲ್ಲಿ ರನ್ ಆಗುತ್ತದೆ ಎಂದು ದೃಢಪಡಿಸಲಾಗಿದೆ.

ಸ್ಮಾರ್ಟ್ಫೋನ್ ತ್ರಿಅಪ್ಲ್ ಕ್ಯಾಮೆರಾ ಸೆಟಪ್ ಜೊತೆಗೆ ಮೊದಲಿಗೆ 50MP ಪ್ರೈಮರಿ ಕ್ಯಾಮೆರಾದೊಂದಿಗೆ 50MP ಟೆಲಿಫೋಟೋ ಲೆನ್ಸ್ ಮತ್ತು ಕೊನೆಯದಾಗಿ 12MP ಅಲ್ಟ್ರಾವೈಡ್ ಲೆನ್ಸ್ ಅನ್ನು ನೀಡಲಾಗಿದೆ. ಇದರ ಕ್ರಮವಾಗಿ ಈ ಸ್ಮಾರ್ಟ್ಫೋನ್ ಮುಂಭಾಗದಲ್ಲಿ 32MP ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ. ಅಲ್ಲದೆ ಫೋನ್ 67W ಚಾರ್ಜಿಂಗ್‌ನೊಂದಿಗೆ 4,700mAh ಬ್ಯಾಟರಿಯನ್ನು ಪಡೆಯಬಹುದು. ಈ ಸ್ಮಾರ್ಟ್ಫೋನ್ ಸಂಪರ್ಕಕ್ಕಾಗಿ ಹ್ಯಾಂಡ್‌ಸೆಟ್ Wi-Fi 6, ಬ್ಲೂಟೂತ್ 5.4, NFC ಮತ್ತು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ USB ಟೈಪ್-C ಪೋರ್ಟ್ ಅನ್ನು ಪಡೆಯಬಹುದು. ಫೋನ್ 12GB ವರೆಗೆ LPDDR5X RAM ಮತ್ತು 512GB UFS 4.0 ಸ್ಟೋರೇಜ್ ಅನ್ನು ನೀಡಬಹುದು.

Xiaomi 14 Civi confirmed to launch in India 2024

ಭಾರತದಲ್ಲಿ Mi 14 Civi ನಿರೀಕ್ಷಿತ ಬೆಲೆ

ಪ್ರಸ್ತುತ ಸೋರಿಕೆಯ ವರದಿಗಳ ಪ್ರಕಾರ ಈ ಫೋನ್ Xiaomi Civi ಬೆಲೆಯ ಬಗ್ಗೆ ಮಾತಾನಾನಾಡುವುದಾದರೆ ಇದರ ಬೆಲೆ 2,999 ಯುವಾನ್ ಅಂದರೆ ಸುಮಾರು 35,000 ರೂಗಳಿಗೆ ನಿರೀಕ್ಷಿಸಬಹುದು. ಮುಂದಿನ ತಿಂಗಳು ಅಂದ್ರೆ ಮುಂದಿನ ಜೂನ್‌ನಲ್ಲಿ ಬಿಡುಗಡೆಯಾಗಲಿರುವ Xiaomi 14 ಸರಣಿಯ ಎಲ್ಲಾ ಹ್ಯಾಂಡ್‌ಸೆಟ್‌ಗಳನ್ನು ಸುಮಾರು 50,000 ರೂಗಳಿಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಬಹುದು ಎಂದು ಟಿಪ್‌ಸ್ಟರ್ ಅಭಿಷೇಕ್ ಯಾದವ್ ತಿಳಿಸಿದ್ದಾರೆ. Xiaomi ಕಂಪನಿಯ ಈ ಸ್ಮಾರ್ಟ್ಫೋನ್ ಈಗಾಗಲೇ ಭಾರತದ ಮರುಕಾಟ್ಟೆಯಲ್ಲಿರುವ Samsung Galaxy S23, iQOO 12 5G ಮತ್ತು OnePlus 12R ಸ್ಮಾರ್ಟ್ಫೋನ್‌ಗಳೊಂದಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುವ ನಿರೀಕ್ಷೆಗಳಿವೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :