Vivo T4x 5G Launch Date in India
Vivo T4x 5G Launch Date: ಪ್ರಸ್ತುತ ಚೀನಾದ ವಿವೋ (Vivo) ಸ್ಮಾರ್ಟ್ಫೋನ್ ಕಂಪನಿ ತನ್ನ ಮುಂಬರಲಿರುವ Vivo T4x 5G ಸ್ಮಾರ್ಟ್ಫೋನ್ ಸಿಕ್ಕಾಪಟ್ಟೆ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲು ಇನ್ನೂ ಅಧಿಕೃತ ಡೇಟ್ ಕಂಫಾರ್ಮ್ ಮಾಡಿಲ್ಲ. ನಿಮಗೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ ಸುಮಾರು 15,000 ರೂಗಳೊಳಗೆ ಸಿಕ್ಕಾಪಟ್ಟೆ ದೊಡ್ಡ ಬ್ಯಾಟರಿ ಬಾಳಿಕೆ, ಪವರ್ಫುಲ್ ಪ್ರೊಸೆಸರ್ ಮತ್ತು ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಹುಡುಕುತ್ತಿದ್ದರೆ Vivo T4x 5G ನಿಮಗೆ ಉತ್ತಮ ಆಯ್ಕೆಯಾಗಿರಬಹುದು. Vivo T4x 5G ಸ್ಮಾರ್ಟ್ಫೋನ್ ಬಗ್ಗೆ ನಿರೀಕ್ಷಿತ ಬೆಲೆ ಎಷ್ಟು ಮತ್ತು ಈವರೆಗೆ ಸೋರಿಕೆಯಾಗಿರುವ ಫೀಚರ್ಗಳೇನು? ಎಲ್ಲವನ್ನು ಈ ಕೆಳಗೆ ಪರಿಶೀಲಿಸಿ.
ಹೌದು, ಪ್ರಸ್ತುತ ಈ ಸ್ಮಾರ್ಟ್ಫೋನ್ ಸ್ಯಾಮ್‌ಸಂಗ್ ಫೋನ್ಗಳಂತೆ ಅತಿದೊಡ್ಡ ಬ್ಯಾಟರಿಯೊಂದಿಗೆ ಬರುವುದಾಗಿ ಅನೇಕ ವರದಿಗಳು ಹರಿದಾಡುತ್ತಿವೆ. ಅಲ್ಲದೆ ವಿವೋ ಸಹ ಇದರ ಬಗ್ಗೆ ಪೋಸ್ಟ್ ಮಾಡಿದ್ದೂ ಈ ಶ್ರೇಣಿಯಲ್ಲಿ ಬರುವ ಈವರೆಗಿನ ಅತಿದೊಡ್ಡ ಬ್ಯಾಟರಿ ಫೋನ್ ಎಂದು ಪೋಸ್ಟ್ ಮಾಡಿದೆ. ಈ Vivo T4x 5G ಸ್ಮಾರ್ಟ್ಫೋನ್ ಇದೆ 20ನೇ ಫೆಬ್ರವರಿ 2025 ರಂದು ಬಿಡುಗಡೆಗೆ ಸಜ್ಜಾಗಿರುವುದಾಗಿ ನಿರೀಕ್ಷಿಸಲಾಗಿದೆ.
Vivo T4x 5G ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದ್ದು ಸುಮಾರು 6500mAh ಬ್ಯಾಟರಿಯನ್ನು ಸುಮಾರು 45W ಫಾಸ್ಟ್ ಚಾರ್ಜಿಂಗ್ ಜೊತೆಗೆ ನಿರೀಕ್ಷಿಸಲಾಗಿದೆ. ಅಲ್ಲದೆ ಈ Vivo T4x 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ವಿವೋ ನೀಡಿಲ್ಲವಾದರೂ ಫೀಚರ್ಗಳ ಆಧಾರದ ಮೇರೆಗೆ ಆರಂಭಿಕ ರೂಪಾಂತರ ಸುಮಾರು 15,000 ರೂಗಳೊಳಗೆ ಬರುವ ನಿರೀಕ್ಷೆಗಳಿವೆ.
Also Read: Vivo V50 ಸ್ಮಾರ್ಟ್ಫೋನ್ 50MP ಸೆಲ್ಫಿ ಮತ್ತು 6000mAh ಬ್ಯಾಟರಿಯೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಈ ಫೋನ್ 6.72 ಇಂಚಿನ ದೊಡ್ಡ IPS LCD ಪ್ಯಾನೆಲ್ ಅನ್ನು ಹೊಂದಿದ್ದು ಇದು ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಫೋನ್ 50MP ಪ್ರೈಮರಿ ಕ್ಯಾಮೆರಾ ಇದು ನಿಮಗೆ ಅತ್ಯುತ್ತಮ ಸ್ಪಷ್ಟತೆ ಮತ್ತು ಪ್ರಕಾಶಮಾನವಾದ ಚಿತ್ರಗಳನ್ನು ನೀಡುತ್ತದೆ. ಮತ್ತೊಂದು 2MP ಸೆಕೆಂಡರಿ ಕ್ಯಾಮೆರಾದೊಂದಿಗೆ ಇದು ಡೆಪ್ತ್ ಸೆನ್ಸರ್ ಅಥವಾ ಮ್ಯಾಕ್ರೋ ಕ್ಯಾಮೆರಾ ಆಗಿರಬಹುದು. ಇದು ಪೋರ್ಟ್ರೇಟ್ ಶಾಟ್‌ಗಳು ಮತ್ತು ಕ್ಲೋಸ್-ಅಪ್ ಫೋಟೋಗಳನ್ನು ಉತ್ತಮಗೊಳಿಸುತ್ತದೆ.
ಕಾರ್ಯಕ್ಷಮತೆಯ ವಿಷಯದಲ್ಲಿ ವಿವೋ ಈ ಫೋನ್‌ನಲ್ಲಿ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ನೀಡಲಿದೆ. ಇದು ಈ ವಿಭಾಗದ ಇತರ ಫೋನ್‌ಗಳಿಗಿಂತ ಭಿನ್ನವಾಗಿದೆ. ಈ ಪ್ರೊಸೆಸರ್ ಗೇಮಿಂಗ್, ಬಹುಕಾರ್ಯಕ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಕಾರ್ಯಗಳನ್ನು ಬಹಳ ಸುಲಭವಾಗಿ ನಿರ್ವಹಿಸುತ್ತದೆ. ಕೊನೆಯದಾಗಿ ಇದರಲ್ಲಿ ಸುಮಾರು 6500mAh ಬ್ಯಾಟರಿಯನ್ನು ಸುಮಾರು 45W ಫಾಸ್ಟ್ ಚಾರ್ಜಿಂಗ್ ಜೊತೆಗೆ ನಿರೀಕ್ಷಿಸಲಾಗಿದೆ.