Vivo V50 launch date confirmed in India
Vivo V50 Launch Confirmed: ಭಾರತದಲ್ಲಿ ಮುಂಬರಲಿರುವ ವಿವೋ ಸ್ಮಾರ್ಟ್ಫೋನ್ ಕಂಪನಿಯ ಈ Vivo V50 ಸ್ಮಾರ್ಟ್ಫೋನ್ ಕೊನೆಗೂ ಅನಾವರಣದ ಡೇಟ್ ಕಂಫಾರ್ಮ್ ಮಾಡಿದೆ. ಸ್ಮಾರ್ಟ್ಫೋನ್ ಬರೋಬ್ಬರಿ 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದೊಂದಿಗೆ ಇದೆ ತಿಂಗಳು ಫೆಬ್ರವರಿ ಬಿಡುಗಡೆಯಾಗುವುದಾಗಿ ಈಗ ಸ್ವತಃ ಕಂಪನಿ ಮಾಹಿತಿ ನೀಡಿದೆ. ಪ್ರಸ್ತುತ ಈ Vivo V50 ಸ್ಮಾರ್ಟ್ಫೋನ್ ಅದ್ದೂರಿಯ ಫೀಚರ್‌ಗಳ ಆಧಾರದ ಮೇರೆಗೆ ಆರಂಭಿಕ ಸುಮಾರು 40,000 ರೂಗಳಿಗೆ ನಿರೀಕ್ಷಿಸಲಾಗಿದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು? ಎಲ್ಲವನ್ನು ಈ ಕೆಳಗೆ ಪರಿಶೀಲಿಸಬಹುದು.
ಈ ಮುಂಬರಲಿರುವ Vivo V50 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಗೆ ಅಧಿಕೃತವಾಗಿ ಡೇಟ್ ಕಂಫಾರ್ಮ್ ಮಾಡಿದೆ. ಕಂಪನಿ ಇದರ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದು Vivo V50 ಸ್ಮಾರ್ಟ್ಫೋನ್ 17ನೇ ಫೆಬ್ರವರಿ 2025 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಯಾಗುವುದಾಗಿ ಪೋಸ್ಟ್ ಮಾಡಿದೆ.
ಅಲ್ಲದೆ ಕಂಪನಿ ಈ ಸ್ಮಾರ್ಟ್ಫೋನ್ ಅನ್ನು ಕ್ಯಾಮೆರಾ ವಿಭಾಗದಲ್ಲಿ ಪರಿಚಯಿಸಿದ್ದು #ZEISSPortraitSoPro ಎಂಬ ಹೊಸ ಟ್ಯಾಗ್ ಜೊತೆಗೆ ಪೋಸ್ಟ್ ಮಾಡಿದೆ. ಅಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರು ಆಕರ್ಷಕ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್ಫೋನ್ ಪಡೆಯಬಹುದು.
Also Read: Samsung Galaxy S25 Series ಸ್ಮಾರ್ಟ್‌ಫೋನ್‌ಗಳ ಭರ್ಜರಿ ಮಾರಾಟ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?
ಈ ಮುಂಬರಲಿರುವ ಸ್ಮಾರ್ಟ್ಫೋನ್ 6.7 ಇಂಚಿನ QLED Curved ಡಿಸ್ಪ್ಲೇಯೊಂದಿಗೆ Diamond Shield Glass ಪ್ರೊಟೆಕ್ಷನ್ ಜೊತೆಗೆ ಬರುತ್ತದೆ. ಡಸ್ಟ್ ಮತ್ತು ವಾಟರ್ ರಕ್ಷಣೆಗಾಗಿ ಫೋನ್ IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿರುತ್ತದೆ. ಫೋನ್ ಕರ್ವ್ ಡಿಸ್ಪ್ಲೇಯೊಂದಿಗೆ ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಈ ಸೆಟಪ್‌ನಲ್ಲಿ OIS ಬೆಂಬಲದೊಂದಿಗೆ 50MP ಪ್ರೈಮರಿ ಕ್ಯಾಮೆರಾ ಇರುತ್ತದೆ. ಅದರೊಂದಿಗೆ 50MP ಅಲ್ಟ್ರಾ-ವೈಡ್ ಸೆನ್ಸರ್ 4K ವೀಡಿಯೊ ರೆಕಾರ್ಡಿಂಗ್ ಬೆಂಬಲದೊಂದಿಗೆ ಬರುತ್ತದೆ.
ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಫೋನ್ ಪವರ್ ಬ್ಯಾಕಪ್‌ಗಾಗಿ 6000mAh ಬ್ಯಾಟರಿಯನ್ನು ಹೊಂದಿರುತ್ತದೆ. ಈ ಫೋನ್ ರೋಸ್ ರೆಡ್, ಟೈಟಾನಿಯಂ ಗ್ರೇ ಮತ್ತು ಸ್ಟಾರಿ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಆದಾಗ್ಯೂ ಫೋನ್ ಬಿಡುಗಡೆಯಾದ ನಂತರ ಫೋನ್‌ನ ಬೆಲೆ ಮತ್ತು ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ.