ನಾಳೆ ಮಾರುಕಟ್ಟೆಗೆ ಬರಲಿದೆ Vivo X500 ಸ್ಮಾರ್ಟ್‌ಫೋನ್‌ ಸರಣಿ! ಅಚ್ಚರಿಯ ಫೀಚರ್ಸ್‌ ನಿರೀಕ್ಷೆ

ವಿವೋ ಮೊಬೈಲ್‌ ಕಂಪನಿಯು ಹೊಸದಾಗಿ Vivo X500 ಸರಣಿ ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ವಿವೋ ಸಂಸ್ಥೆಯು ತನ್ನ ಈ ನೂತನ ಮೊಬೈಲ್‌ ಸರಣಿಯನ್ನು ನಾಳೆ (ನವೆಂಬರ್ 25 ರಂದು) ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಸರಣಿ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಇನ್ನು ಈ ಸರಣಿಯು ವಿವೋ X500, ವಿವೋ X500 ಪ್ರೊ ಹಾಗೂ ವಿವೋ X500 ಪ್ರೊ ಮ್ಯಾಕ್ಸ್‌ ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಈ ಮೊಬೈಲ್‌ ಸರಣಿಯ ಹೈ ಎಂಡ್‌ ವೇರಿಯಂಟ್‌ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವ ನಿರೀಕ್ಷೆಗಳು ಇವೆ. ಹಾಗೆಯೇ ಆಕರ್ಷಕ ಕಲರ್‌ ಆಯ್ಕೆಯೊಂದಿಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ. ಹಾಗಾದರೇ ವಿವೋ X500 ಮೊಬೈಲ್‌ ಸರಣಿಯ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

ನಾಳೆ ಮಾರುಕಟ್ಟೆಗೆ ಬರಲಿದೆ Vivo X500 ಸರಣಿ

ದೇಶೀಯ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ವಿವೋ X500 ಸರಣಿಯ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಮೊಬೈಲ್‌ ಸರಣಿಯು ನಾಳೆ (ನವೆಂಬರ್ 25 ರಂದು) ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇನ್ನು ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆದಿದೆ. ಈ ಫೋನ್‌ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಒಳಗೊಂಡಿರಲಿದೆ.

ವಿವೋ X500 ನಿರೀಕ್ಷಿತ ಫೀಚರ್ಸ್‌

ವಿವೋ X500 ಮಾದರಿಯು 6.59 ಇಂಚಿನ 1.5K OLED ಡಿಸ್‌ಪ್ಲೇ ಹೊಂದಿರಲಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಕಾರ್ಯಕ್ಷಮತೆಗಾಗಿ Dimensity 9600M ಚಿಪ್‌ಸೆಟ್ ನೀಡಲಾಗಿದೆ ಎಂದು ವರದಿಯಾಗಿದೆ. ಬ್ಯಾಟರಿ ವಿಚಾರದಲ್ಲಿಯೂ ಈ ಫೋನ್ ಗಮನ ಸೆಳೆಯುತ್ತದೆ. ಇದರಲ್ಲಿ 7,500mAh ಸಾಮರ್ಥ್ಯದ ಬ್ಯಾಟರಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ 50MP ಪ್ರೈಮರಿ ಕ್ಯಾಮೆರಾ ಜೊತೆಗೆ ಪ್ರತ್ಯೇಕ ಟೆಲಿಫೋಟೋ ಸೆನ್ಸರ್ ಇರಲಿದೆ.

ವಿವೋ X500 ಪ್ರೊ ನಿರೀಕ್ಷಿತ ಫೀಚರ್ಸ್‌

ವಿವೋ X500 ಪ್ರೊ ಈ ಸರಣಿಯ ಕಾಂಪ್ಯಾಕ್ಟ್ ಮಾದರಿಯಾಗಿರಲಿದೆ. ಇದು 6.36 ಇಂಚಿನ 1.5K LTPO OLED ಡಿಸ್‌ಪ್ಲೇ ಹೊಂದಿದ್ದು, 144Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಈ ಫೋನ್‌ನಲ್ಲಿ 2nm ತಂತ್ರಜ್ಞಾನ ಆಧಾರಿತ Dimensity 9600 Pro ಪ್ರೊಸೆಸರ್ ಇರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ 6,510mAh ಬ್ಯಾಟರಿ ನೀಡುವ ನಿರೀಕ್ಷೆಯಿದೆ. ಫೋಟೋಗ್ರಫಿಗಾಗಿ 50MP ಪ್ರೈಮರಿ ಕ್ಯಾಮೆರಾ ಮತ್ತು ಪ್ರತ್ಯೇಕ ಟೆಲಿಫೋಟೋ ಸೆನ್ಸರ್ ಇರಲಿದೆ.

ವಿವೋ X500 ಪ್ರೊ ಮ್ಯಾಕ್ಸ್‌ ನಿರೀಕ್ಷಿತ ಫೀಚರ್ಸ್‌

ಈ ಸರಣಿಯ ಅತ್ಯುನ್ನತ ಮಾದರಿಯಾಗಿರುವ Vivo X500 Pro Max ಕ್ಯಾಮೆರಾ ಮತ್ತು ಡಿಸ್‌ಪ್ಲೇ ವಿಚಾರದಲ್ಲಿ ಹೆಚ್ಚು ವಿಶೇಷತೆಗಳನ್ನು ಹೊಂದಿರಲಿದೆ. ಚೀನಾದಲ್ಲಿ ಬಿಡುಗಡೆಯಾಗಲಿರುವ ಈ ಮಾದರಿಯ ನಿರೀಕ್ಷಿತ ಫೀಚರ್ಸ್ ಪ್ರಕಾರ, ಇದರಲ್ಲಿ 6.85 ಇಂಚಿನ 2K ರೆಸಲ್ಯೂಶನ್ ಹೊಂದಿರುವ 144Hz ಡಿಸ್‌ಪ್ಲೇ ಇರಲಿದೆ. Dimensity 9600 Pro ಚಿಪ್‌ಸೆಟ್ ಮತ್ತು 8,000mAh ಬ್ಯಾಟರಿ ಕೂಡ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50MP ಸೆಲ್ಫಿ ಕ್ಯಾಮೆರಾ ಇರಲಿವೆ ಎಂದು ವರದಿಯಾಗಿದೆ. ಇದರ ಪ್ರಮುಖ ಆಕರ್ಷಣೆ 200MP ZEISS APO ಟೆಲಿಫೋಟೋ ಲೆನ್ಸ್. ಇದು 3.5x ಆಪ್ಟಿಕಲ್ ಜೂಮ್ ಮತ್ತು CIPA 7.0 ಸ್ಟೆಬಿಲೈಸೇಶನ್ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಲಾಗಿದೆ.

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile