ಹೊಸ Vivo S2 ಸ್ಮಾರ್ಟ್‌ಫೋನ್‌ ಇದೀಗ ಖರೀದಿಗೆ ಲಭ್ಯ; 7,050mAh ಬ್ಯಾಟರಿ ಸೌಲಭ್ಯ

HIGHLIGHTS

ವಿವೋ S2 ಮೊಬೈಲ್‌ ಈಗ ಖರೀದಿಗೆ ಲಭ್ಯವಿದೆ

ವಿವೋದ ಈ ಫೋನ್ 7,050mAh ಬ್ಯಾಟರಿ ಪಡೆದಿದೆ

ಈ ಮೊಬೈಲ್‌ ಮೂರು ಆಕರ್ಷಕ ಕಲರ್‌ ಆಯ್ಕೆಯಲ್ಲಿ ಲಭ್ಯ

ಹೊಸ Vivo S2 ಸ್ಮಾರ್ಟ್‌ಫೋನ್‌ ಇದೀಗ ಖರೀದಿಗೆ ಲಭ್ಯ; 7,050mAh ಬ್ಯಾಟರಿ ಸೌಲಭ್ಯ

ಇತ್ತೀಚಿನ ಹೊಸ Vivo S2 ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯ ಸದ್ದು ಮಾಡಿದೆ. ಅಂದಹಾಗೆ ಈ ಮೊಬೈಲ್‌ ಇಂದು (ಆಗಷ್ಟ್‌ 11 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್‌ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7360 ಟರ್ಬೊ ಚಿಪ್‌ಸೆಟ್ ಪ್ರೊಸೆಸರ್‌ ಜೊತೆಗೆ 7,050mAh ಬ್ಯಾಟರಿ ಬ್ಯಾಕ್‌ಅಪ್‌ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನು ಹಾಗೆಯೇ ಈ ಮೊಬೈಲ್‌ 50MP ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್‌ Sapphire Blue, Regal Bronze ಮತ್ತು Silk White ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ವಿವೋ S2 ಮೊಬೈಲ್‌ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಕಡಿಮೆ ಬೆಲೆಯ Lava Bold N2 ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಮತ್ತಷ್ಟು ಅಗ್ಗದ ದರದಲ್ಲಿ ಲಭ್ಯ!

Vivo S2 ಖರೀದಿಗೆ ಲಭ್ಯ

ದೇಶೀಯ ಮಾರುಕಟ್ಟೆಯಲ್ಲಿ ವಿವೋ ಕಂಪನಿಯ ವಿವೋ S2 ಮೊಬೈಲ್‌ ಇಂದು ಅಮೆಜಾನ್‌ ಗ್ರೇಟ್ ಫ್ರಿಡಂ ಸೇಲ್‌ ಮೂಲಕ ಖರೀದಿಗೆ ಲಭ್ಯವಾಗಿದೆ. ಈ ನೂತನ ಫೋನಿನ 8GB RAM + 128GB ವೇರಿಯಂಟ್‌ ಬೆಲೆಯು 39,999 ರೂ.ಗಳು ಆಗಿದೆ. ಹಾಗೆಯೇ 8GB + 256GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 44,999 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್‌ Sapphire Blue, Regal Bronze, ಮತ್ತು Silk White ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅಂದಹಾಗೆ ಈ ಮೊಬೈಲ್‌ ಈ ಫೋನ್‌ ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿರಿ.

vivo s2 price in india
vivo s2

ವಿವೋ S2 ಫೋನಿನ ಫೀಚರ್ಸ್‌ ಹೀಗಿವೆ

ವಿವೋ S2 ಫೋನ್‌ 6.83 ಇಂಚಿನ ಪೂರ್ಣ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿವೆ. ಇದರ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್‌ ಜೊತೆಗೆ 3,000 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸಫೋರ್ಟ್‌ ಪಡೆದಿದೆ. ಅಲ್ಲದೇ ಡಿಸ್‌ಪ್ಲೇಯು 1,260 x 2,800 ಪಿಕ್ಸೆಲ್‌ ರೆಸಲ್ಯೂಶನ್ ಬೆಂಬಲಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7360 ಟರ್ಬೊ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ 8GB RAM + 128GB ಹಾಗೂ 8GB + 256GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ಹಾಗೆಯೇ ವಿವೋ S2 ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು, ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್‌ 7,050mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದೆ. ಇದು OriginOS 6 ಬೆಂಬಲದೊಂದಿಗೆ ಆಂಡ್ರಾಯ್ಡ್‌ 16 ಓಎಸ್‌ ಸಪೋರ್ಟ್‌ ಒಳಗೊಂಡಿದೆ.

Disclosure: This Article Contains Affiliate Links


Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile