Vivo V50 Smartphone Launch 2025
Vivo V50 Smartphone: ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಮುಂಬರುವ Vivo V50 ಸ್ಮಾರ್ಟ್‌ಫೋನ್‌ನ ಭಾರತೀಯ ಬಿಡುಗಡೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ Vivo V50 ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಮೊದಲೇ ಅದರ ಫೀಚರ್ ದೃಢಪಡಿಸಲಾಗಿದೆ. ಕಂಪನಿಯು ಈ ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ವಿವೋ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಸೈಟ್‌ಗಳಲ್ಲಿ ಲೈವ್ ಮಾಡಿದೆ. Vivo V50 ಸ್ಮಾರ್ಟ್‌ಫೋನ್ 50MP ಕ್ಯಾಮೆರಾದ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 18ನೇ ಫೆಬ್ರವರಿ 2025 ರಂದು ಬಿಡುಗಡೆ ನಿರೀಕ್ಷಿಸಲಾಗಿದೆ.
ಈ ಮೈಕ್ರೋಸೈಟ್ ಫೋನ್ ಬಿಡುಗಡೆಯಾಗುವ ಮೊದಲೇ ಅದರ ಪ್ರಮುಖ ವೈಶಿಷ್ಟ್ಯಗಳನ್ನು ದೃಢಪಡಿಸಿದೆ. ಈ ಫೋನ್ ಜಂಬೋ ಬ್ಯಾಟರಿಯನ್ನು ಹೊಂದಿದ್ದು ತುಂಬ ಸ್ಲಿಮ್ ಆಗಿರಲಿದೆ. ಈ ಮುಂಬರುವ Vivo V50 ಸ್ಮಾರ್ಟ್‌ಫೋನ್‌ಗಾಗಿ ಫ್ಲಿಪ್ಕಾರ್ಟ್ ಮೀಸಲಾದ ಮೈಕ್ರೋಸೈಟ್ ವಿವೋ ಇಂಡಿಯಾ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರವಾಗಿದೆ. ಈ ಫೋನ್ ಫೀಚರ್ ಬಗ್ಗೆ ಅಷ್ಟಾಗಿ ಕಂಪನಿಯು ಇನ್ನೂ ದೃಢಪಡಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಸ್ಮಾರ್ಟ್‌ಫೋನ್ ಅನ್ನು ಮತ್ತೊಮ್ಮೆ ‘ಶೀಘ್ರದಲ್ಲೇ ಬರಲಿದೆ’ ಎಂಬ ಟ್ಯಾಗ್‌ನೊಂದಿಗೆ ಟೀಸ್ ಮಾಡಲಾಗುತ್ತಿದೆ.
Also Read: ನೀವೊಂದು ಹೊಸ Smart Tv ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಈ ಅಂಶಗಳನ್ನು ತಿಳಿಯುವುದು ಮುಖ್ಯವಾಗಿದೆ.
ಈ ಮುಂಬರಲಿರುವ Vivo V50 ಸ್ಮಾರ್ಟ್‌ಫೋನ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಬಣ್ಣ ಆಯ್ಕೆಗಳನ್ನು ಫೋನ್‌ನ ಮೀಸಲಾದ ಮೈಕ್ರೋಸೈಟ್ ಮೂಲಕ ಬಹಿರಂಗಪಡಿಸಲಾಗಿದೆ ಎಂಬುದನ್ನು ಗಮನಿಸಬೇಕಿದೆ. ಈ ಫೋನಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಈ ಫೋನ್ Vivo V40 ನಂತೆಯೇ ಕಾಣುತ್ತದೆ. ಫೋನ್‌ನ ಹಿಂಭಾಗವು ಕ್ಯಾಪ್ಸುಲ್ ಗಾತ್ರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದ್ದು ಕ್ಯಾಮೆರಾ ಸೆಟಪ್ ಅನ್ನು ವೃತ್ತಾಕಾರದ ಉಂಗುರದೊಳಗೆ ಇರಿಸಲಾಗಿದೆ.
ಡಸ್ಟ್ ಮತ್ತು ವಾಟರ್ ರಕ್ಷಣೆಗಾಗಿ ಫೋನ್ IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿರುತ್ತದೆ. ಫೋನ್ ಕರ್ವ್ ಡಿಸ್ಪ್ಲೇಯೊಂದಿಗೆ ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಈ ಸೆಟಪ್‌ನಲ್ಲಿ OIS ಬೆಂಬಲದೊಂದಿಗೆ 50MP ಪ್ರೈಮರಿ ಕ್ಯಾಮೆರಾ ಇರುತ್ತದೆ. ಅದರೊಂದಿಗೆ 50MP ಅಲ್ಟ್ರಾ-ವೈಡ್ ಸೆನ್ಸರ್ 4K ವೀಡಿಯೊ ರೆಕಾರ್ಡಿಂಗ್ ಬೆಂಬಲದೊಂದಿಗೆ ಬರುತ್ತದೆ.
ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಫೋನ್ ಪವರ್ ಬ್ಯಾಕಪ್‌ಗಾಗಿ 6000mAh ಬ್ಯಾಟರಿಯನ್ನು ಹೊಂದಿರುತ್ತದೆ. ಈ ಫೋನ್ ರೋಸ್ ರೆಡ್, ಟೈಟಾನಿಯಂ ಗ್ರೇ ಮತ್ತು ಸ್ಟಾರಿ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಆದಾಗ್ಯೂ ಫೋನ್ ಬಿಡುಗಡೆಯಾದ ನಂತರ ಫೋನ್‌ನ ಬೆಲೆ ಮತ್ತು ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ.