ಜನಪ್ರಿಯ Vivo X300 Pro ಮೊಬೈಲ್ ಬೆಲೆಯಲ್ಲಿ ಜಬರ್ದಸ್ತ್ ಇಳಿಕೆ; ಈ ಫೋನ್ ಖರೀದಿ ಮಾಡ್ತೀರಾ?
ಫ್ಲಿಪ್‌ಕಾರ್ಟ್‌ನಲ್ಲಿ ವಿವೋ X300 ಪ್ರೊ ಫೋನ್‌ಗೆ ಅತ್ಯುತ್ತಮ ಡಿಸ್ಕೌಂಟ್
ವಿವೋ X300 ಪ್ರೊ ಮೊಬೈಲ್ 6510 mAh ಬ್ಯಾಟರಿ ಸಪೋರ್ಟ್ ಪಡೆದಿದೆ
ವಿವೋನ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್ ಹೊಂದಿದೆ
ವಿವೋ ಕಂಪನಿಯ ಪ್ರೀಮಿಯಂ ಮೊಬೈಲ್‌ಗಳ ಪೈಕಿ ಒಂದಾದ Vivo X300 Pro ಸ್ಮಾರ್ಟ್‌ಫೋನ್ ಇದೀಗ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಸಖತ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಕಂಪನಿಯ ಈ ಮೊಬೈಲ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಮೊಬೈಲ್ 6510 mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಫೋನ್ ಇಲೈಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಸಿಗಲಿದೆ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ವಿವೋ X300 ಪ್ರೊ ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : OnePlus ಕಂಪನಿಯ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಭಾರೀ ರಿಯಾಯಿತಿ!
Vivo X300 Pro ಬೆಲೆಯಲ್ಲಿ ಭಾರೀ ಡಿಸ್ಕೌಂಟ್
ಆಕರ್ಷಕ ಫೀಚರ್ಸ್ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ ವಿವೋ X300 ಪ್ರೊ ಮೊಬೈಲ್ ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಭರ್ಜರಿ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 16GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ 1,19,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 1,15,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಈ ಫೋನ್ ಇಲೈಟ್ ಬ್ಲ್ಯಾಕ್ ಕಲರ್ ಆಯ್ಕೆ ಹೊಂದಿದೆ.

ವಿವೋ X300 ಪ್ರೊ ಮೊಬೈಲ್ ಫೀಚರ್ಸ್ ಹೀಗಿವೆ
ವಿವೋ X300 ಪ್ರೊ ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.78 ಇಂಚಿನ LTPO ಕರ್ವ್ಡ್ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 2800 × 1260 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಈ ಮೊಬೈಲ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 16 ಸಪೋರ್ಟ್ ಒಳಗೊಂಡಿದೆ. ಅಲ್ಲದೇ ಇದು 16GB RAM + 512GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ ವಿವೋ X300 ಪ್ರೊ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಈ ಫೋನ್ ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಹಿಂಭಾಗದಲ್ಲಿ 50MP + 50MP ಸೆನ್ಸಾರ್ ಕ್ಯಾಮೆರಾಗಳ ಸೌಲಭ್ಯ ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 50MP ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 6510 mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
