Vivo V50 Officially Launched In India
Vivo V50 Officially Launched: ಭಾರತದಲ್ಲಿ ವಿವೋ (Vivo) ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ Vivo V50 ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಇಂದು 17ನೇ ಫೆಬ್ರವರಿ 2025 ರಂದು ಬಿಡುಗಡೆಗೊಳಿಸಿದೆ. Vivo V50 ಸ್ಮಾರ್ಟ್ಫೋನ್ ಪ್ರಮುಖವಾಗಿ ಕ್ಯಾಮೆರಾ ವಲಯಕ್ಕಾಗಿಯೇ ಬಿಡುಗಡೆಗೊಳಿಸಿದ್ದು ZEISS ಲೆನ್ಸ್ ಸೆನ್ಸರ್ಗಳೊಂದಿಗೆ ಅತ್ಯುತ್ತಮ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲ್ಪಟ್ಟಿದೆ. Vivo V50 ಸ್ಮಾರ್ಟ್ಫೋನ್ ಪ್ರಮುಖ IP ರೇಟಿಂಗ್‌ನೊಂದಿಗೆ AI ಫೀಚರ್ಗಳನ್ನು ಸಹ ಬೆಂಬಲಿಸುತ್ತದೆ. ಈ ಸ್ಮಾರ್ಟ್ಫೋನಲ್ಲಿ ನೀವು ಗಮನ ಹರಿಸಬೇಕಾದ ಆಕರ್ಷಕ ಫೀಚರ್ಗಳೆಂದರೆ ಡಿಸ್ಪ್ಲೇ, ಬ್ಯಾಟರಿ ಮತ್ತು ಕ್ಯಾಮೆರಾವಾಗಿದೆ.
Vivo V50 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ Amazon, Flipkart ಮತ್ತು ವಿವೋ ವೆಬ್‌ಸೈಟ್ ಮೂಲಕ ಲಭ್ಯವಿರುತ್ತದೆ. ಆದರೆ ಆಸಕ್ತ ಬಳಕೆದಾರರು ಶೂನ್ಯ ಡೌನ್ ಪೇಮೆಂಟ್, ಎಕ್ಸ್‌ಚೇಂಜ್ ಬೋನಸ್, SBI ಮತ್ತು HDFC ಬ್ಯಾಂಕ್‌ಗಳೊಂದಿಗೆ ತ್ವರಿತ ರಿಯಾಯಿತಿ (10%) ರೂಗಳ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುವ ಬ್ಯಾಂಕ್ ಕೊಡುಗೆಗಳ ಮೂಲಕ Vivo V50 ಸ್ಮಾರ್ಟ್ಫೋನ್ ಇದರ ಆರಂಭಿಕ ರೂಪಾಂತರವನ್ನು ಕಡಿಮೆ ಬೆಲೆಗೆ ಖರೀದಿಸಬಹುದು.
Vivo V50 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 25ನೇ ಫೆಬ್ರವರಿ 2025 ಮಧ್ಯಾಹ್ನ 12:00 ಗಂಟೆಯಿಂದ ಲಭ್ಯವಾಗಲಿದೆ. ಅಂದರೆ ನಯವಾದ ಲುಕ್ ಜೊತೆಗೆ ಈ Vivo V50 ಸ್ಮಾರ್ಟ್ಫೋನ್ ರೋಸ್ ರೆಡ್, ಸ್ಟಾರಿ ನೈಟ್ ಮತ್ತು ಟೈಟಾನಿಯಂ ಗ್ರೇ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.
Vivo V50 ಸ್ಮಾರ್ಟ್ಫೋನ್ ಅಲ್ಟ್ರಾ ಸ್ಲಿಮ್ ಕ್ವಾಡ್-ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದ್ದು ಫೋನ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ 2392×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲ 120Hz ರಿಫ್ರೆಶ್ ದರ ಮತ್ತು 4500nits ಸ್ಥಳೀಯ ಪೀಕ್ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಇದು ರಕ್ಷಣೆಗಾಗಿ ಮೇಲ್ಭಾಗದಲ್ಲಿ ಡೈಮಂಡ್ ಶೀಲ್ಡ್ ಗ್ಲಾಸ್ ಅನ್ನು ಹೊಂದಿದೆ. ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.
Also Read: Motorola G85 5G ಮೇಲೆ ಫ್ಲಿಪ್ಕಾರ್ಟ್ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ!
Vivo V50 ಸ್ಮಾರ್ಟ್ಫೋನ್ ZEISS ಸಹ-ಎಂಜಿನಿಯರಿಂಗ್ ಕ್ಯಾಮೆರಾ ವ್ಯವಸ್ಥೆ ಇದೆ. ಹಿಂಭಾಗದಲ್ಲಿ 50MP OIS ಕ್ಯಾಮೆರಾ ಜೊತೆಗೆ 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಇದೆ ಮತ್ತು ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 50MP AF ಸೆನ್ಸರ್ ಇದೆ. ಸಹಜವಾಗಿ ಈ Vivo V50 ಸ್ಮಾರ್ಟ್ಫೋನ್ ಸ್ಮಾರ್ಟ್ AI ವೈಶಿಷ್ಟ್ಯಗಳಿವೆ. ಇದರಲ್ಲಿ ಸರ್ಕಲ್ ಟು ಸರ್ಚ್, ವಿವೋ ಲೈವ್ ಕಾಲ್ ಟ್ರಾನ್ಸ್‌ಲೇಷನ್, AI ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್ ಮತ್ತು ಇನ್ನೂ ಹೆಚ್ಚಿನ AI ವೈಶಿಷ್ಟ್ಯಗಳಿವೆ.
Vivo V50 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ನಿಂದ ಚಾಲಿತವಾಗಿದೆ. 12GB ವರೆಗೆ LPDDR4X RAM ಮತ್ತು 512GB UFS 2.2 ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು IP68 ಮತ್ತು IP69 ರೇಟಿಂಗ್ ಅನ್ನು ಹೊಂದಿದೆ ಮತ್ತು 90W ಫಾಸ್ಟ್-ಚಾರ್ಜ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.