Dimensity 9400+ ಚಿಪ್‌ಸೆಟ್ ಮತ್ತು Zeiss ಕ್ಯಾಮೆರಾದ Vivo X200T ಫೋನ್‌ ಬಿಡುಗಡೆಗೆ ಡೇಟ್ ಫಿಕ್ಸ್!

Updated on 20-Jan-2026
HIGHLIGHTS

Vivo X200T ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ

Vivo X200T ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಮತ್ತು ಪವರ್ಫುಲ್ ಪ್ರಾಸೆಸರ್ನೊಂದಿಗೆ ಬರಲಿದೆ.

Vivo X200T ಸ್ಮಾರ್ಟ್‌ಫೋನ್‌ ಇದೆ 27ನೇ ಜನವರಿ 2026 ರಂದು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದೆ.

ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ತನ್ನ ಮುಂಬರಲಿರುವ ಈ Vivo X200T ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದೆ. ವಿವೊ ಈ ಸ್ಮಾರ್ಟ್ಫೋನ್ ಅನ್ನು ಇದೇ 27ನೇ ಜನವರಿ 2026 ರಂದು ದೇಶದಂತ್ಯ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪೆನಿ ಈ ಸ್ಮಾರ್ಟ್ಫೋನ್ ಅನ್ನು ಈಗಾಗಲೇ ಲಭ್ಯವಿರುವ Vivo X200 ಸರಣಿಯ ಲೈನ್‌ಅಪ್‌ಗೆ ನೂತನ ಸೇರ್ಪಡೆಯಾಗಲಿದೆ. ಈ ಸ್ಮಾರ್ಟ್ಫೋನ್ ವಿಶೇಷತೆಗಳೇನು ಎಂದು ನೋಡುವುದಾದರೆ ಇದನ್ನು ಮುಖ್ಯವಾಗಿ ಕ್ಯಾಮೆರಾ ಪ್ರಿಯರನ್ನು ಗುರಿಯಾಗಿಸಿಕೊಂಡಿದ್ದು ಪವರ್ಫುಲ್ Zeiss ಪಾಲುಗಾರಿಕೆಯೊಂದಿಗೆ ಜಬರ್ದಸ್ತ್ ಶಾಟ್ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಲು ಪರಿಚಯಿಸಲಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ MediaTek Dimensity 9400+ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಇದರ ಬಗ್ಗೆ ಈವರೆಗೆ ನಮಗೆ ತಿಳಿದಿರುವ ಸಂಪೂರ್ಣ ಮಾಹಿತಿ ಇಲ್ ಕೆಳಗೆ ವಿವರಿಸಲಾಗಿದೆ.

Also Read: ಭಾರತದಲ್ಲಿ iQOO 15R ಅತಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿರುವ ಐಕ್ಯೂ ಇಂಡಿಯಾ! ನಿರೀಕ್ಷಿತ ಫೀಚರ್ ಮತ್ತು ಬೆಲೆ ಎಷ್ಟು?

Vivo X200T ನಿರೀಕ್ಷಿತ ಬೆಲೆ ಮತ್ತು ಲಭ್ಯತೆ:

ಈ ಮುಂಬರಲಿರುವ Vivo X200T ಸ್ಮಾರ್ಟ್ಫೋನ್ ಇದೇ 27ನೇ ಜನವರಿ 2026 ರಂದು ಮಧ್ಯಾಹ್ನ 12:00 ಗಂಟೆಗೆ ದೇಶದಂತ್ಯ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಈ ಫೋನ್ ಈಗಾಗಲೇ ಹೇಳಿರುವಂತೆ ಈ ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟಕ್ಕೆ ಲಭ್ಯವಾಗಲಿದೆ. ಫೋನಿನ ಕುರಿತಾಗಿ ಸಂಸ್ಥೆಯು ಸಾಕಷ್ಟು ಸ್ಪಷ್ಟ ಮಾಹಿತಿ ಹೊರಹಾಕದಿದ್ದರೂ ಕೆಲವು ಮಾಹಿತಿಗಳ ಪ್ರಕಾರ ಈ ಫೋನಿನ ಬೆಲೆ ಭಾರತದಲ್ಲಿ ಅಂದಾಜು 50,000 ರೂಗಳಿಂದ 55,000 ರೂಗಳಿಗೆ ಬರುವ ನಿರೀಕ್ಷೆಗಳಿವೆ. ಇನ್ನು ಈ ಮೊಬೈಲ್‌ ಸ್ಟೆಲ್ಲರ್ ಬ್ಲ್ಯಾಕ್ ಮತ್ತು ಸೀಸೈಡ್ ಲಿಲಾಕ್ ಕಲರ್‌ಗಳ ಆಯ್ಕೆ ಒಳಗೊಂಡಿರಲಿದೆ ಎಂದು ಹೇಳಲಾಗುತ್ತದೆ.

ವಿವೋ X200T ನಿರೀಕ್ಷಿತ ಫೀಚರ್ಗಳೇನು?

ಇದರಲ್ಲಿ 6.67 ಇಂಚಿನ 1.5K AMOLED ಡಿಸ್ಪ್ಲೇ ಇರಲಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 4,500 ನಿಟ್ಸ್ ಬ್ರೈಟ್‌ನೆಸ್ ಹೊಂದಿರುವುದರಿಂದ ಬಿಸಿಲಿನಲ್ಲಿಯೂ ತೆರೆದುಕೊಳ್ಳುತ್ತದೆ. ಈ ಫೋನ್‌ನ ವೇಗಕ್ಕಾಗಿ ಅತ್ಯಂತ ಪವರ್ಫುಲ್ MediaTek ಡೈಮೆನ್ಸಿಟಿ 9400+ ಪ್ರೊಸೆಸರ್ ಅನ್ನು ಬಳಸಲಾಗಿದೆ. ಇದು 12GB RAM ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಕ್ಯಾಮೆರಾ ವಿಚಾರಕ್ಕೆ ಬಂದರೆ ಫೋನ್ ZEISS ಕಂಪನಿಯ ಜೊತೆಯಲ್ಲಿ 50MP ಮೂರು ಅಂದ್ರೆ ಪ್ರೈಮರಿ, ಅಲ್ಟ್ರಾ-ವೈಡ್ ಮತ್ತು ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾಗಳ ಸೆಟಪ್ ಇರಲಿದೆ.

ಅಲ್ಲದೆ ಅತಿ ಹೆಚ್ಚು ಕಾಲ ಬಾಳಿಕೆ ಬರುವ 6200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದೆ ಇದನ್ನು ವೇಗವಾಗಿ ಚಾರ್ಜ್ ಮಾಡಲು 90W ವೈರ್ಡ್ ಮತ್ತು 40W ವೈರ್ಲೆಸ್ ಚಾರ್ಜಿಂಗ್ ಸೌಲಭ್ಯವಿದೆ. ಇದು Android 16 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ 5 ವರ್ಷಗಳ ಕಾಲ ಅಪ್‌ಡೇಟ್ ನೀಡುವ ಭರವಸೆ ನೀಡುತ್ತದೆ. ಜೊತೆಗೆ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ ಇದು IP69 ರೇಟಿಂಗ್ ಹೊಂದಿರುವುದಾಗಿ ನಿರೀಕ್ಷಿಸಲಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :