Vivo V60 with Zeiss camera and 6500mAh Battery launched in India Price
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ಇಂದು 12ನೇ ಆಗಸ್ಟ್ 2025 ರಂದು ಭಾರತದಲ್ಲಿ ತನ್ನ ಹೊಚ್ಚ ಹೊಸ Vivo V60 5G ಸ್ಮಾರ್ಟ್ಫೋನ್ ಅನ್ನು 50MP ZEISS ಕ್ಯಾಮೆರಾದೊಂದಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೀಚರ್ ಹೊಂದಿದ್ದು Snapdragon 7 Gen ಮತ್ತು 6500 mAh ಬ್ಯಾಟರಿಯೊಂದಿಗೆ ಬರುತ್ತದೆ. ಈ Vivo V60 5G ಸ್ಮಾರ್ಟ್ಫೋನ್ ಆಫರ್ ಬೆಲೆಯೊಂದಿಗೆ ಟಾಪ್ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
ವಿವೋ ಸ್ಮಾರ್ಟ್ಫೋನ್ ಹೊಸದಾಗಿ ಸೋಶಿಯಲ್ ಮೀಡಿಯಾಕ್ಕೆ ಪೋಸ್ಟ್ ಮಾಡಲು ಹೊಸ ಫೀಚರ್ ಜೊತೆಗೆ ಬರುತ್ತದೆ. ಇದರ ಪ್ರೈಮರಿ 50MP ZEISS (Sony IMX882 1.3cm Size) ಸೆನ್ಸರ್ ನೀವು ಶೂಟ್ ಮಾಡುತ್ತಿದಂತೆ ಮ್ಯೂಜಿಕ್, ಕಲರ್ ಅಪ್ಡೇಟ್ ಮತ್ತು ಲೈಟ್ ಕಂಡೀಶನ್ ಕಂಟ್ರೋಲ್ ಮಾಡಿ ಅತ್ಯತ್ತಮ ವೀಡಿಯೊಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಫೀಚರ್ ಅನ್ನು ಕಂಪನಿ ಭಾರತ-ವಿಶೇಷ ವೆಡ್ಡಿಂಗ್ ವಿಲಾಗ್ ಮೋಡ್ (India’s Exclusive Wedding vLog) ಅನ್ನು ಹೊಂದಿದೆ. ಯಾವುದೇ ಶುಭ ಸಮಾರಂಭಗಳಲ್ಲಿ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ZEISS ಸೆನ್ಸರ್ ಜೊತೆ ವಿನ್ಯಾಸಗೊಳಿಸಲಾದ ಈ ಫೋನ್‌ನ ಕ್ಯಾಮೆರಾ ವ್ಯವಸ್ಥೆಯು OIS ಹೊಂದಿದ್ದು ಮದುವೆಯ ವೀಡಿಯೊಗ್ರಫಿಗೆ ಸೂಕ್ತವಾಗಿದೆ.
Vivo V60 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ನಾಲ್ಕು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹36,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹38,999 ರೂಗಳಿಗೆ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹40,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 16GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹45,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ Vivo V60 5G ಸ್ಮಾರ್ಟ್ಫೋನ್ 19 ಆಗಸ್ಟ್ 2025 ರಂದು ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ವಿವೋವಿನ ಸೈಟ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
Vivo V60 5G ಸ್ಮಾರ್ಟ್ಫೋನ್ 6.77 ಇಂಚಿನ AMOLED ಡಿಸ್ಪ್ಲೇ ಬರೋಬ್ಬರಿ 2392 x 1080 ಪಿಕ್ಸೆಲ್‌ಗಳ ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 7i ಗ್ಲಾಸ್ ಹೊಂದಿದೆ. Vivo V60 5G ಫೋನ್ ಕಾಮೆರದಲ್ಲಿ 50MP ZEISS (Sony IMX882 1.3cm Size) ಸೆನ್ಸರ್ ಹೊಂದಿದ್ದು AI- ಬೆಂಬಲಿತ ಟ್ರಿಪಲ್ ಕ್ಯಾಮೆರಾ ಸೆಟಪ್ 10x ಡಿಜಿಟಲ್ ಜೂಮ್ ಮತ್ತು ZEISS Multifocal Potrait ಹೊಂದಿದೆ. ಈ ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Also Read: Fastag Annual Pass ಇದೆ 15ನೇ ಆಗಸ್ಟ್‌ನಿಂದ ಜಾರಿ! ಇದರ ಪ್ರಯೋಜನಗಳೇನು ತಿಳಿಯಿರಿ!
Vivo V60 5G ಸ್ಮಾರ್ಟ್ ಫೋನ್ Qualcomm Snapdragon 7 Gen ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಜೊತೆಗೆ ColorOS 15.0.2 ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, eSIM Support, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ Vivo V60 5G ಸ್ಮಾರ್ಟ್ಫೋನ್ 6500mAh ಬ್ಯಾಟರಿಯನ್ನು ಪ್ಯಾಕ್ ಮಾಡುವುದರೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 2 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 3 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.