Vivo T5 Pro ಸ್ಮಾರ್ಟ್‌ಫೋನ್ ಲಾಂಚ್‌ಗೆ ದಿನಾಂಕ ಫಿಕ್ಸ್! ಜಬರ್ದಸ್ತ್ ಫೀಚರ್ಸ್ ನಿರೀಕ್ಷೆ
ಇದೇ ಏಪ್ರಿಲ್ 15 ರಂದು ಭಾರತದಲ್ಲಿ ವಿವೋ T5 ಪ್ರೊ ಮೊಬೈಲ್ ಲಾಂಚ್
ವಿವೋ T5 ಪ್ರೊ ಫೋನ್ 9,020mAh ಬ್ಯಾಟರಿ ಸಪೋರ್ಟ್ ಪಡೆದಿರಲಿದೆ
ವಿವೋ T5 ಪ್ರೊ ಮೊಬೈಲ್ 1.5K ರೆಸಲ್ಯೂಶನ್ AMOLED ಡಿಸ್‌ಪ್ಲೇ ಒಳಗೊಂಡಿರಲಿದೆ
ಜನಪ್ರಿಯ Vivo ಕಂಪನಿಯು ಹೊಸದಾಗಿ Vivo T5 Pro ಸ್ಮಾರ್ಟ್‌ಫೋನ್ ಅನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಲು ಸಕಲ ತಯಾರಿ ನಡೆಸಿದೆ. ಇದೀಗ ಈ ಮೊಬೈಲ್ ಮುಂದಿನ ವಾರದಲ್ಲಿ ಲಾಂಚ್ ಆಗೋದು ಕನ್ಫರ್ಮ್ ಆಗಿದೆ. ಇನ್ನು ವಿವೋ T5 ಪ್ರೊ ಮೊಬೈಲ್ ಲಾಂಚ್ ಡೇಟ್ ಕುರಿತಾಗಿ ವಿವೋ ಸಂಸ್ಥೆಯು ಎಕ್ಸ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್ ಬೆಂಬಲದೊಂದಿಗೆ AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದೆ. ಅಲ್ಲದೇ Snapdragon 7s Gen 4 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗಾದರೆ ಮುಂಬರುವ ವಿವೋ T5 ಪ್ರೊ ಮೊಬೈಲ್‌ನ ಲಾಂಚ್ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : 9,000mAh ಸಿಲಿಕಾನ್ ಬ್ಯಾಟರಿ ಇರುವ OnePlus Nord 6 ಮೊಬೈಲ್ ನಾಳೆ ಖರೀದಿಗೆ ಲಭ್ಯ!
Vivo T5 Pro ಮೊಬೈಲ್‌ನ ಲಾಂಚ್ ಮಾಹಿತಿ
ವಿವೋ ಕಂಪನಿಯು ಕಡಿಮೆ ಬೆಲೆಯಲ್ಲಿ ಹೊಸದಾಗಿ ವಿವೋ T5 ಪ್ರೊ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ನೂತನ ಸ್ಮಾರ್ಟ್‌ಫೋನ್ ಅನ್ನು ಇದೇ ಏಪ್ರಿಲ್ 15 ರಂದು ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ದೃಢಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈಟ್ ಕಲರ್ ಆಯ್ಕೆ ಒಳಗೊಂಡಿರುವ ಬಗ್ಗೆ ಟೀಸರ್ ಸೂಚಿಸುತ್ತದೆ. ಈ ಮೊಬೈಲ್‌ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಹೊರಹಾಕಿಲ್ಲ.

ವಿವೋ T5 ಪ್ರೊ ಫೋನಿನ ನಿರೀಕ್ಷಿತ ಫೀಚರ್ಸ್
ಹೊಸ ವಿವೋ T5 ಪ್ರೊ ಮೊಬೈಲ್ 9,020mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಹಾಗೆಯೇ ಈ ಫೋನ್ ತೆಳ್ಳಗಿನ ರಚನೆ ಪಡೆದಿರುತ್ತದೆ ಎಂದು ಸಂಸ್ಥೆಯು ಸೂಚಿಸಿದೆ. ಹಾಗೆಯೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದ್ದು ಇದು ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿರಲಿದೆ. ಇದರ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್ ಬಟನ್‌ಗಳನ್ನು ಫೋನ್‌ನ ಎಡಭಾಗದಲ್ಲಿ ನೀಡಲಾಗಿದೆ. ಇದರೊಂದಿಗೆ ಈ ಫೋನ್ 120 fps ವರೆಗಿನ ಗೇಮಿಂಗ್ ಸಪೋರ್ಟ್ ಒಳಗೊಂಡಿರಲಿದೆ.
ಇನ್ನು ವಿವೋ T5 ಪ್ರೊ ಮೊಬೈಲ್ 6.8 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದಕ್ಕೆ ಪೂರಕವಾಗಿ 144Hz ವರೆಗೆ ರಿಫ್ರೆಶ್ ರೇಟ್ ಸಪೋರ್ಟ್ ಅನ್ನು ಒದಗಿಸುವ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಸ್ಪೀಕರ್ ಗ್ರಿಲ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿರುತ್ತದೆ. ವಿವೋದ ಈ ನೂತನ ಫೋನ್ ಅನ್ನು ಕಾಸ್ಮಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಈ ಫೋನಿನ ಬೆಲೆ 30,000 ರೂ.ಗಳಿಂದ 35,000 ರೂ.ಗಳ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile