ಹೊಸ Vivo T5x ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವಂತೆ ಆಗಿದೆ

HIGHLIGHTS

ವಿವೋ T5x ಮೊಬೈಲ್‌ ಬೆಲೆಯಲ್ಲಿ ದಿಢೀರ್ ಹೆಚ್ಚಳ

ವಿವೋ T5x ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ 2,000ರೂ ಏರಿಕೆ

ಈ ಮೊಬೈಲ್‌ 44W ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್ ಪಡೆದಿದೆ

ಹೊಸ Vivo T5x ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವಂತೆ ಆಗಿದೆ

ಜನಪ್ರಿಯ ವಿವೋ ಮೊಬೈಲ್‌ ಕಂಪನಿಯು ಇತ್ತೀಚಿಗೆ Vivo T5x ಫೋನ್‌ ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ Vivo T4x ಫೋನಿನ ಯಶಸ್ಸಿನ ಮುಂದಿನ ಆವೃತ್ತಿಯಾಗಿದೆ. ಬಿಡುಗಡೆ ಆದ ಕೆಲವೇ ವಾರಗಳಲ್ಲಿ ಈ ಫೋನ್‌ ಗ್ರಾಹಕರಿಗೆ ಅಚ್ಚರಿಯನಿಸುವಂತೆ ಬೆಲೆ ಏರಿಕೆ ಕಂಡಿದೆ. ಹೌದು, ಟಿಪ್‌ಸ್ಟರ್ಯೊಬ್ಬರ ವರದಿ ಪ್ರಕಾರ ಇದೇ ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಈ ಫೋನಿನ ಎಲ್ಲಾ ವೇರಿಯಂಟ್‌ಗಳ ಬೆಲೆಯಲ್ಲಿ 2,000 ರೂ.ಗಳ ಬೆಲೆ ಏರಿಕೆ ಆಗಲಿದೆ ಎಂದು ವರದಿಗಳಾಗಿವೆ. ಇನ್ನು 7,200mAh ಬ್ಯಾಟರಿ ಸಪೋರ್ಟ್‌ ಪಡೆದಿರುವ ಜೊತೆಗೆ 32MP ಸೆಲ್ಫಿ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗಾದರೆ ವಿವೋ T5x ಫೋನಿನ ಹೊಸ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಏಪ್ರಿಲ್‌ 2 ರಂದು ಬರಲಿರುವ Redmi Note 15 SE 5G ಫೋನಿನ ಬ್ಯಾಟರಿ ಮಾಹಿತಿ ಬಹಿರಂಗ

Vivo T5x ಮೊಬೈಲ್‌ ಬೆಲೆ ಏರಿಕೆಯ ಮಾಹಿತಿ

ಹೊಸ ವಿವೋ T5x ಫೋನ್‌ ಬೆಲೆ ಏರಿಕೆ ಪಡೆದಿದ್ದು, ಖರೀದಿದಾರರಿಗೆ ಶಾಕ್ ಎನಿಸಿದೆ. ಈ ಫೋನಿನ 6GB + 128GB ವೇರಿಯಂಟ್‌ ಬೆಲೆ 18,999 ರೂ.ಗಳ ಆಗಿದೆ. ಬೆಲೆ ಏರಿಕೆ ಬಳಿಕ ಈ ವೇರಿಯಂಟ್‌ ದರ 20,999 ರೂ.ಗಳಿಗೆ ಲಭ್ಯ. ಹಾಗೆಯೇ 8GB + 128GB ವೇರಿಯಂಟ್‌ ಬೆಲೆ 20,999 ರೂ.ಗಳ ಆಗಿದೆ. ಬೆಲೆ ಏರಿಕೆ ಬಳಿಕ ಈ ವೇರಿಯಂಟ್‌ ದರ 22,999. ಅದೇ ರೀತಿ 22,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ 8GB + 256GB ವೇರಿಯಂಟ್‌ ಬೆಲೆ ಏರಿಕೆ ಬಳಿಕ 24,999 ರೂ.ಗಳಿಗೆ ಲಭ್ಯ. ಅಂದಹಾಗೆ ಚಿಪ್‌ಸೆಟ್‌ಗಳು ಮತ್ತು ಮೆಮೊರಿಯಂತಹ ಬಿಡಿಭಾಗಗಳ ಬೆಲೆಗಳಲ್ಲಿ ಏರಿಕೆಯನ್ನು ಕಾಣುತ್ತಿರುವುದು ಮೊಬೈಲ್‌ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

Vivo T5x

ವಿವೋ T5x 5G ಫೀಚರ್ಸ್‌ ಹೀಗಿವೆ

ನೂತನ ವಿವೋ T5x 5G ಮೊಬೈಲ್ 6.76 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್‌ 1200 nits ಬ್ರೈಟ್ನೆಸ್‌ ಹೊಂದಿದ್ದು 2408×1080 ಪಿಕ್ಸೆಲ್‌ ರೆಸಲ್ಯೂಶನ್‌ ಒಳಗೊಂಡಿದೆ. ಈ ಮೊಬೈಲ್‌ ಆಕ್ಟಾ ಕೋರ್ MediaTek Dimensity 7400 Turbo ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 6GB RAM + 128GB, 8GB RAM + 128GB ಹಾಗೂ 6GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

ವಿವೋ T5x 5G ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಆಗಿದ್ದು ಸೆಕೆಂಡರಿ ಕ್ಯಾಮೆರಾ 2MP ಸೆನ್ಸಾರ್‌ ಸೌಲಭ್ಯ ಪಡೆದಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಮೊಬೈಲ್‌ 7200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 44W ಫಾಸ್ಟ್ ಚಾರ್ಜಿಂಗ್‌ ಬೆಂಬಲ ಸಹ ಹೊಂದಿದೆ. ಅಲ್ಲದೇ ಧೂಳು ಮತ್ತು ನೀರು ಪ್ರತಿರೋಧಕ್ಕಾಗಿ ಈ ಫೋನ್ IP68 + IP69 ರೇಟಿಂಗ್‌ ಸೌಲಭ್ಯ ಹೊಂದಿದೆ. ಅಲ್ಲದೇ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo