ಇಂದು ಭಾರತದಲ್ಲಿ Vivo S2 ಸ್ಮಾರ್ಟ್‌ಫೋನ್‌ ಬಿಡುಗಡೆ; ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ

HIGHLIGHTS

ಇಂದು ಭಾರತದಲ್ಲಿ ವಿವೋ S2 ಫೋನ್‌ ಬಿಡುಗಡೆ

ವಿವೋ S2 ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ

ವಿವೋ S2 ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 7360 ಪ್ರೊಸೆಸರ್‌ ಪಡೆದಿರಲಿದೆ

ಜನಪ್ರಿಯ ವಿವೋ ಮೊಬೈಲ್‌ ಸಂಸ್ಥೆಯು ನೂತನವಾಗಿ Vivo S2 ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ವಿವೋ ಸಂಸ್ಥೆಯು ತನ್ನ ನೂತನ ಮೊಬೈಲ್‌ ಅನ್ನು ಇಂದು (ಆಗಷ್ಟ್‌ 6 ರಂದು) ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಹಾಗೆಯೇ ವಿವೋ S2 ಮೊಬೈಲ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7360 ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್‌ ಆಕರ್ಷಕ ಕಲರ್‌ ಆಯ್ಕೆ ಪಡೆದಿರಲಿರುವ ಜೊತೆಗೆ AMOLED ಡಿಸ್‌ಪ್ಲೇ ಪಡೆದಿರುವ ನಿರೀಕ್ಷೆಗಳು ಇವೆ. ಹಾಗಾದರೇ ವಿವೋ S2 ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

Also Read : ಅಗ್ಗದ ಬೆಲೆಯಲ್ಲಿ ಲಭ್ಯವಿರುವ Vi ಟೆಲಿಕಾಂನ ಅತ್ಯುತ್ತಮ ರೀಚಾರ್ಜ್‌ ಪ್ಲಾನ್‌ಗಳ ಲಿಸ್ಟ್‌ ಇಲ್ಲಿದೆ

ಇಂದು Vivo S2 ಮೊಬೈಲ್‌ ಲಾಂಚ್‌

ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ವಿವೋ S2 ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಫೋನ್‌ ಇಂದು (ಆಗಷ್ಟ್‌ 6 ರಂದು) ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಇನ್ನು ಈ ಫೋನ್‌ 8GB + 128GB ಮತ್ತು 8GB + 256GB ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ. ಇನ್ನು ಈ ಫೋನ್‌ 43,000 ರೂ.ಗಳ ಆರಂಭಿಕ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರಬಹುದು ಎಂದು ಸೂಚಿಸುತ್ತವೆ.

ವಿವೋ S2 ಸ್ಮಾರ್ಟ್‌ಫೋನ್‌ ಫೀಚರ್ಸ್‌

ಮುಂಬರುವ ಹೊಸ ವಿವೋ S2 ಮೊಬೈಲ್ 6.59 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಸಪೋರ್ಟ್‌ ಜೊತೆಗೆ ಜೊತೆಗೆ ಕರ್ವ್ಡ್‌ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ. ಕಾರ್ಯಕ್ಷಮತೆಗಾಗಿ ಈ ಫೋನ್‌ನಲ್ಲಿ ಮೀಡಿಯಾ ಟೆಕ್‌ ಡೈಮೆನ್ಸಿಟಿ 7360 ಚಿಪ್‌ಸೆಟ್ ಪ್ರೊಸೆಸರ್ ಪವರ್‌ ಇರಬಹುದು. ಇದಕ್ಕೆ ಪೂರಕವಾಗಿ 8GB RAM ಮತ್ತು 256GB ವರೆಗೆ ಆಂತರಿಕ ಸಂಗ್ರಹಣೆ ದೊರೆಯುವ ಸಾಧ್ಯತೆ ಇದೆ.

ಹಾಗೆಯೇ ವಿವೋ S2 ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಇನ್ನು ಇದರ ಬ್ಯಾಟರಿ ವಿಭಾಗವೂ ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿದ್ದು, 7,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಈ ಬ್ಯಾಟರಿ ದೀರ್ಘಕಾಲದ ಬಳಕೆಯನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :