Vivo Y500 ಸ್ಮಾರ್ಟ್ ಫೋನ್ ಬರೋಬ್ಬರಿ 8200mAh ಬ್ಯಾಟರಿಯೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್!

Updated on 26-Aug-2025
HIGHLIGHTS

ವಿವೋ (Vivo) ತನ್ನ ಮುಂಬರಲಿರುವ Vivo Y500 ಸ್ಮಾರ್ಟ್ ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್ ಮಾಡಿದೆ.

Vivo Y500 ಸ್ಮಾರ್ಟ್ ಫೋನ್ ಬರೋಬ್ಬರಿ 8200mAh ಬ್ಯಾಟರಿಯೊಂದಿಗೆ ಪರಿಚಯಿಸುದಾಗಿ ಹೇಳಲಾಗುತ್ತಿದೆ.

ವಿವೋ ಕಂಪನಿಯು ಚೀನಾದ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ವೀಬೊ ಮೂಲಕ ದೃಢಪಡಿಸಿದೆ.

ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ತನ್ನ ಮುಂಬರಲಿರುವ Vivo Y500 ಸ್ಮಾರ್ಟ್ ಫೋನ್ ಬರೋಬ್ಬರಿ 8200mAh ಬ್ಯಾಟರಿಯೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದೆ. ಇದನ್ನು ಕಂಪನಿಯು ಚೀನಾದ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ವೀಬೊ ಮೂಲಕ ದೃಢಪಡಿಸಿದೆ. ಈ ಫೋನ್ ಕಂಪನಿಯ ವೈ-ಸರಣಿಗೆ ಹೊಸ ಸೇರ್ಪಡೆಯಾಗಲಿದೆ. ಇದರಲ್ಲಿ ಬಿಡುಗಡೆ ದಿನಾಂಕದ ಹೊರತಾಗಿ ಕಂಪನಿಯು ಫೋನ್‌ನ ಕೆಲವು ವಿಶೇಷಣಗಳು ಮತ್ತು ಫೋಟೋಗಳನ್ನು ಸಹ ಹಂಚಿಕೊಂಡಿದೆ. ಫೋನ್ ವೃತ್ತಾಕಾರದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ.

Vivo Y500 ಸ್ಮಾರ್ಟ್ ಫೋನ್ ಯಾವಾಗ ಬಿಡುಗಡೆಯಾಗಲಿದೆ?

ಈ ಮುಂಬರಲಿರುವ ಸ್ಮಾರ್ಟ್ ಫೋನ್ ಈಗಾಗಲೇ ವೀಬೊದಲ್ಲಿನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಚೀನಾದ ಸ್ಮಾರ್ಟ್‌ಫೋನ್ ತಯಾರಕ Vivo Y500 ಸ್ಮಾರ್ಟ್ ಫೋನ್ ಇದೆ 1ನೇ ಸೆಪ್ಟೆಂಬರ್ 2025 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದೆ. ಈ ಫೋನ್ ಬೃಹತ್ 8,200mAh ಬ್ಯಾಟರಿಯನ್ನು ಪ್ಯಾಕ್ ಮಾಡಲಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಮುಂಬರುವ ಹ್ಯಾಂಡ್‌ಸೆಟ್ ‘IP69+’ ರೇಟಿಂಗ್‌ನೊಂದಿಗೆ ಬರಲಿದ್ದು ಧೂಳು ಮತ್ತು ನೀರಿನ ಪ್ರತಿರೋಧವನ್ನು ನೀಡುತ್ತದೆ. ವಿವೋ ವೈ500 ಸ್ಮಾರ್ಟ್‌ಫೋನ್ SGS ಗೋಲ್ಡ್ ಲೇಬಲ್ ಫೈವ್-ಸ್ಟಾರ್ ಡ್ರಾಪ್ ಮತ್ತು ಇಂಪ್ಯಾಕ್ಟ್ ರೆಸಿಸ್ಟೆನ್ಸ್ ಪ್ರಮಾಣೀಕರಣವನ್ನು ಸಹ ಪಡೆದುಕೊಂಡಿದೆ.

Vivo Y500 Launch

ವಿವೋ Y500 ನಿರೀಕ್ಷಿತ ಫೀಚರ್ಗಳೇನು?

ಈ ಫೋನ್ ‘ಮಿಲಿಟರಿ ಸ್ಟ್ಯಾಂಡರ್ಡ್ ಎನ್ವಿರಾನ್ಮೆಂಟಲ್ ಟೆಸ್ಟಿಂಗ್’ ಗೆ ಒಳಗಾಗಿದೆ ಎಂದು ಕಂಪನಿ ಹೇಳುತ್ತದೆ. ಫೋನ್‌ನ 8,200mAh ಬ್ಯಾಟರಿಯು -20 ಡಿಗ್ರಿ ಸೆಲ್ಸಿಯಸ್‌ವರೆಗಿನ ಕಡಿಮೆ ತಾಪಮಾನದಲ್ಲಿ 16.7 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಮತ್ತು 40 ಡಿಗ್ರಿ ಸೆಲ್ಸಿಯಸ್‌ವರೆಗಿನ ಬಿಸಿ ತಾಪಮಾನದಲ್ಲಿ 17 ಗಂಟೆಗಳ ನ್ಯಾವಿಗೇಷನ್ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 18 ಗಂಟೆಗಳ ಬಳಕೆಯ ನಂತರವೂ ಫೋನ್‌ನಲ್ಲಿ ಇನ್ನೂ 37% ಪ್ರತಿಶತ ಬ್ಯಾಟರಿ ಉಳಿದಿದೆ ಎಂದು ವಿವೋ ತೋರಿಸಿದೆ.

Also Read: ಭಾರತದಲ್ಲಿ Flipkart Black ಬಿಡುಗಡೆ, ಪೂರ್ತಿ 1 ವರ್ಷಕ್ಕೆ ಉಚಿತ YouTube Premium

ಮುಂಬರುವ Y500 ಅನ್ನು 62,000 ಬಾರಿ ಮೈಕ್ರೋ-ಡ್ರಾಪ್ ಪರೀಕ್ಷಿಸಲಾಗಿದೆ ಮತ್ತು 1.7 ಮೀಟರ್ ಎತ್ತರದಿಂದ ಆರು ಬದಿಗಳು ಮತ್ತು ನಾಲ್ಕು ಮೂಲೆಗಳಲ್ಲಿ ಗ್ರಾನೈಟ್ ಡ್ರಾಪ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ವಿವೋ ಹೇಳುತ್ತದೆ. ವಿವೋ Y500 ನೀಲಿ, ಗುಲಾಬಿ ಮತ್ತು ಕಪ್ಪು ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ಚೀನೀ ತಂತ್ರಜ್ಞಾನ ಕಂಪನಿ ತಿಳಿಸಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :