ನಾಳೆ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ Vivo T5 Pro ಸ್ಮಾರ್ಟ್‌ಫೋನ್! ಫೀಚರ್ಸ್ ನೋಡಿ
ನಾಳೆ (ಏಪ್ರಿಲ್ 15 ರಂದು) ಭಾರತದಲ್ಲಿ ವಿವೋ T5 ಪ್ರೊ ಮೊಬೈಲ್ ಲಾಂಚ್
ವಿವೋ T5 ಪ್ರೊ ಮೊಬೈಲ್ AMOLED ಡಿಸ್‌ಪ್ಲೇ ಮಾದರಿಯ ಹೊಂದಿರಲಿದೆ
ವಿವೋ T5 ಪ್ರೊ ಫೋನ್ 9,020mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದೆ
ವಿವೋ ಸಂಸ್ಥೆಯ Vivo T5 Pro ಸ್ಮಾರ್ಟ್‌ಫೋನ್ ಭಾರತದಲ್ಲಿ ನಾಳೆ (ಏಪ್ರಿಲ್ 15 ರಂದು) ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಪೇಜ್ ಲೈವ್ ಆಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ 9,020mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಈ ಫೋನ್ Snapdragon 7s Gen 4 ಚಿಪ್‌ಸೆಟ್ ಜೊತೆಗೆ 1.5K ರೆಸಲ್ಯೂಶನ್ ಬೆಂಬಲಿತ AMOLED ಡಿಸ್‌ಪ್ಲೇ ಸೌಲಭ್ಯ ಒಳಗೊಂಡಿರುವ ಸಾಧ್ಯತೆಗಳು ಇವೆ. ಅಲ್ಲದೇ ಇದು ವೈಟ್ ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಹಾಗಾದರೆ ಮುಂಬರುವ ವಿವೋ T5 ಪ್ರೊ ಮೊಬೈಲ್‌ನ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Bob World Lite App ಬಿಡುಗಡೆ! ಜಿಯೋ ಕೀಪ್ಯಾಡ್ ಫೋನ್‌ನಲ್ಲಿಯೂ ಲಭ್ಯ
Vivo T5 Pro ಮೊಬೈಲ್‌ನ ಬಿಡುಗಡೆ ಮಾಹಿತಿ
ವಿವೋ ಕಂಪನಿಯು ಬಜೆಟ್ ದರದಲ್ಲಿ ಹೊಸದಾಗಿ ವಿವೋ T5 ಪ್ರೊ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ನೂತನ ಸ್ಮಾರ್ಟ್‌ಫೋನ್ ಅನ್ನು ನಾಳೆ (ಏಪ್ರಿಲ್ 15 ರಂದು) ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ದೃಢಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈಟ್ ಕಲರ್ ಆಯ್ಕೆ ಒಳಗೊಂಡಿರುವ ಬಗ್ಗೆ ಟೀಸರ್ ಸೂಚಿಸುತ್ತದೆ. ಈ ಮೊಬೈಲ್‌ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಹೊರಹಾಕಿಲ್ಲ.

ವಿವೋ T5 ಪ್ರೊ ಮೊಬೈಲ್‌ನ ನಿರೀಕ್ಷಿತ ಫೀಚರ್ಸ್
ಹೊಸ ವಿವೋ T5 ಪ್ರೊ ಮೊಬೈಲ್ 9,020mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಹಾಗೆಯೇ ಈ ಫೋನ್ ತೆಳ್ಳಗಿನ ರಚನೆ ಪಡೆದಿರುತ್ತದೆ ಎಂದು ಸಂಸ್ಥೆಯು ಸೂಚಿಸಿದೆ. ಹಾಗೆಯೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದ್ದು ಇದು ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿರಲಿದೆ. ಇದರ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್ ಬಟನ್‌ಗಳನ್ನು ಫೋನ್‌ನ ಎಡಭಾಗದಲ್ಲಿ ನೀಡಲಾಗಿದೆ. ಇದರೊಂದಿಗೆ ಈ ಫೋನ್ 120 fps ವರೆಗಿನ ಗೇಮಿಂಗ್ ಸಪೋರ್ಟ್ ಒಳಗೊಂಡಿರಲಿದೆ.
ಇನ್ನು ವಿವೋ T5 ಪ್ರೊ ಮೊಬೈಲ್ 6.8 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದಕ್ಕೆ ಪೂರಕವಾಗಿ 144Hz ವರೆಗೆ ರಿಫ್ರೆಶ್ ರೇಟ್ ಸಪೋರ್ಟ್ ಅನ್ನು ಒದಗಿಸುವ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಸ್ಪೀಕರ್ ಗ್ರಿಲ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿರುತ್ತದೆ. ವಿವೋದ ಈ ನೂತನ ಫೋನ್ ಅನ್ನು ಕಾಸ್ಮಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಈ ಫೋನಿನ ಬೆಲೆ 30,000 ರೂ.ಗಳಿಂದ 35,000 ರೂ.ಗಳ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile