Vivo T4 Pro 5G with 50MP Telephoto Camera Sale today on flipkart
ವಿವೋ ಸ್ಮಾರ್ಟ್ ಫೋನ್ ಬ್ರಾಂಡ್ ತನ್ನ ಜನಪ್ರಿಯ T ಸರಣಿಯನ್ನು ಭಾರತದಲ್ಲಿ ವಿಸ್ತರಿಸಲು ಸಜ್ಜಾಗುತ್ತಿದ್ದು ಈಗ ಈ ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ತನ್ನ ಮುಂಬರಲಿರುವ Vivo T4 Pro ಸ್ಮಾರ್ಟ್ಫೋನ್ ಅನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಈ ವಾರ ಅಂದರೆ ಇದೆ 26ನೇ ಆಗಸ್ಟ್ 2025 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ ಅಲ್ಲದೆ ಕಂಪನಿ ಈಗಾಗಲೇ ಇದರ ಮೈಕ್ರೋಸೈಟ್ ಪೇಜ್ ಸಹ ತಯಾರಿಸಿದೆ. ಈ ವಿವೋ ಸ್ಮಾರ್ಟ್ಫೋನ್ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪರಿಚಯಿಸಲಿದೆ.
ಕಂಪನಿ ಇದರ ಕೆಲವೊಂದು ಫೀಚರ್ಗಳನ್ನು ಮಾತ್ರ ಈವರೆಗೆ ಬಹಿರಂಗಪಡಿಸಿದ್ದು ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.ಭಾರತದಲ್ಲಿ ಮುಂಬರಲಿರುವ ಈ ಮಧ್ಯಮ ಶ್ರೇಣಿಯಲ್ಲಿ ಬರುವ ನಿರೀಕ್ಷೆಗಳಿವೆ. ಸ್ಮಾರ್ಟ್ಫೋನ್ ಸುಮಾರು ₹25,000 ರಿಂದ ₹30,000 ರೂಗಳೊಳಗೆ ಬೆಲೆ ನಿರೀಕ್ಷಿಸಬಹುದು.
ಈ ಬೆಲೆ ನಿಗದಿ ಈ ವರ್ಗದಲ್ಲಿರುವ ಇತರ ಜನಪ್ರಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ. ಬಿಡುಗಡೆಯಾದ ನಂತರ ಈ ಸ್ಮಾರ್ಟ್ಫೋನ್ ಫ್ಲಿಪ್‌ಕಾರ್ಟ್ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಹಾಗೂ ಭಾರತದಾದ್ಯಂತ ವಿವೋದ ಅಧಿಕೃತ ಇ-ಸ್ಟೋರ್ ಮತ್ತು ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಾಗುವ ಸಾಧ್ಯತೆಯಿದೆ.
Also Read: Jio and Airtel: ಜಿಯೋ ನಂತರ ಸದ್ದಿಲ್ಲದೇ ಹೆಚ್ಚು ಬಳಕೆಯಲ್ಲಿದ್ದ ಈ ಏರ್ಟೆಲ್ ರಿಚಾರ್ಜ್ ಪ್ಲಾನ್ ಸಹ ಸ್ಥಗಿತ!
ಕಂಪನಿ ವಿಭಿನ್ನ ಬಳಕೆದಾರರ ಅಗತ್ಯಗಳನ್ನು ಪೂರೈಸಲು ಹಲವು RAM ಮತ್ತು ಸ್ಟೋರೇಜ್ ಜೊತೆಗೆ ನಿರೀಕ್ಷಿಸಬಹುದು. ಈ ವಿವೋ ಸ್ಮಾರ್ಟ್‌ಫೋನ್ 6.67 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು ಸುಗಮ ದೃಶ್ಯಗಳಿಗಾಗಿ ಹೆಚ್ಚಿನ ರಿಫ್ರೆಶ್ ದರವನ್ನು ನಿರೀಕ್ಷಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ ಇದು ಅಲ್ಟ್ರಾವೈಡ್ ಮತ್ತು ಮ್ಯಾಕ್ರೋ ಲೆನ್ಸ್‌ಗಳೊಂದಿಗೆ OIS ನೊಂದಿಗೆ 64MP ಪ್ರೈಮರಿ ಕ್ಯಾಮೆರಾ ಹೊಂದಿರಬಹುದು. ಅಲ್ಲದೆ ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಕಾಮೆರವನ್ನು ನಿರೀಕ್ಷಿಸಬಹುದು.
ಕಾರ್ಯಕ್ಷಮತೆಯ ದೃಷ್ಟಿಯಿಂದ ಇದು ದಕ್ಷತೆ ಮತ್ತು ಗೇಮಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ MediaTek Dimensity ಚಿಪ್‌ಸೆಟ್‌ನಿಂದ ಚಾಲಿತವಾಗಬಹುದು. ಈ ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯನ್ನು ಆಧರಿಸಿದ ವಿವೋದ ಫನ್‌ಟಚ್ ಓಎಸ್‌ನಲ್ಲಿ ಫೋನ್ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.