Upcoming SmartPhones in 2026
Upcoming Phones in 2026: ಪ್ರಸ್ತುತ ಈ ವರ್ಷ ಕಳೆದು ಹೊಸ 2026 ವರ್ಷದ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಇದನ್ನು ಗಮನಟ್ಟುಕೊಂಡು ಈಗಾಗಲೇ ಮುಂದಿನ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲು ಸ್ಮಾರ್ಟ್‌ಫೋನ್‌ಗಳು ತಯಾರಕ ಕಂಪನಿಗಳಾಗಿರುವ Samsung, Realme, Vivo ಮತ್ತು OnePlus ತಯಾರಕರು ಸಿದ್ಧರಾಗಿದ್ದಾರೆ. ಇದರಲ್ಲಿ ವಿಶೇಷವೆಂದರೆ ಕೆಲವು ಬ್ರ್ಯಾಂಡ್‌ಗಳು ತಮ್ಮ ಮುಂಬರಲಿರುವ ಫೋನ್ಗಳ ಬಿಡುಗಡೆಯ ಡೇಟ್ ಜೊತೆಗೆ ಮಾದರಿಗಳ ಮಾಹಿತಿಯನ್ನು ಈಗಾಗಲೇ ಪೋಸ್ಟ್ ಮಾಡಿ ದೃಢಪಡಿಸಿದ್ದಾರೆ. ಇವುಗಳಲ್ಲಿ ಕೈಗೆಟಕುವ ಬೆಲೆಗೆ 5G ಸ್ಮಾರ್ಟ್ಫೋನ್ ಮಾರಾಟ ಮಾಡುತ್ತಿರುವ ಕಂಪನಿಗಳು ಈ ಮುಂಬರಲಿರುವ ಫೋನ್ಗಳಲ್ಲಿ ಸಾಮಾನ್ಯ ಫೀಚರ್ಗಳಿಗಿಂತ ಹೊಸ ಮತ್ತು ಹೆಚ್ಚಿನ ಫೀಚರ್ ನೀಡಲು ಕೆಲಸ ಮಾಡುತ್ತಿವೆ.
Also Read: ಅಮೆಜಾನ್‌ನಲ್ಲಿ ಇಂದು GOVO Dolby Audio Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
ಈ ಸರಣಿ ಶಿಯೋಮಿ ತನ್ನ ಬಜೆಟ್ ಸ್ನೇಹಿ Redmi Note 15 ಸರಣಿಯನ್ನು ಜನವರಿ ಆರಂಭದಲ್ಲಿ ತರುತ್ತಿದೆ. ಇದು ಸುಮಾರು ₹14,000 ರಿಂದ ₹18,000 ಬೆಲೆಯಲ್ಲಿ ಲಭ್ಯವಿರುವ ನಿರೀಕ್ಷೆಯಿದೆ. ಈ ಫೋನ್‌ನಲ್ಲಿ 108MP ಕ್ಯಾಮೆರಾ ಮತ್ತು ಅತಿ ದೊಡ್ಡ 7000mAh ಬ್ಯಾಟರಿ ನೀಡಲಾಗಿದೆ, ಇದು ಸಾಮಾನ್ಯ ಬಳಕೆದಾರರಿಗೆ ಎರಡು ದಿನಗಳವರೆಗೆ ಬಾಳಿಕೆ ನೀಡುತ್ತದೆ. ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ ಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆ.
ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಭಾರತದಲ್ಲಿ ರಿಯಲ್‌ಮಿ ತನ್ನ ಬಹು ನಿರೀಕ್ಷಿತ Realme 16 Pro ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ದೃಢಪಡಿಸಿದೆ. ಹೊಸ ಸ್ಮಾರ್ಟ್‌ಫೋನ್ ಶ್ರೇಣಿಯು 6ನೇ ಜನವರಿ 2026 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಘೋಷಣೆಯೊಂದಿಗೆ ರಿಯಲ್‌ಮಿ ಹೊಸ ವರ್ಷವನ್ನು ಬಲವಾದ ಪ್ರೀಮಿಯಂ ಮಿಡ್‌ರೇಂಜ್ ಕೊಡುಗೆಯೊಂದಿಗೆ ಪ್ರಾರಂಭಿಸಲು ಸಜ್ಜಾಗಿದೆ.
ಸ್ಯಾಮ್‌ಸಂಗ್‌ನ ಅತ್ಯಂತ ಶಕ್ತಿಯುತ ಮತ್ತು ಐಷಾರಾಮಿ ಫೋನ್ ಎನಿಸಿಕೊಂಡಿರುವ Galaxy S26 Ultra ಜನವರಿ ಕೊನೆಯಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಇದು ಹೊಸ Snapdragon 8 Elite Gen 5 ಪ್ರೊಸೆಸರ್ ಹೊಂದಿರಲಿದ್ದು, ಗೇಮಿಂಗ್‌ಗೆ ಇದು ಅತ್ಯುತ್ತಮವಾಗಿದೆ. ಇದರಲ್ಲಿ 200MP ವರೆಗಿನ ಅದ್ಭುತ ಕ್ಯಾಮೆರಾ ಮತ್ತು ಹೊಸ ‘Galaxy AI 2.0’ ಫೀಚರ್‌ಗಳು ಇರಲಿವೆ. ಇದರ ಬೆಲೆ ಅಂದಾಜು ₹1.3 ಲಕ್ಷದಿಂದ ₹1.6 ಲಕ್ಷದವರೆಗೆ ಇರಬಹುದು.
ಒನ್‌ಪ್ಲಸ್ ಪ್ರಿಯರಿಗಾಗಿ OnePlus 14R ಜನವರಿ 31 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಮಧ್ಯಮ ಬೆಲೆಯಲ್ಲಿ (ಅಂದಾಜು ₹45,000) ಸಿಗುವ ಪ್ರೀಮಿಯಂ ಫೋನ್ ಆಗಿರಲಿದೆ. ಇದರಲ್ಲಿ ವೇಗದ ಚಾರ್ಜಿಂಗ್ ಸೌಲಭ್ಯವಿದ್ದು, ಕೇವಲ 30 ನಿಮಿಷಗಳಲ್ಲಿ ಫೋನ್ ಫುಲ್ ಚಾರ್ಜ್ ಆಗುತ್ತದೆ. ಗರಿಷ್ಠ 12GB RAM ಮತ್ತು ಸ್ಲಿಮ್ ಡಿಸೈನ್ ಇದರ ವಿಶೇಷತೆಯಾಗಿದೆ.
Vivo X200 ಮತ್ತು Vivo X300 FE ವಿವೋ ಕಂಪನಿಯು ಜನವರಿಯಲ್ಲಿ ಎರಡು ಪ್ರಮುಖ ಫೋನ್‌ಗಳನ್ನು ತರುತ್ತಿದೆ. Vivo X200 ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇದು ಅತ್ಯುತ್ತಮ ‘Zeiss’ ಕ್ಯಾಮೆರಾ ಲೆನ್ಸ್ ಹೊಂದಿದೆ. ಇನ್ನು Vivo X300 FE ಫೋನ್ ಜನವರಿ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಸುಮಾರು ₹55,000 ಬೆಲೆಯಲ್ಲಿ ಸಿಗಲಿದ್ದು, 6,500mAh ಬ್ಯಾಟರಿ ಮತ್ತು ವಾಟರ್ ರೆಸಿಸ್ಟೆಂಟ್ (IP69 ರೇಟಿಂಗ್) ಫೀಚರ್ ಹೊಂದಿರುತ್ತದೆ. ಫೋಟೋಗ್ರಫಿ ಇಷ್ಟಪಡುವವರಿಗೆ ಈ ಫೋನ್‌ಗಳು ಹೆಚ್ಚು ಇಷ್ಟವಾಗುತ್ತವೆ.