Vivo ಸ್ಮಾರ್ಟ್‌ಫೋನ್ ಕಂಪನಿಯು ಮತ್ತೆ ಹೊಸದೊಂದು ಸ್ಮಾರ್ಟ್‌ಫೋನ್ ಪರಿಚಯಿಸಲು ಸಜ್ಜಾಗಿದೆ. ಈ ಬಾರಿ ಸಂಸ್ಥೆಯು ತನ್ನ V ಸರಣಿಯ ನೂತನವಾಗಿ Vivo V70 ಮತ್ತು Vivo V70 Elite ಹೆಸರಿನ ಮೊಬೈಲ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ಗಳು ಅತೀ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿವೆ ಎನ್ನುವ ಸಂಗತಿಯನ್ನು ಕಂಪನಿಯು ಟೀಸರ್ ಮೂಲಕ ಹೊರಹಾಕಿದೆ. ಅಲ್ಲದೇ ಹೊಸ Vivo V70 ಸರಣಿಗಾಗಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋ ಪೇಜ್ ಕೂಡಾ ತೆರೆಯಲಾಗಿದೆ. ಇನ್ನು ಮುಂಬರುವ ಈ ಫೋನ್‌ಗಳು SnapdragonVivo V70 ಮತ್ತು Vivo V70 Elite ಹೆಸರಿನ ಮೊಬೈಲ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ.
Also Read : Samsung Galaxy S26 Ultra ಫೋನಿನ ಬೆಲೆ ಲೀಕ್! ಭಾರತದಲ್ಲಿ ಈ ಮೊಬೈಲ್‌ನ ನಿರೀಕ್ಷಿತ ದರ ಎಷ್ಟು?
ಅಂದಹಾಗೆ ಈ ಸ್ಮಾರ್ಟ್‌ಫೋನ್‌ಗಳು ಅತೀ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿವೆ ಎನ್ನುವ ಸಂಗತಿಯನ್ನು ಕಂಪನಿಯು ಟೀಸರ್ ಮೂಲಕ ಹೊರಹಾಕಿದೆ. ಅಲ್ಲದೇ ಹೊಸ Vivo V70 ಸರಣಿಗಾಗಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋ ಪೇಜ್ ಕೂಡಾ ತೆರೆಯಲಾಗಿದೆ. ಇನ್ನು ಮುಂಬರುವ ಈ ಫೋನ್‌ಗಳು Snapdragon ಪ್ರೊಸೆಸರ್ ಹಾಗೂ Zeiss ಕ್ಯಾಮೆರಾ ವ್ಯವಸ್ಥೆಯನ್ನು ಒಳ ಪ್ರೊಸೆಸರ್ ಹಾಗೂ Zeiss ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. Vivo V70 ಸರಣಿಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
ವಿವೋದ ಈ ನೂತನ ಸರಣಿಯಲ್ಲಿ Vivo V70 ಮತ್ತು Vivo V70 Elite ಮೊಬೈಲ್‌ಗಳು ಎಂಟ್ರಿ ಕೊಡುವ ನಿರೀಕ್ಷೆಗಳಿವೆ. ಇನ್ನು ಈ ಎರಡೂ ಮೊಬೈಲ್‌ಗಳು ಫೆಬ್ರವರಿ ತಿಂಗಳು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗುವ ಸಾಧ್ಯತೆಗಳು ಅಧಿಕ ಎಂದು ಹೇಳಲಾಗಿದೆ. ಈ ಕುರಿತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋ ಪೇಜ್ ಕೂಡಾ ತೆರೆಯಲಾಗಿದೆ. ಲೀಕ್ ಮಾಹಿತಿಗಳು ಮುಂದಿನ ತಿಂಗಳ ಮಧ್ಯಭಾಗದಲ್ಲಿ ಫೋನ್‌ಗಳು ಬಿಡುಗಡೆ ಆಗುವ ನಿರೀಕ್ಷೆಗಳಿವೆ ಎನ್ನುವುದನ್ನು ಸೂಚಿಸುತ್ತವೆ.
Vivo V70 ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಫೋನ್ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು ಎಂದು ಲೀಕ್ ಮಾಹಿತಿಗಳು ಸೂಚಿಸುತ್ತದೆ. ಇನ್ನು ಈ ಮೊಬೈಲ್ 50MP + 8MP + 50MP ಸಾಮರ್ಥ್ಯದ Zeiss ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ.
Vivo V70 Elite ಮೊಬೈಲ್ 6.59 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇವೆ. ಈ ಫೋನ್ Qualcomm Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಅಲ್ಲದೇ ಈ ಫೋನ್ 6,500mAh ಬ್ಯಾಟರಿ ಆಯ್ಕೆ ಹೊಂದಿರುವ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಸಹ ಒಳಗೊಂಡಿರಬಹುದು ಎಂದು ಲೀಕ್ ವರದಿಗಳು ಸೂಚಿಸುತ್ತವೆ. ಹಾಗೆಯೇ ಹಿಂಭಾಗದಲ್ಲಿ Zeiss ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು ಕ್ರಮವಾಗಿ 50MP + 50MP + 50MP ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ. ಸೆಲ್ಫಿಗಾಗಿ ಸಹ 50MP ಕ್ಯಾಮೆರಾ ಸೌಲಭ್ಯ ನೀಡಬಹುದು.