Vivo X300 Ultra and X300 FE India launch today May 6 India price to specs details
Vivo ಕಂಪನಿಯು ತನ್ನ X ಸರಣಿಗೆ ಈಗ ನೂತನವಾಗಿ Vivo X300 Ultra ದೈತ್ಯ ಸ್ಮಾರ್ಟ್‌ಫೋನ್ ಅನ್ನು ಸೇರ್ಪಡೆ ಮಾಡಲು ತಯಾರಾಗಿದೆ. ವಿವೋ ಸಂಸ್ಥೆಯ ನೂತನ ವಿವೋ X300 ಅಲ್ಟ್ರಾ ಮೊಬೈಲ್ ಇದೇ ಮೇ 6 ರಂದು ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಿಲಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಆಗಿದೆ. ಅಂದಹಾಗೆ ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೇ 6,600mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿರುವ ನಿರೀಕ್ಷೆಗಳು ಇವೆ. ಅಲ್ಲದೇ ಇದು ZEISS ಬೆಂಬಲಿತ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿರುವ ಸಾಧ್ಯತೆಗಳು ಇವೆ. ಹಾಗಾದರೇ ವಿವೋ X300 ಅಲ್ಟ್ರಾ ಮೊಬೈಲ್‌ನ ಸೇಲ್ ಡೇಟ್ ಹಾಗೂ ನಿರೀಕ್ಷಿತ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
Also Read : ಜಿಯೋದ ಈ ಪ್ಲಾನಿನಲ್ಲಿ 70GB Data ಸಿಗುತ್ತೆ! ಯೋಜನೆಯ ಬೆಲೆ 399 ರೂ.ಗಳು
Vivo ಸಂಸ್ಥೆಯ ಮುಂಬರುವ ನೂತನ ವಿವೋ X300 ಅಲ್ಟ್ರಾ ಸ್ಮಾರ್ಟ್‌ಫೋನ್ ಪ್ರಿಮಿಯಂ ಫ್ಲ್ಯಾಗ್‌ಶಿಪ್ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್ ಇದೇ ಮೇ 6 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಮೊಬೈಲ್ ಲಾಂಚ್ ಬಳಿಕ ಅಮೆಜಾನ್ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಸೇಲ್ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್ ಬ್ಲ್ಯಾಕ್ ಹಾಗೂ ವಿಕ್ಟರಿ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ.
ಮುಂಬರುವ ಹೊಸ ವಿವೋ X300 ಅಲ್ಟ್ರಾ ಸ್ಮಾರ್ಟ್‌ಫೋನ್ 6.82 ಇಂಚಿನ 1.5K LTPO AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, 120Hz ರಿಫ್ರೆಶ್ ರೇಟ್ ಸಪೋರ್ಟ್ ಹೊಂದಿರಲಿದೆ. ಅಲ್ಲದೇ ಈ ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 200MP ಹಾಗೂ 50MP ಸೆನ್ಸಾರ್ ಬಲದಲ್ಲಿ ಇರಲಿವೆ.
ಇನ್ನು ವಿವೋ X300 ಅಲ್ಟ್ರಾ ಸ್ಮಾರ್ಟ್‌ಫೋನ್ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 200MP ಸೆನ್ಸಾರ್‌ನ ಕ್ಯಾಮೆರಾ ಪಡೆದಿರಲಿದೆ. ಈ ಮೊಬೈಲ್ 6,600mAh ಸಾಮರ್ಥ್ಯದ ಬ್ಯಾಟರಿ ಪವರ್ ಹೊಂದಿರಲಿದೆ. ಇದಕ್ಕೆ ಪೂರಕವಾಗಿ ಈ ಮೊಬೈಲ್ 100W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಸಹ ಒಳಗೊಂಡಿರಲಿದೆ ಎನ್ನಲಾಗಿದೆ.