Vivo X200 FE - Digit Kannada
Vivo X200 FE Launched in India: ಭಾರತದಲ್ಲಿ ವಿವೋ ಸ್ಮಾರ್ಟ್ಫೋನ್ ತನ್ನ ಹೊಚ್ಚ ಹೊಸ Vivo X200 FE ಮತ್ತು Vivo X Fold5 ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಪ್ರಸ್ತುತ ನಾನು ಇಲ್ಲಿ Vivo X200 FE ಸ್ಮಾರ್ಟ್ಫೋನ್ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಫೀಚರ್ ಮತ್ತು ಬೆಲೆ ಎಲ್ಲವನ್ನು ಈ ಕೆಳಗೆ ವಿವರಿಸಲಾಗಿದೆ. Vivo X200 FE ಸ್ಮಾರ್ಟ್ಫೋನ್ ವಿಶೇಷ ಫೀಚರ್ ನೋಡುವುದಾದರೆ 6500mAh ಬ್ಯಾಟರಿ 90w ಫಾಸ್ಟ್ ಚಾರ್ಜ್ ಮತ್ತು Sony IMX921 ಜಬರದಸ್ತ್ ಕ್ಯಾಮೆರಾದೊಂದಿಗೆ ಮತ್ತಷ್ಟು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುತ್ತದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ವಿವೋ ಕಂಪನಿಯ ಈ ಸ್ಮಾರ್ಟ್ಫೋನ್ ಬೆಲೆ ಬಗ್ಗೆ ಮಾತನಾಡುವುದಾದರೆ ಫೋನ್ ಎರಡು ಮಾದರಿಗಳಲ್ಲಿ ಲಭ್ಯವಿದ್ದು ಆರಂಭಿಕ 12GB RAM ಮತ್ತು 256GB ಸ್ಟೋರೇಜ್ 54,999 ರೂಗಳಿಗೆ ಮತ್ತೊಂದು 16GB RAM ಮತ್ತು 512GB ಸ್ಟೋರೇಜ್ 59,999 ರೂಗಳಿಗೆ ಬಿಡುಗಡೆಯಾಗಿದೆ. ಅಲ್ಲದೆ ಸ್ಮಾರ್ಟ್ಫೋನ್ ಆಯ್ದ ಬ್ಯಾಂಕ್ ಕಾರ್ಡ್ ಮೇಲೆ ಬರೋಬ್ಬರಿ HDFC, SBI Card Axis Card ಬಳಸಿಕೊಂಡು ಸುಮಾರು 6000 ರೂಗಳ ತ್ವರಿತ ಲಿಮಿಟೆಡ್ ಟೈಮ್ ಡಿಸ್ಕೌಂಟ್ ಸಹ ಲಭ್ಯವಿದೆ.
ಅಲ್ಲದೆ ವಿವೋ ಗ್ರಾಹಕರು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 6000 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: Amazon Prime ಸೇಲ್‌ನಲ್ಲಿ Samsung, iPhone, OnePlus ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯುತ್ತಮ ಡೀಲ್ ಮತ್ತು ಕೊಡುಗೆಗಳು!
Vivo X200 FE ಸ್ಮಾರ್ಟ್ಫೋನ್ 6.31 ಇಂಚಿನ AMOLED (2640×1216 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 7i ಗ್ಲಾಸ್ ಹೊಂದಿದೆ. Vivo X200 FE ಫೋನ್ ಕಾಮೆರದಲ್ಲಿ 50MP ಸೋನಿ IMX912 ಸೆನ್ಸರ್ ಹೊಂದಿದ್ದು 8MP ವೈಡ್ ಲೆನ್ಸ್ ಮತ್ತು 50MP ಸೋನಿ IMX882 ಪೆರಿಸ್ಕೋಪ್ ಲೆನ್ಸ್ AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಕೊನೆಯದಾಗಿ ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Vivo X200 FE ಫೋನ್ MediaTek Dimensity 9300+ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಜೊತೆಗೆ ColorOS 15 ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, eSIM Support, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ Vivo X200 FE ಸ್ಮಾರ್ಟ್ಫೋನ್ 6500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 90W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿ ಇದರಲ್ಲಿ ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.