Realme P3 Lite 5G Launch
ಭಾರತದಲ್ಲಿ ರಿಯಲ್ಮಿ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ Realme P3 Lite 5G ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಕಂಪನಿ ಬಿಡುಗಡೆಗೂ ಮುಂಚೆಯೇ ಇದರ ಬೆಲೆಯನ್ನು ಸುಮಾರು ₹10,000 ರೂಗಳೊಳಗೆ ಬರುವುದಾಗಿ ರಿಯಲ್ಮಿ ಕಂಫಾರ್ಮ್ ಮಾಡಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ 6000mah ಬ್ಯಾಟರಿ ಮತ್ತು Dimensity 6300 5G ಚಿಪ್ ಹೊಂದಿರುವುದಾಗಿ ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿದೆ. ಹಾಗಾದ್ರೆ Realme P3 Lite 5G ಸ್ಮಾರ್ಟ್ ಫೋನ್ ಬಗ್ಗೆ ಈವರಗೆ ಲಭ್ಯವಿರುವ ಬೆಲೆ ಮತ್ತು ಫೀಚರ್ ಮಾಹಿತಿಗಳೇನು ಎಲ್ಲವನ್ನು ತಿಳಿಯಿರಿ.
ಪ್ರಸ್ತುತ ಕೆಲವೊಂದು ವರದಿಗಳ ಪ್ರಕಾರ ಈ ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್ ಇದೆ 13ನೇ ಸೆಪ್ಟೆಂಬರ್ 2025 ರಂದು ಅಧಿಕೃತ ಬಿಡುಗಡೆಯಾಗುವುದಾಗಿ ಹೇಳಲಾಗುತ್ತಿದೆ ಆದರೆ ಈ ದಿನಾಂಕ ಅಧಿಕೃತವಾಗಿ ನಿಗದಿಪಡಿಸಲಾಗಿದೆ. ಫೋನ್ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಈ ಸ್ಮಾರ್ಟ್ ಫೋನ್ ಎರಡು ಪ್ರಮುಖ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.
ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಮಾದರಿ ಬೆಲೆಯನ್ನು ಸುಮಾರು ₹10,000 ರೂಗಳಿಗೆ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯ ಬೆಲೆಯನ್ನು ಸುಮಾರು ₹11,999 ರೂಗಳಿಗೆ ನಿರೀಕ್ಷಿಸಲಾಗಿದೆ. ಅಲ್ಲದೆ ಇದರ ಮೇಲೆ ವಿಶೇಷ ಕೊಡುಗೆಗಳೊಂದಿಗೆ ಫೋನ್ ಬಿಡುಗಡೆಯಾಗಬಹುದು ಎಂಬ ವದಂತಿಯೂ ಇದೆ.
Also Read: ನಿಮ್ಮ ಸೆಲ್ಫಿ ಫೋಟೋಗಳನ್ನು Action-Figure Style 3D Models ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!
ಈ ಮುಂಬರಲಿರುವ Realme P3 Lite 5G ಸ್ಮಾರ್ಟ್‌ಫೋನ್ 6.67 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ದರ ಮತ್ತು 625 nits ಗರಿಷ್ಠ ಹೊಳಪನ್ನು ಹೊಂದಿದೆ. ಈ ಸಾಧನವು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಮತ್ತು ಆಂಡ್ರಾಯ್ಡ್ 15 ಅನ್ನು ಆಧರಿಸಿದ ರಿಯಲ್‌ಮಿ UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ ಫೋನ್ 32MP ಹಿಂಬದಿಯ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ.
ಈ ಸ್ಮಾರ್ಟ್ ಫೋನ್‌ನ ಅತ್ಯುತ್ತಮ ವೈಶಿಷ್ಟ್ಯವೆಂದರೆ 45W ಫಾಸ್ಟ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಪಡೆಯಬಹುದು. ಅಲ್ಲದೆ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್‌ನೊಂದಿಗೆ ಬರಲಿದ್ದು ಇಷ್ಟು ದೊಡ್ಡ ಬ್ಯಾಟರಿಯನ್ನು ಪ್ಯಾಕ್ ಮಾಡಲು ಅದರ ವಿಭಾಗದಲ್ಲಿ ಅತ್ಯಂತ ತೆಳ್ಳಗಿನ ಫೋನ್ ಎಂದು ಹೇಳಲಾಗುತ್ತದೆ. ಕೊನೆಯದಾಗಿ ಈ ಫೋನ್ ಲಿಲಿ ವೈಟ್, ಪರ್ಪಲ್ ಬ್ಲಾಸಮ್ ಮತ್ತು ಮಿಡ್‌ನೈಟ್ ಲಿಲಿ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಬಹುದು.