Vivo T4x Launched in India
Vivo T4x Price Launched: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ಇಂದು ಭಾರತದಲ್ಲಿ ತನ್ನ ಲೇಟೆಸ್ಟ್ Vivo T4x 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ Vivo T4x 5G ಸ್ಮಾರ್ಟ್ಫೋನ್ ಪವರ್ಫುಲ್ Dimensity 7300 ಚಿಪ್ ಮತ್ತು ಅತಿದೊಡ್ಡ ಬ್ಯಾಟರಿ ಅಂದ್ರೆ 6500mAh ಬ್ಯಾಟರಿಯೊಂದಿಗೆ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಕೇವಲ 12999 ರೂಗಳಿಗೆ ನೀಡುವ ಏಕೈಕ 5G ಸ್ಮಾರ್ಟ್ಫೋನ್ ಅಂದ್ರೆ ತಪ್ಪಿಲ್ಲ ಕಣ್ರೀ. ಹಾಗಾದ್ರೆ ಈ Vivo T4x 5G ಸ್ಮಾರ್ಟ್ಫೋನ್ ಆಫರ್ ಬೆಲೆಯೊಂದಿಗೆ ಇದರ ಮಾರಾಟ ಮತ್ತು ಫೀಚರ್ಗಳೇನು ಎಲ್ಲವನ್ನು ಕೆಳಗೆ ಪರಿಶೀಲಿಸಬಹುದು.
ಈ Vivo T4x 5G ಸ್ಮಾರ್ಟ್ಫೋನ್ ಒಟ್ಟು ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಕೇವಲ 13,999 ರೂಗಳಿಗೆ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಕೇವಲ 14,999 ರೂಗಳಿಗೆ ಮತ್ತು ಕೊನೆಯದಾಗಿ 8GB RAM ಮತ್ತು 256GB ಸ್ಟೋರೇಜ್ ಕೇವಲ 16,999 ರೂಗಳಿಗೆ ಬಿಡುಗಡೆಯಾಗಿದೆ.
ಆದರೆ ಆಸಕ್ತ ಬಳಕೆದಾರರು SBI, HDFC ಮತ್ತು Axis ಬ್ಯಾಂಕ್ ಆಫರ್ ಅಡಿಯಲ್ಲಿ 1000 ರೂಗಳ ಹೆಚ್ಚುವರಿಯ ಡಿಸ್ಕೌಂಟ್‌ನೊಂದಿಗೆ ಆರಂಭಿಕ ಕೇವಲ 12,999 ರೂಗಳಿಗೆ ಖರೀದಿಸಬಹುದು. ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದ್ದು 12ನೇ ಮಾರ್ಚ್ 2025 ರಿಂದ ಮೊದಲ ಮಾರಾಟಕ್ಕೆ ಕಾಲಿಡಲಿದೆ. ಅಂದರೆ 6500mAh ಬ್ಯಾಟರಿ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ ಆಫರ್ ಮಾರಾಟಕ್ಕೆ ಜನ ವೈಟಿಂಗ್ ಆಸ್ತೆ ಅಷ್ಟೇ.
Also Read: Instagram Tips: ನಿಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಏನೇನು ಮಾಡುತ್ತಿದ್ದರೆ ಎಲ್ಲವನ್ನು ಈ ರೀತಿ ತಿಳಿಯಬಹುದು!
Vivo T4x 5G ಸ್ಮಾರ್ಟ್ಫೋನ್ 6.72 ಇಂಚಿನ ಪೂರ್ಣ HD+ 120Hz LCD ಪರದೆಯನ್ನು ಪ್ಯಾಕ್ ಮಾಡುತ್ತದೆ. ಇದರ ಕಾಮೆರದಲ್ಲಿ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾದೊಂದಿಗೆ 50MP ಮತ್ತು 2MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ ಸೇಲ್ಫಿ ಮತ್ತು ವಿದೋ ಕರೆಗಾಗಿ ಮುಂಭಾಗದಲ್ಲಿ ಪಂಚ್-ಹೋಲ್ ಒಳಗೆ 8MP ಕ್ಯಾಮೆರಾವನ್ನು ಸಹ ಹೊಂದಿದೆ.
ಸ್ಮಾರ್ಟ್ಫೋನ್ MediaTek Dimensity 7300 ಚಿಪ್ ಸಪೋರ್ಟ್ ಮಾಡುತ್ತದೆ. ಅಲ್ಲದೆ 6500mAh ಬ್ಯಾಟರಿಯನ್ನು 44W ವೇಗದ ಚಾರ್ಜಿಂಗ್ ಪಡೆಯುತ್ತದೆ. ಈ ಫೋನ್ Funtouch OS 15 ನೊಂದಿಗೆ ಆಂಡ್ರಾಯ್ಡ್ ಅನ್ನು ರನ್ ಮಾಡುತ್ತದೆ. ಫೋನ್ 2 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು ಫೋನ್‌ಗೆ 3 ವರ್ಷಗಳ ಭದ್ರತಾ ಅಪ್ಡೇಟ್ ಭರವಸೆಯೊಂದಿಗೆ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್‌ಗಳನ್ನು ಹೊಂದಿದೆ. ಕೊನೆಯದಾಗಿ ಸ್ಮಾರ್ಟ್ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ.