ವಿವೋ ಮೊಬೈಲ್ ಕಂಪನಿಯು ಭಾರತದಲ್ಲಿ ಹೊಸದಾಗಿ Vivo T5 Lite ಮೊಬೈಲ್ ಅನ್ನು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಹೊಸ ಸ್ಮಾರ್ಟ್‌ಫೋನ್ ಈ ಹಿಂದಿನ ವಿವೋ T4 ಲೈಟ್ ಫೋನಿನ ಉತ್ತರಾಧಿಕಾರಿ ಎನ್ನಲಾಗಿದೆ. ಈ ಫೋನ್ ಲಾಂಚ್ ಕುರಿತು ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಅಂದಹಾಗೆ ಎಂಟ್ರಿ ಕೊಡಲಿರುವ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಅಥವಾ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಇನ್ನು ಈ ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ. ಹಾಗಾದರೆ ವಿವೋ T5 ಲೈಟ್ ಮೊಬೈಲ್‌ನ ಲಾಂಚ್ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Jio ಕಂಪನಿಯ ಈ ಪ್ಲಾನ್‌ಗಳಲ್ಲಿ 20GB ಡೇಟಾ ಉಚಿತ; ಆಕರ್ಷಕ ವ್ಯಾಲಿಡಿಟಿ
ವಿವೋ ಮೊಬೈಲ್ ಕಂಪನಿಯ ಹೊಸ ವಿವೋ T5 ಲೈಟ್ ಮೊಬೈಲ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ವಿವೋ ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಪೇಜ್ ಮೂಲಕ ಫೋನಿನ ವಿನ್ಯಾಸದ ಆರಂಭಿಕ ನೋಟವನ್ನು ನೀಡಿದೆ. ಲೀಕ್ ಮಾಹಿತಿ ಪ್ರಕಾರ ಈ ಮೊಬೈಲ್ 4GB + 128GB, 6GB + 128GB ಮತ್ತು 6GB + 256GB ಸ್ಟೋರೇಜ್ ವೇರಿಯಂಟ್‌ಗಳ ಆಯ್ಕೆ ಬರಲಿದೆ ಎನ್ನಲಾಗಿದೆ. ಹಾಗೆಯೇ ಟ್ವಿಲೈಟ್ ಶ್ಯಾಡೋ ಮತ್ತು ವೇವ್ ಬ್ಲೂ ಬಣ್ಣದ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ.
ಮುಂಬರುವ ಈ ಫೋನ್ 6.74 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಯಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಜೊತೆಗೆ 1,200 nits ವರೆಗಿನ ಹೈ ಬ್ರೈಟ್‌ನೆಸ್ ಸೌಲಭ್ಯ ಪಡೆದಿರಬಹುದು. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಅಥವಾ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ 4GB + 128GB, 6GB + 128GB ಮತ್ತು 6GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ.
ವಿವೋ T5 ಲೈಟ್ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಒಳಗೊಂಡಿರುವ ಸೂಚನೆಗಳು ಇವೆ. ಇನ್ನಜು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ನಲ್ಲಿ ಇರಬಹುದು ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್ ಬಲ ಪಡೆದಿರಲಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಬಹುದು ಎನ್ನಲಾಗಿದೆ. ಹಾಗೆಯೇ ಧೂಳು ಮತ್ತು ನೀರು-ನಿರೋಧಕ್ಕಾಗಿ ಇದು IP65 ರೇಟಿಂಗ್ ಸೌಲಭ್ಯ ಹೊಂದಿರಲಿದೆ.