Vivo ಕಂಪನಿಯ ಈ ಜನಪ್ರಿಯ ಮೊಬೈಲ್ ಬೆಲೆಯಲ್ಲಿ ಭಾರೀ ಏರಿಕೆ! 7,200mAh ಬ್ಯಾಟರಿ ಸೌಲಭ್ಯ
ವಿವೋ T5x 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಏರಿಕೆ
ಈ ಮೊಬೈಲ್ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ
ವಿವೋ T5x 5G ಫೋನ್ ಬೆಲೆಯಲ್ಲಿ ಈಗ 3,000ರೂ.ಗಳ ಏರಿಕೆ
ವಿವೋ ಮೊಬೈಲ್ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ Vivo T5x 5G ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಆದರೆ ಇದೀಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದ್ದು ಗ್ರಾಹಕರು ಅಚ್ಚರಿಯಿಂದ ನೋಡುವಂತಾಗಿದೆ. ವಿವೋ ಮೊಬೈಲ್ ಕಂಪನಿಯು ಈ ಮೊಬೈಲ್‌ನ ಹೊಸ ಬೆಲೆಯನ್ನು ಅಪ್‌ಡೇಟ್ ಮಾಡಿದೆ. ಅಂದಹಾಗೆ ವಿವೋ T5x 5G ಮೊಬೈಲ್‌ನ ಎಲ್ಲಾ ವೇರಿಯಂಟ್‌ಗಳ ಬೆಲೆಯಲ್ಲಿ 3,000 ರೂ.ಗಳ ಏರಿಕೆಯನ್ನು ಕಂಡಿದೆ. ಈ ಫೋನ್ 7,200mAh ಬ್ಯಾಟರಿ ಸಪೋರ್ಟ್ ಪಡೆದಿರುವ ಜೊತೆಗೆ 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಹಾಗಾದರೆ ವಿವೋ T5x 5G ಫೋನಿನ ಹೊಸ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : Jio ಟೆಲಿಕಾಂನ 629 ರೂ.ಗಳ ಪ್ಲಾನಿನಲ್ಲಿ ಸಖತ್ ಪ್ರಯೋಜನ! ಓಟಿಟಿ, ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ
Vivo T5x 5G ಫೋನ್ ಬೆಲೆ ಹೆಚ್ಚಳ
ವಿವೋ T5x 5G ಫೋನ್ ಬೆಲೆ ಏರಿಕೆ ಪಡೆದಿದೆ. ಇದು ವಿವೋ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್ ಎನಿಸಿದೆ. ಈ ಫೋನಿನ 6GB + 128GB ವೇರಿಯಂಟ್ ಹಳೆಯ ಬೆಲೆ 24,999 ರೂ.ಗಳ ಆಗಿದೆ. ಈ ವೇರಿಯಂಟ್ ಹೊಸ ದರ 27,999 ರೂ.ಗಳಿಗೆ ಲಭ್ಯ. ಹಾಗೆಯೇ 8GB + 128GB ವೇರಿಯಂಟ್ ಹಳೆಯ ಬೆಲೆ 27,999 ರೂ.ಗಳ ಆಗಿದೆ. ಈ ವೇರಿಯಂಟ್ ಹೊಸ ದರ 30,999 ರೂ.ಗಳು ಆಗಿದೆ. ಅದೇ ರೀತಿ 8GB + 256GB ವೇರಿಯಂಟ್ ಹಳೆಯ ಬೆಲೆ 30,999 ರೂ.ಗಳ ಆಗಿದೆ. ಈ ವೇರಿಯಂಟ್ ಹೊಸ ದರ 34,999 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್ ಸೈಬರ್ ಗ್ರೀನ್ ಮತ್ತು ಸ್ಟಾರ್ ಸಿಲ್ವರ್ ಕಲರ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

ವಿವೋ T5x 5G ಫೀಚರ್ಸ್ ಹೀಗಿವೆ
ವಿವೋ T5x 5G ಮೊಬೈಲ್ 6.76 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್ 1200 nits ಬ್ರೈಟ್ನೆಸ್ ಹೊಂದಿದ್ದು 2408×1080 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಈ ಮೊಬೈಲ್ ಆಕ್ಟಾ ಕೋರ್ MediaTek Dimensity 7400 Turbo ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 6GB RAM + 128GB, 8GB RAM + 128GB ಹಾಗೂ 6GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.
ವಿವೋ T5x 5G ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಆಗಿದ್ದು ಸೆಕೆಂಡರಿ ಕ್ಯಾಮೆರಾ 2MP ಸೆನ್ಸಾರ್ ಸೌಲಭ್ಯ ಪಡೆದಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಮೊಬೈಲ್ 7,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಹೊಂದಿದೆ. ಅಲ್ಲದೇ ಧೂಳು ಮತ್ತು ನೀರು ಪ್ರತಿರೋಧಕ್ಕಾಗಿ ಈ ಫೋನ್ IP68 + IP69 ರೇಟಿಂಗ್ ಸೌಲಭ್ಯ ಹೊಂದಿದೆ. ಅಲ್ಲದೇ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಹೊಂದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
