ಸದ್ದಿಲ್ಲದೆ ಭಾರತದಲ್ಲಿ Vivo T5e ಸ್ಮಾರ್ಟ್‌ಫೋನ್‌ ಬಿಡುಗಡೆ! ಅಗ್ಗದ ಬೆಲೆಗೆ ಲಭ್ಯ

HIGHLIGHTS

ವಿವೋ T5e ಫೋನ್ ಮೊಬೈಲ್‌ ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿದೆ

ವಿವೋ T5e ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ

ವಿವೋ T5e ಮೊಬೈಲ್‌ ಏರೋ ಬ್ಲೂ ಮತ್ತು ಶ್ಯಾಡೋ ಗ್ರೇ ಕಲರ್‌ ಆಯ್ಕೆ ಒಳಗೊಂಡಿದೆ

ಜನಪ್ರಿಯ ವಿವೋ ಮೊಬೈಲ್‌ ಕಂಪನಿಯು ಅಗ್ಗದ ಬೆಲೆಯಲ್ಲಿ ಹೊಸದಾಗಿ Vivo T5e ಸ್ಮಾರ್ಟ್‌ಫೋನ್‌ ಅನ್ನು ಇಂದು (ಜುಲೈ 27) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಗ್ಗದ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ Unisoc T7225 ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿದೆ. ಅಲ್ಲದೇ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಇದರೊಂದಿಗೆ ಈ ಫೋನ್‌ ಪ್ರಾಥಮಿಕ ಕ್ಯಾಮೆರಾವು 8MP ಸೆನ್ಸಾರ್‌ ಆಗಿದೆ. ಇನ್ನು ಈ ಫೋನ್‌ ಏರೋ ಬ್ಲೂ ಮತ್ತು ಶ್ಯಾಡೋ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹಾಗಾದರೇ ವಿವೋ T5e ಮೊಬೈಲ್‌ ಬೆಲೆ, ಸೇಲ್‌ ಡೇಟ್ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಬಜೆಟ್‌ ಬೆಲೆಯ Realme P4x 5G ಮೊಬೈಲ್‌ ಈಗ ಇನ್ನಷ್ಟು ರಿಯಾಯಿತಿಯಲ್ಲಿ ಲಭ್ಯ!

Vivo T5e ಮೊಬೈಲ್‌ ಬೆಲೆ ಹಾಗೂ ಲಭ್ಯತೆ

ವಿವೋ ಕಂಪನಿಯ ಹೊಸ ವಿವೋ T5e ಮೊಬೈಲ್‌ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳದಿದೆ. ವಿವೋ T5e ಫೋನಿನ 4GB RAM + 64GB ವೇರಿಯಂಟ್‌ ಬೆಲೆಯು 13,999 ರೂ.ಗಳು ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಪ್ರಸ್ತುತ ವಿವೋ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಇತರ ಆಫ್‌ಲೈನ್ ರೀಟೇಲ್‌ ಸ್ಟೋರ್‌ಗಳ ಮೂಲಕ ಭಾರತದಲ್ಲಿ ಮಾರಾಟದಲ್ಲಿ ಇದೆ. ಅಂದಹಾಗೆ ಈ ಮೊಬೈಲ್‌ ಏರೋ ಬ್ಲೂ ಮತ್ತು ಶ್ಯಾಡೋ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ವಿವೋ T5e ಫೋನಿನ ಫೀಚರ್ಸ್‌ ಹೀಗಿವೆ

ವಿವೋ T5e ಫೋನ್‌ 6.74 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿವೆ. ಇದರ ಡಿಸ್‌ಪ್ಲೇಯು 90Hz ವರೆಗೆ ರಿಫ್ರೆಶ್ ರೇಟ್‌ ಜೊತೆಗೆ 720 x 1,600 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ Unisoc T7225 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ 4GB RAM + 64GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ. ಅಲ್ಲದೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಪಡೆದುಕೊಂಡಿದೆ.

ಹಾಗೆಯೇ ವಿವೋ T5e ಮೊಬೈಲ್‌ ಹಿಮಭಾಗದಲ್ಲಿ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಅದು 8MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿರುವ ಜೊತೆಗೆ 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :