50MP ಸೆಲ್ಫಿ ಕ್ಯಾಮೆರಾ ಇರುವ ಪಡೆದಿರುವ Vivo V50 ಬೆಲೆಯಲ್ಲಿ ಈಗ ಭಾರೀ ಕಡಿತ!

HIGHLIGHTS

ವಿವೋ V50 ಫೋನ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯ ಹೊಂದಿದೆ

ವಿವೋ V50 ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ

ವಿವೋ ಸಂಸ್ಥೆಯ ಈ ಫೋನ್‌ Snapdragon 7 Gen 3 ಪ್ರೊಸೆಸರ್‌ ಹೊಂದಿದೆ

50MP ಸೆಲ್ಫಿ ಕ್ಯಾಮೆರಾ ಇರುವ ಪಡೆದಿರುವ Vivo V50 ಬೆಲೆಯಲ್ಲಿ ಈಗ ಭಾರೀ ಕಡಿತ!

Vivo ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಗೆದ್ದಿವೆ. ಆ ಪೈಕಿ ಸದ್ಯ ನೀವು ಹೊಸ Vivo ಮೊಬೈಲ್‌ ಖರೀದಿಸುವ ಪ್ಲಾನ್ ಹೊಂದಿದ್ದರೆ ನಿಮಗೆ ಗುಡ್‌ನ್ಯೂಸ್ ಇದೆ. ಹೌದು, ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಒನ್‌ಪ್ಲಸ್‌ ಸಂಸ್ಥೆಯ Vivo V50 ಸ್ಮಾರ್ಟ್‌ಫೋನ್‌ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಇದಲ್ಲದೇ ಬ್ಯಾಂಕ್‌ ಆಫರ್‌ ಪಡೆದುಕೊಂಡು ಖರೀದಿಸಿದರೆ ಮತ್ತಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದಹಾಗೆ ವಿವೋದ ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಅಲ್ಲದೇ ಇದು Snapdragon 7 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇನ್ನು ಈ ಫೋನ್‌ ರೋಜ ರೆಡ್‌, ಸ್ಟೇರಿ ನೈಟ್‌ ಹಾಗೂ ಟೈಟಾನಿಯಂ ಗ್ರೇ ಕಲರ್‌ ಆಯ್ಕೆಯಲ್ಲಿ ಖರೀದಿ ಲಭ್ಯವಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ವಿವೋ V50 ಮೊಬೈಲ್‌ಗೆ ಲಭ್ಯ ಇರುವ ಆಫರ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಮಾರುಕಟ್ಟೆಗೆ ಬಂದೇ ಬಿಡ್ತು Tecno Spark 50 5G ಸ್ಮಾರ್ಟ್‌ಫೋನ್‌! ಜಬರ್ದಸ್ತ್‌ ಬ್ಯಾಟರಿ ಸೌಲಭ್ಯ

Vivo V50 ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ

ಜನಪ್ರಿಯ ವಿವೋ V50 ಮೊಬೈಲ್‌ ಸದ್ಯ Flipkart ಇ ಕಾಮರ್ಸ್‌ ತಾಣದಲ್ಲಿ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 8GB RAM + 256 GB ವೇರಿಯಂಟ್‌ 42,999 ರೂಗಳ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಆದರೆ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 34,999 ರೂಗಳ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಈ ಫೋನ್‌ ಖರೀದಿಸುವ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಹಾಗೂ ಆಕರ್ಷಕ EMI ಆಯ್ಕೆಗಳನ್ನು ಸಹ ಪಡೆಯಬಹುದು. ಇನ್ನು ಈ ಮೊಬೈಲ್‌ ರೋಜ ರೆಡ್‌, ಸ್ಟೇರಿ ನೈಟ್‌ ಹಾಗೂ ಟೈಟಾನಿಯಂ ಗ್ರೇ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Vivo V50

Vivo V50 ಮೊಬೈಲ್‌ನ ಪ್ರಮುಖ ಫೀಚರ್ಸ್‌

ವಿವೋ V50 ಮೊಬೈಲ್‌ 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ 120Hz ವರೆಗೆ ರಿಫ್ರೆಶ್ ರೇಟ್‌ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 4,500 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಒದಗಿಸುವ ಸೌಲಭ್ಯ ಹೊಂದಿದೆ. ಅಂದಹಾಗೆ ಈ ಮೊಬೈಲ್‌ ಕ್ವಾಲ್ಕಮ್‌ Snapdragon 7 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 128GB, 256GB ಹಾಗೂ 512GB ಆಂತರೀಕ ಸ್ಟೋರೇಜ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಹಾಗೆಯೇ ವಿವೋ V50 ಮೊಬೈಲ್‌ ಕ್ಯಾಮೆರಾ ವಿಭಾಗವು ಅತ್ಯುತ್ತಮ ಆಗಿದೆ. ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್‌ ಆಗಿದ್ದು, ಸೆಕೆಂಡರಿ ಕ್ಯಾಮೆರಾವು ಸಹ 50MP ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಸಹ ಈ ಮೊಬೈಲ್‌ 50MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 6,000mAh ಬ್ಯಾಟರಿ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo