Upcoming Smartphones January 2026 Realme 16 Pro and Redmi Note 15 OPPO Reno 15 set to launch
Upcoming Smartphones 2026: ಹೊಸ ಆರಂಭ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡಿದ್ದರೆ ಸ್ವಲ್ಪ ದಿನ ಕಾಯುವುದು ನಿಮಗೇ ಒಳ್ಳೆಯದು. ಏಕೆಂದರೆ ಈ ಜನವರಿ ತಿಂಗಳ ಮೊದಲ ವಾರದಲ್ಲೇ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳವರೆಗೆ ಹತ್ತಾರು ಹೊಸ ಮಾದರಿಗಳು ಮಾರುಕಟ್ಟೆಗೆ ಬರಲಿವೆ. ಬಜೆಟ್ ಫೋನ್‌ಗಳಿಂದ ಹಿಡಿದು ದುಬಾರಿ ಪ್ರೀಮಿಯಂ ಫೋನ್‌ಗಳವರೆಗೆ ಹಲವು ಆಯ್ಕೆಗಳು ಈ ತಿಂಗಳು ಬಿಡುಗಡೆಯಾಗಲಿವೆ. ಪ್ರಮುಖ ಬ್ರ್ಯಾಂಡ್‌ಗಳಾದ OPPO, Realme, POCO, Redmi, Motorola ಮತ್ತು OnePlus ಕಂಪನಿಗಳು ತಮ್ಮ ಹೊಸ ಫೋನ್‌ಗಳನ್ನು ಪರಿಚಯಿಸಲು ಸಜ್ಜಾಗಿವೆ. ಇದರೊಂದಿಗೆ ಈ ಕಂಪನಿಯ ಫೋನ್ಗಳು ದೃಢಪಡಿಸಲಾಗಿದ್ದು ಇದರ ಪಟ್ಟಿ ಇಲ್ಲಿದೆ.
Also Read: Jio, Airtel, Vi ಮತ್ತು BSNL ಕಂಪನಿಗಳಿಂದ ಈ ಹೊಸ 2026 ವರ್ಷದಲ್ಲಿ ಏನನ್ನು ನಿರೀಕ್ಷಿಸಬಹುದು?
ಈ ಫೋನ್ ಮುಖ್ಯವಾಗಿ ಅತಿ ವೇಗದ ಕೆಲಸ (ಕಾರ್ಯನಿರ್ವಹಣೆ) ಮತ್ತು ದೀರ್ಘಕಾಲದ ಬ್ಯಾಟರಿ ಬಾಳಿಕೆಯನ್ನು ಬಯಸುವವರಿಗಾಗಿ ತಯಾರಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾದ ದಿನಾಂಕ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ ಇನ್ನು ಚೀನಾದಲ್ಲಿ ಇದು ಜನವರಿ 8, 2026 ರಂದು ಬಿಡುಗಡೆಯಾಗಲಿದೆ. ಇದರಲ್ಲಿ 165Hz ನಷ್ಟು ವೇಗದ 6.78-ಇಂಚಿನ OLED ಡಿಸ್‌ಪ್ಲೇ ಇರಲಿದೆ. ಇದರ ಅಂದಾಜು ಬೆಲೆ ಸುಮಾರು ₹32,100 ಇರಬಹುದು ಎಂದು ಅಂದಾಜಿಸಲಾಗಿದೆ.
ರಿಯಲ್‌ಮಿ ಕಂಪನಿಯು ಈ ಸರಣಿಯಲ್ಲಿ ರಿಯಲ್‌ಮಿ 16 ಪ್ರೊ ಮತ್ತು ರಿಯಲ್‌ಮಿ 16 ಪ್ರೊ ಪ್ಲಸ್ ಎಂಬ ಎರಡು ಅದ್ಭುತ ಫೋನ್‌ಗಳನ್ನು ತರುತ್ತಿದೆ. ಇವುಗಳಲ್ಲಿ ಹೈ-ಕ್ವಾಲಿಟಿ 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುತ್ತದೆ ಫೋಟೋಗ್ರಾಫಿ ಇಷ್ಟಪಡುವವರಿಗೆ ಇದನ್ನು ಹೇಳಿ ಮಾಡಿಸಿದಂತಿದೆ. ಇದು ಜನವರಿ 6 ರಂದು ಬಿಡುಗಡೆಯಾಗಲಿದೆ ನಂತರ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಸಿಗಲಿದೆ.
ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ರೆಡ್ಮಿ ನೋಟ್ ಸರಣಿಯ ಹೊಸ ಫೋನ್ ಜನವರಿ 6, 2026 ರಂದು ಬಿಡುಗಡೆಯಾಗುತ್ತಿದೆ. ಈ ಫೋನ್‌ನಲ್ಲಿ 108-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್ ಇರಲಿದೆ. ಇದರ ಬೆಲೆ ₹20,000 ರಿಂದ ₹25,000 ಇರಬಹುದು ಎಂದು ನಿರೀಕ್ಷಿಸಬಹುದು ಸಾಮಾನ್ಯ ಜನರ ಬಜೆಟ್‌ಗೆ ಇದು ಸಾಧಾರಣವಾಗಿದೆ.
ಒಪ್ಪೋ ಈ ಜನವರಿ ತಿಂಗಳಿನಲ್ಲಿ ತನ್ನ ರೆನೋ 15, ರೆನೋ 15 ಪ್ರೊ ಮತ್ತು ರೆನೋ 15 ಮಿನಿ ಎಂಬ ಮೂರು ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಸಾಧ್ಯತೆ ಇದೆ. ಈ ಫೋನ್‌ಗಳ ಮುಖ್ಯ ಆಕರ್ಷಣೆಯೇ ಅವುಗಳ ಕ್ಯಾಮೇರಾ ವಿನ್ಯಾಸ ಮತ್ತು ಗುಣಮಟ್ಟ . ಕಂಪನಿಯು ಈ ಬಿಡುಗಡೆಯ ದಿನಾಂಕವನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಆದರೆ ಇದು ಸ್ಮಾರ್ಟ್ಫೋನ್ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬಜೆಟ್ ಬೆಲೆಯಲ್ಲಿ ಶಕ್ತಿಯುತ ಫೋನ್ ಹುಡುಕುವವರಿಗಾಗಿ ಪೊಕೊ ಕಂಪನಿಯು ಜನವರಿ 8, 2026 ರಂದು ‘ಪೊಕೊ ಎಂ 8’ ಅನ್ನು ಬಿಡುಗಡೆ ಮಾಡಿದೆ ಮಾಡುತ್ತಿದೆ. ಈ ಫೋನ್‌ನ ಬಗ್ಗೆ ಫ್ಲಿಪ್‌ಕಾರ್ಟ್‌ನಲ್ಲಿ ಗೋಚರಿಸುತ್ತದೆ ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಬರಲಿದೆ. ಇದರಲ್ಲಿಯೂ ಉತ್ತಮ ವೇಗದ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಇರಲಿದೆ.
ಮೋಟೋರೋಲಾ ಸಿಗ್ನೇಚರ್ ಸರಣಿ ಮೋಟೋರೋಲಾ ಕಂಪನಿಯು ಭಾರತದ ಪ್ರೀಮಿಯಂ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ತನ್ನ ‘ಸಿಗ್ನೇಚರ್ ಸರಣಿ’ಯ ಫೋನ್‌ಗಳನ್ನು ಜನವರಿ 7, 2026 ರಂದು ಲಾಂಚ್ ಮಾಡಿರುವುದಾಗಿ ಪ್ರಕಟಿಸಿದೆ. ಈ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರಬೇಕು ಫ್ಲಿಪ್‌ಕಾರ್ಟ್ ಮತ್ತು ಆಯ್ದ ಫೋನ್ ಮಳಿಗೆಗಳಲ್ಲಿ ಮಾತ್ರ ಖರೀದಿಗೆ ಸಿಗಲಿವೆ.