Vivo V60 - Coming Soon in India
ಭಾರತದಲ್ಲಿ ವಿವೋ ತನ್ನ ಮುಂಬರಲಿರುವ Vivo V60 5G ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈಗಾಗಲೇ ಕಂಪನಿ ಈ ಸ್ಮಾರ್ಟ್ಫೋನ್ ಅಸಾಧಾರಣ ಬ್ಯಾಟರಿ ಬಾಳಿಕೆ ಮತ್ತು ಸುಧಾರಿತ ಕ್ಯಾಮೆರಾ ಸಾಮರ್ಥ್ಯಗಳನ್ನು ಹೊಂದಿರುವ ಸಾಧನವಾಗಲಿದೆ ಎನ್ನುವುದನ್ನು ಪರಿಗಣಿಸಲು ಇದಕ್ಕೆ ಟೀಸ್ ಮಾಡಲಾದ Vivo V60 ಸ್ಮಾರ್ಟ್ಫೋನ್ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಅಂದ್ರೆ ಸುಮಾರು 3535,000 ರೂಗಳೊಳಗೆ ಬರುವುದಾಗಿ ಮರು ವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ. ವಿವೋ ಈ ಪ್ರೀಮಿಯಂ ಸ್ಮಾರ್ಟ್ಫೋನ್ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವುದಾಗಿ ಭರವಸೆ ನೀಡುತ್ತಿದೆ.
ಈ ಸ್ಮಾರ್ಟ್ಫೋನ್ ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ದೃಢೀಕರಿಸಿಲ್ಲವಾದರೂ ಪ್ರಸ್ತುತ ಇದರ ಸೋರಿಕೆ ಮತ್ತು ಈವರೆಗೆ ಲಭ್ಯವಿರುವ ವರದಿಗಳ ಪ್ರಕಾರ Vivo V60 ಸ್ಮಾರ್ಟ್ಫೋನ್ ಇದೆ 12ನೇ ಆಗಸ್ಟ್ 2025 ರಂದು ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ಸೂಚಿಸುತ್ತವೆ ಆದರೆ ಪ್ರಸ್ತುತ ಇದಕ್ಕೆ ಯಾವುದೇ ಅಧಿಕೃತ ಮಾಹಿತಿಗಳನ್ನು ಕಂಪನಿ ನೀಡಿಲ್ಲ.
ಇದರ ಬೆಲೆಯನ್ನು Vivo V50 ಸ್ಮಾರ್ಟ್ಫೋನ್ ಸ್ಪರ್ಧಾತ್ಮಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆರಂಭಿಕ ವದಂತಿಗಳ ಪ್ರಕಾರ ಇದರ ಮೂಲ ರೂಪಾಂತರಗಳು ₹37,000 ರಿಂದ ₹40,000 ಬೆಲೆಯಲ್ಲಿ ಲಭ್ಯವಿರುತ್ತವೆ. Vivo V60 ಸ್ಮಾರ್ಟ್ಫೋನ್ ಈ ವಿಭಾಗದಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವ ಪ್ರಬಲ ಸ್ಪರ್ಧಿಯಾಗಿ ಸ್ಥಾನ ಪಡೆದಿದೆ.
ಇದನ್ನೂ ಓದಿ: UPI New Rules 2025: ನೀವೂ ಯುಪಿಐ ಬಳಸುತ್ತಿದ್ದೀರಾ? ಹಾಗಾದ್ರೆ ಮುಂದಿನ ತಿಂಗಳಿಂದ ಈ ಹೊಸ ನಿಮಯ ಜಾರಿಯಾಗಲಿವೆ!
ಈ ಮುಂಬರಲಿರುವ Vivo V60 ಸ್ಮಾರ್ಟ್ಫೋನ್ 6.67 ಇಂಚಿನ ದೊಡ್ಡ 1.5K AMOLED ಡಿಸ್ಪ್ಲೇಯೊಂದಿಗೆ ಪ್ರಭಾವ ಬೀರಲು ಸಜ್ಜಾಗಿದ್ದು ಇದು ಮೃದುವಾದ 120Hz ರಿಫ್ರೆಶ್ ದರ ಮತ್ತು 1300 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ. ಹುಡ್ ಅಡಿಯಲ್ಲಿ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 4 ಪ್ರೊಸೆಸರ್ನೊಂದಿಗೆ ಚಾಲಿತವಾಗುವ ನಿರೀಕ್ಷೆಯಿದೆ.
ಇದು ದೃಢವಾದ 5G ಕಾರ್ಯಕ್ಷಮತೆಯನ್ನು ಖಚಿತಪಡಿಸುವುದರೊಂದಿಗೆ ಹೊಸ ಆಂಡ್ರಾಯ್ಡ್ 15 ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು IP68/IP69 ರೇಟಿಂಗ್‌ಗಳನ್ನು ಸಹ ಒಳಗೊಂಡಿರುವ ನಿರೀಕ್ಷೆಗಳಿವೆ. ಈ Vivo V60 ಸ್ಮಾರ್ಟ್ಫೋನ್ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಇದರ ಬೃಹತ್ 6500mAh ಬ್ಯಾಟರಿ ಜೊತೆಗೆ 90W ವೇಗದ ಚಾರ್ಜಿಂಗ್ ಆಗಿದೆ.
ಅಲ್ಲದೆ ಹೆಚ್ಚುವರಿಯಾಗಿ ಈ ಸ್ಮಾರ್ಟ್ಫೋನ್ ನಿಮಗೆ ZEISS ಬೆಂಬಲಿತ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ OIS ನೊಂದಿಗೆ 50MP ಪ್ರೈಮರಿ ಕ್ಯಾಮೆರಾ 100x ಡಿಜಿಟಲ್ ಜೂಮ್ ಸಹ ಸಪೋರ್ಟ್ ಮಾಡುತ್ತದೆ. ಮತ್ತೊಂದು 8MP ಅಲ್ಟ್ರಾವೈಡ್ ಸೆನ್ಸರ್ ಮತ್ತು 50MP ಟೆಲಿಫೋಟೋ ಸೆನ್ಸರ್ ಬರುವ ನಿರೀಕ್ಷೆ. ಮತ್ತು 50MP ಸೆಲ್ಫಿ ಕ್ಯಾಮೆರಾದೊಂದಿಗೆ ಒಂದು ಹೈಲೈಟ್ ಆಗಿರುತ್ತದೆ.