ಬರೋಬ್ಬರಿ 50MP ಸೆಲ್ಫಿ ಕ್ಯಾಮೆರಾವುಳ್ಳ Vivo V50e ಬಿಡುಗಡೆಗೆ ಸಜ್ಜಾಗಿದೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 01-Apr-2025
HIGHLIGHTS

ಭಾರತದಲ್ಲಿ Vivo V50e ಸ್ಮಾರ್ಟ್ಫೋನ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Vivo V50e ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುವುದನ್ನು ಕಂಫಾರ್ಮ್ ಮಾಡಿದೆ.

Vivo V50e ಸ್ಮಾರ್ಟ್ಫೋನ್ 3D Curved ಡಿಸ್ಪ್ಲೇಯೊಂದಿಗೆ IP69 ಸೆನ್ಸರ್ ಜೊತೆಗೆ ಬಿಡುಗಡೆಯಾಗಲಿದೆ.

Vivo V50e Specs Confirmed: ಭಾರತದಲ್ಲಿ ಮುಂಬರಲಿರುವ ಈ Vivo V50e ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ಒಂದಿಷ್ಟು ಹೊಸ ಮಾಹಿತಿಯನ್ನು ಇಂದು ಬಹಿರಂಗಪಡಿಸಿದೆ. ವಿವೋ ಕಂಪನಿ ಈ ಬಾರಿ ಬೇರೆ ಲೆವೆಲ್ ಮಾದರಿಯ ಯೋಚನೆಯೊಂದಿಗೆ ಬಂದಿದೆ. ಅಂದ್ರೆ ಬಿಡುಗಡೆಗೂ ಮುಂಚೆಯೇ Vivo V50e ಸ್ಮಾರ್ಟ್ಫೋನ್ ಸರಿ ಸುಮಾರು ಎಲ್ಲ ಅಧಿಕೃತ ಫೀಚರ್ ಮತ್ತು ವಿಶೇಷಣಗಳನ್ನು ಪೋಸ್ಟ್ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಪ್ರಸ್ತುತ Vivo V50e ಸ್ಮಾರ್ಟ್ಫೋನ್ ಪೋಸ್ಟ್ ಒಳಗೆ 50MP ಸೆಲ್ಫಿ ಕ್ಯಾಮೆರಾ ಸೋನಿ ಸೆನ್ಸರ್ ಜೊತೆಗೆ ಬರುವುದಾಗಿ ಕಂಫಾರ್ಮ್ ಮಾಹಿತಿಯನ್ನು ನೀಡಿದೆ.

Vivo V50e ಸ್ಮಾರ್ಟ್ಫೋನ್ ಖಚಿತ ಫೀಚರ್ ಮತ್ತು ವಿಶೇಷಣಗಳೇನು?

ಈ ಮುಂಬರಲಿರುವ ಈ Vivo V50e ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.77 ಇಂಚಿನ FHD+ ಕ್ವಾಡ್-ಕರ್ವ್ಡ್ AMOLED ಪ್ಯಾನೆಲ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್ಫೋನ್ 4,500 nits ಗರಿಷ್ಠ ಹೊಳಪನ್ನು ಪಡೆಯಬಹುದು. ಕ್ಯಾಮೆರಾಗಳ ವಿಷಯದಲ್ಲಿ ಸ್ಮಾರ್ಟ್ಫೋನ್ OIS ಜೊತೆಗೆ 50MP IMX882 ಸಂವೇದಕ ಮತ್ತು 8MP ಅಲ್ಟ್ರಾವೈಡ್ ಸೆನ್ಸರ್ ಅನ್ನು ಒಳಗೊಂಡಂತೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯಬಹುದು. ಮುಂಭಾಗದಲ್ಲಿ ಸ್ಮಾರ್ಟ್ಫೋನ್ 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರಬಹುದು.

Vivo v50e in India

Vivo V50e ಸ್ಮಾರ್ಟ್‌ಫೋನ್ MediaTek Dimensity 7300 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯಬಹುದು ಮತ್ತು LPDDR4X ಮತ್ತು UFS 2.2 ಸ್ಟೋರೇಜ್‌ನೊಂದಿಗೆ ಬರಬಹುದು. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ FunTouch OS 15 ನಲ್ಲಿ ಕಾರ್ಯನಿರ್ವಹಿಸಬಹುದು ಮತ್ತು 90W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5600mAh ಬ್ಯಾಟರಿಯನ್ನು ಹೊಂದಿರಬಹುದು. ಇದು IP68+IP69 ಪ್ರಮಾಣೀಕರಣವನ್ನು ಸಹ ಪಡೆಯಬಹುದು.

Related Article: Upcoming Phones in April: ಇವೇ ನೋಡಿ ಮುಂಬರಲಿರುವ Vivo, Moto ಮತ್ತು POCO ಮೊಬೈಲ್ ಫೋನ್‌ಗಳು!

ಭಾರತದಲ್ಲಿ Vivo V50e ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ

ಈ ಮುಂಬರಲಿರುವ Vivo V50e ಸ್ಮಾರ್ಟ್‌ಫೋನ್ ಸೋರಿಕೆಗಳ ಪ್ರಕಾರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು 30,000 ರೂಗಿಂತ ಕಡಿಮೆ ಬೆಲೆಗೆ ಬರುವ ನಿರೀಕ್ಷೆಗಳಿವೆ. ಈ ಸಮಯದಲ್ಲಿ ಬ್ರ್ಯಾಂಡ್ ಇನ್ನೂ ಅಧಿಕೃತ ಬೆಲೆಯನ್ನು ಘೋಷಿಸಿಲ್ಲ. Vivo V50e ಸ್ಮಾರ್ಟ್‌ಫೋನ್ ಮತ್ತೊಂದು ಮಾದರಿಗೆ 8GB RAM ಮತ್ತು 256GB ಸ್ಟೋರೇಜ್ 32,999 ರೂಗಳಾಗಿವೆ. ಕೊನೆಯದಾಗಿ ಇದರ 12GB RAM ಮತ್ತು 512GB ಸ್ಟೋರೇಜ್ 34,999 ರೂಗಳಿಗೆ ನಿರೀಕ್ಷಿಸಲಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :