Vivo X200 FE Vivo X Fold 5 launch in India today what to expect on New 5G Smartphone
Vivo X200 FE & Vivo X Fold5 Launch: ವಿವೋ ತನ್ನ ಮುಂಬರಲಿರುವ ಹೊಸ ಸ್ಮಾರ್ಟ್‌ಫೋನ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಸಜ್ಜಾಗಿದ್ದು Vivo X200 FE ಮತ್ತು Vivo X Fold5 ಎಂಬ ಎರಡು ಹೊಸ ಸ್ಮಾರ್ಟ್‌ಫೋನ್ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು 14ನೇ ಜುಲೈ 2025 ರಂದು ಬಿಡುಗಡೆಯಾಗಲಿವೆ. ಇದು ದೇಶಾದ್ಯಂತ ತಂತ್ರಜ್ಞಾನ ಉತ್ಸಾಹಿಗಳಿಗೆ ಮಹತ್ವದ ಇವೆಂಟ್ ಆಗಲಿದೆ ಅಂದ್ರೆ ತಪ್ಪಿಲ್ಲ. ಅಲ್ಲದೆ ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಸೈಟ್ ಪೇಜ್ ಲೈವ್ ಆಗಿದೆ. ಈ ಎರಡು ಸ್ಮಾರ್ಟ್ಫೋನ್ಗಳು ಪ್ರೀಮಿಯಂ ಕ್ವಾಲಿಟಿ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪ್ಯಾಕ್ ಆಗಲಿವೆ.
ಮೊದಲಿಗೆ ಈ Vivo X200 FE ಸ್ಮಾರ್ಟ್‌ಫೋನ್ ಪ್ರೀಮಿಯಂ ಮತ್ತು ಪವರ್ಫುಲ್ ಕೊಡುಗೆಯಾಗಲಿದೆ. ಇದು ನಯವಾದ ವಿನ್ಯಾಸದಲ್ಲಿ ಉನ್ನತ-ಮಟ್ಟದ ವಿಶೇಷಣಗಳನ್ನು ಒಳಗೊಂಡಿದೆ. ಮತ್ತೊಂದು Vivo X Fold 5 ಫೋನ್ ಫೋಲ್ಡ್ಎಬಲ್ ವಿಭಾಗದಲ್ಲಿ ಹೆಚ್ಚಿನ ಲಿಮಿಟ್ ದಾಟಲು ಸಜ್ಜಾಗಿದ್ದು ದೃಢವಾದ ಬ್ಯಾಟರಿಯೊಂದಿಗೆ ಅತ್ಯಂತ ತೆಳ್ಳಗಿನ ಮಡಚಬಹುದಾದ ಫೋನ್ಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದೆ. ಈ ಎರಡೂ ಸ್ಮಾರ್ಟ್‌ಫೋನ್ಗಳು ಭಾರತೀಯ ಮಾರುಕಟ್ಟೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ತಲುಪಿಸುವ ವಿವೋ ಕಂಪನಿ ಬದ್ಧತೆಯನ್ನು ಸೂಚಿಸುತ್ತಿದೆ.
Vivo X200 FE ಸ್ಮಾರ್ಟ್ಫೋನ್ ಸುಮಾರು 6.31 ಇಂಚಿನ 1.5K 120Hz LTPO AMOLED ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಅಲ್ಲದೆ ಇದು MediaTek Dimensity 9300+ ಚಿಪ್‌ಸೆಟ್‌ನೊಂದಿಗೆ ಚಾಲಿತಗೊಳ್ಳಬಹುದು. ಇದು OIS ಜೊತೆಗೆ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಮತ್ತು 90W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ದೊಡ್ಡ 6500mAh ಬ್ಯಾಟರಿಯನ್ನು ಒಳಗೊಂಡಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಮತ್ತೊಂದು Vivo X Fold 5 ಫೋನ್ 8.03 ಇಂಚಿನ LTPO AMOLED ಒಳಗಿನ ಡಿಸ್ಪ್ಲೇ, ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್, 80W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 6000mAh ಬ್ಯಾಟರಿ ಮತ್ತು ಟ್ರಿಪಲ್ 50MP ZEISS- ಬೆಂಬಲಿತ ಕ್ಯಾಮೆರಾ ಸಿಸ್ಟಮ್ ಅನ್ನು ಹೊಂದಿರುವುದಾಗಿ ನಿರೀಕ್ಷಿಸಲಾಗುತ್ತಿದೆ.
ಆರಂಭಿಕ ವರದಿಗಳ ಪ್ರಕಾರ Vivo X200 FE ಬೆಲೆ ಅದರ ಮೂಲ ಮಾದರಿಗೆ (12GB+256GB) ಸುಮಾರು ₹49,990 ಆಗಬಹುದು, ಇದು ಹೆಚ್ಚಿನ ರೂಪಾಂತರಗಳಿಗೆ ಹೆಚ್ಚಾಗುವುದಾಗಿ ನಿರೀಕ್ಷಿಸಲಾಗುತ್ತಿದೆ. ಮತ್ತೊಂದು ಪ್ರೀಮಿಯಂ Vivo X Fold 5 ಸ್ಮಾರ್ಟ್ಫೋನ್ ಆರಂಭಿಕ 16GB RAM + 512GB ಸ್ಟೋರೇಜ್ ರೂಪಾಂತರಕ್ಕೆ ಸುಮಾರು ₹1,49,999 ರೂಗಳನ್ನು ಬೆಲೆಯನ್ನು ನಿರೀಕ್ಷಿಸಲಾಗುತ್ತಿದೆ.
ಅಲ್ಲದೆ ಯಾವ ಯಾವ ಬ್ಯಾಂಕ್ ಅಥವಾ ವಿನಿಮಯ ಮತ್ತು ಲಾಂಚ್ ಕೊಡುಗೆಗಳೊಂದಿಗೆ 14ನೇ ಜುಲೈ 2025 ರಂದು ಅಧಿಕೃತ ಬೆಲೆಯನ್ನು ಬಹಿರಂಗಪಡಿಸಲಾಗುವುದು ಅಲ್ಲಿಯವರೆಗೆ ನಾವು ಕಾಯಬೇಕಿದೆ. ಆದರೆ ಈಗಷ್ಟೇ ಬಿಡುಗಡೆಯಾದ ಸಂಸುಂಗ್ ಫೋನ್ಗಳ ಹೋಲಿಕೆಯಲ್ಲಿ ವಿವೋ ಫೋನ್ಗಳು ಕೊಂಚ ಕಡಿಮೆ ಬೆಲೆಗೆ ಅದ್ದೂರಿಯ ಫೀಚರ್ಗಳೊಂದಿಗೆ ಬರುವುದಂತೂ ಖಚಿತ.