Vivo Y300i 5G launched
Vivo Y300i 5G launched: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ತನ್ನ ತಾಯ್ನಾಡಾದ ಚೀನಾದಲ್ಲಿ ಹೊಸ Vivo Y300i 5G ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಅನೇಕ ಇಂಟ್ಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವುದರೊಂದಿಗೆ ಕೈಗೆಟಕುವ ಬೆಲೆಗೆ ಪರಿಚಯಿಸಲಾಗಿದೆ. Vivo Y300i 5G ಸ್ಮಾರ್ಟ್ಫೋನ್ ಒಟ್ಟು 3 ಬಣ್ಣಗಳಲ್ಲಿ ಲಭ್ಯವಿದ್ದು 6500mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್, 120Hz ರಿಫ್ರೆಶ್ ರೇಟ್ ಮತ್ತು 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಬೆಲೆ ಎಷ್ಟು ಮತ್ತು ಇದರ ವಿಶೇಷತೆಗಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಈ Vivo Y300i 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ CNY 1,499 (ರೂ. 18,000) ಆಗಿದ್ದು ಕ್ರಮವಾಗಿ 12GB RAM ಮತ್ತು 256GB ಸ್ಟೋರೇಜ್ CNY 1599 (ರೂ. 19,000) ಮತ್ತು ಕೊನೆಯದಾಗಿ 12GB RAM ಮತ್ತು 512GB ಸ್ಟೋರೇಜ್ CNY 1799 (ರೂ. 21,720) ಆಗಿದೆ. ಫೋನ್ ಬ್ಲ್ಯಾಕ್ ಜೇಡ್, ರೈಮ್ ಬ್ಲೂ ಮತ್ತು ಟೈಟಾನಿಯಂ ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ. ಇದು 14ನೇ ಮಾರ್ಚ್ 2025 ವಿವೋದ ಚೀನಾ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.
Vivo Y300i 5G ಸ್ಮಾರ್ಟ್ಫೋನ್ 6.68 ಇಂಚಿನ HD+ (720×1,608 ಪಿಕ್ಸೆಲ್‌ಗಳು) LCD ಡಿಸ್ಪ್ಲೇಯನ್ನು 120Hz ವರೆಗಿನ ರಿಫ್ರೆಶ್ ದರ ಮತ್ತು 90.34 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದರಲ್ಲಿ 50MP ಪ್ರೈಮರಿ ಕ್ಯಾಮೆರಾ CMOS ಸೆನ್ಸರ್ ಹೊಂದಿದ್ದು ಇದರ ಹಿಂಭಾಗದಲ್ಲಿ f/1.8 ಅಪರ್ಚರ್ ಇನ್ಫ್ರಾರೆಡ್ ರಿಮೋಟ್ ಕಂಟ್ರೋಲ್ ಮಾಡ್ಯೂಲ್ ಜೊತೆಗೆ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ f/2.2 ಅಪರ್ಚರ್ ಹೊಂದಿರುವ 5MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
Also Read: 60 ಗಂಟೆಗಳ ಬ್ಯಾಟರಿ ಮತ್ತು Dolby Audio ಬೆಂಬಲಿಸುವ ಹೊಸ Mivi TWS ಇಯರ್ಬಡ್ಸ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಸ್ಮಾರ್ಟ್ಫೋನ್ ಸೆಕ್ಯುರಿಟಿಗಾಗಿ ಫೇಸ್ ಲಾಕ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ 4nm ಆಕ್ಟಾ-ಕೋರ್ Snapdragon 4 Gen 2 ಪ್ರೊಸೆಸರ್ನೊಂದಿಗೆ ಆಂಡ್ರಾಯ್ಡ್ 15 ಅಡಿಯಲ್ಲಿ ನಡೆಯುತ್ತದೆ. ಕೊನೆಯದಾಗಿ 44W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 6,500mAh ಬ್ಯಾಟರಿಯನ್ನು ಹೊಂದಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿದೆ.