Vivo T3 Pro 5G Price Cut in India
Vivo T3 Pro 5G Price Cut: ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ಭಾರತದ ಬಜೆಟ್ ವಿಭಾಗದಲ್ಲಿ ಹತ್ತಾರು ಸ್ಮಾರ್ಟ್ಫೋನ್ಗಳನ್ನು ಹೊಂದಿದೆ. ಇದರ ಕ್ರಮವಾಗಿ ಬಜೆಟ್ ಬೆಲೆಯಲ್ಲಿ ಒಳ್ಳೆ ಕ್ಯಾಮೆರಾ ಫೋನ್ ಅಂದ್ರೆ ಅದು ವಿವೋ ಕಂಪನಿಯದಾಗಿರುತ್ತದೆ. ಈ ಪೈಕಿ ಇತ್ತೀಚೆಗಷ್ಟೇ ಬಿಡುಗಡೆಯಾದ ಹೊಸ Vivo T3 Pro 5G ಸ್ಮಾರ್ಟ್ಫೋನ್ ತನ್ನ ನೈಜ ಬೆಲೆಯಲ್ಲಿ ಬರೋಬ್ಬರಿ 4000 ರೂಗಳ ಕಡಿತವನ್ನು ಮಾಡಿದೆ. ಈ Vivo T3 Pro 5G ಸ್ಮಾರ್ಟ್ಫೋನ್ 8GB RAM ಮತ್ತು 5500mAh ಬ್ಯಾಟರಿಯ Snapdragon 7 Gen 3 ಪ್ರಾಸೆಸರ್ ಪ್ರಾಸೆಸರ್ ಹೊಂದಿರುವುದುದ ಇದರ ವಿಶೇಷವಾಗಿದೆ. ಹಾಗಾದ್ರೆ Vivo T3 Pro 5G ಸ್ಮಾರ್ಟ್ಫೋನ್ ಹೊಸ ಬೆಲೆ ಮತ್ತು ಆಫರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಭಾರತದಲ್ಲಿ ಬಿಡುಗಡೆಯಾಗಿರುವ ಈ ಹ್ಯಾಂಡ್‌ಸೆಟ್ 6.77 ಇಂಚಿನ ಬಾಗಿದ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇ 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಹೊಳಪು ಮತ್ತು HDR 10+ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ನಿಮಗೆ T3 Pro 5G ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಕ್ಯಾಮೆರಾ ಸೆಟಪ್ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 16MP ಸೆಲ್ಫಿ ಶೂಟರ್ ಇದೆ. ನೀವು AI ಫೋಟೋ ವರ್ಧನೆ ಮತ್ತು AI ಅಳಿಸುವಿಕೆಯಂತಹ AI ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ.
ಈ Vivo T3 Pro 5G ಸ್ಮಾರ್ಟ್‌ಫೋನ್ Qualcomm Snapdragon 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದಲ್ಲದೆ Vivo T3 Pro 5G ಸ್ಮಾರ್ಟ್ಫೋನ್ 80W ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇತ್ತೀಚಿನ Vivo ಸ್ಮಾರ್ಟ್‌ಫೋನ್‌ನ ಇತರ ಗಮನಾರ್ಹ ವೈಶಿಷ್ಟ್ಯಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್, ಆಂಡ್ರಾಯ್ಡ್ 14 ಆಧಾರಿತ FunTouch OS 14, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಅಲ್ಟ್ರಾ ಗೇಮ್ ಮೋಡ್, ವೆಟ್ ಟಚ್ ಟೆಕ್ನಾಲಜಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ.
Also Read: Aadhaar Card Tips: ನಿಮ್ಮ ಆಧಾರ್ ಕಾರ್ಡ್ ಕಳೆದೋಗಿದ್ರೆ ಈ ರೀತಿ ಮತ್ತೇ ಸರಳವಾಗಿ ಪಡೆಯಬಹುದು!
ಭಾರತದಲ್ಲಿ ನಡೆಯುತ್ತಿರುವ ಫ್ಲಿಪ್ಕಾರ್ಟ್ ಬಿಗ್ ಬಚತ್ ಡೇ ಮಾರಾಟದಲ್ಲಿ ಈ ಜಬರ್ದಸ್ತ್ Vivo T3 Pro 5G ತನ್ನ ನೈಜ ಬೆಲೆಯಲ್ಲಿ ಬರೋಬ್ಬರಿ 4000 ರೂಗಳ ಡಿಸ್ಕೌಂಟ್ನೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಮೊದಲಿಗೆ ಫ್ಲಿಪ್ಕಾರ್ಟ್ ಸ್ಪೆಷಲ್ ಆಫರ್ ಅಡಿಯಲ್ಲಿ ಈಗಾಗಲೇ ಇಫ್ದರ 2000 ರೂಗಳನ್ನು ಕಡಿತಗೊಳಿಸಿದೆ. ಹೆಚ್ಚುವರಿಯಾಗಿ ಆಸಕ್ತ ಗ್ರಾಹಕರು ಯಾವುದೇ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸುವ ಮೂಲಕ ಮತ್ತೆ 2000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Vivo T3 Pro 5G ಸ್ಮಾರ್ಟ್ಫೋನ್ ಆರಂಭಿಕ 8GB RAM ರೂಪಾಂತರವನ್ನು ಕೇವಲ 20,999 ರೂಗಳಿಗೆ ಖರೀದಿಸಯಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Vivo T3 Pro 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 13,350 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.