Motorola Signature india launch Confirmed
ಭಾರತದಲ್ಲಿ ಮುಂಬರಲಿರುವ ಮೋಟೊರೋಲದ ಪ್ರೀಮಿಯಂ ಸ್ಮಾರ್ಟ್ಫೋನ್ Motorola Signature ಸರಣಿಯಲ್ಲಿ ಬಿಡುಗಡೆಗೊಳಿಸಲಿದ್ದು ಇದನ್ನು ಮುಂದಿನ ವರ್ಷ 2026 ರಲ್ಲಿ ಮೊದಲ ವಾರದಲ್ಲಿ ಅಂದರೆ 7ನೇ ಜನವರಿ 2026 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಮೋಟೋರೋಲ ತನ್ನ ಈ ಹೊಸ ಸಿಗ್ನೇಚರ್ ಕ್ಲಾಸ್ ಸರಣಿಯ ಅಧಿಕೃತ ಬಿಡುಗಡೆಯೊಂದಿಗೆ ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಅಲ್ಲಾಡಿಸಲು ಮೋಟೋರೋಲಾ ಸಜ್ಜಾಗಿದೆ. ಇದು ಅಸ್ತಿತ್ವದಲ್ಲಿರುವ ಎಡ್ಜ್ ಸರಣಿಯನ್ನು ಮೀರಿದ ಐಷಾರಾಮಿ ಕೇಂದ್ರಿತ ಲೈನ್‌ಅಪ್ ಆಗಿ ಸ್ಥಾನ ಪಡೆದಿರುವ ಸಿಗ್ನೇಚರ್ ಬ್ರ್ಯಾಂಡಿಂಗ್ ಮತ್ತು ಅತ್ಯುತ್ತಮ ಹಾರ್ಡ್‌ವೇರ್ ಅನ್ನು ಕಸ್ಟಮೈಸ್ ಮಾಡಿದ ವಿನ್ಯಾಸ ಸೌಂದರ್ಯದೊಂದಿಗೆ ಸಂಯೋಜಿಸುವ ವಾಸ್ತವವಾಗಿ ಪ್ರೀಮಿಯಂ ಅನುಭವಗಳ ಕಡೆಗೆ ಕಾರ್ಯತಂತ್ರದ ಬದಲಾವಣೆಯನ್ನು ಪ್ರತಿನಿಧಿಸುತ್ತದೆ.
ಮೋಟೋರೋಲಾ ಕಂಪನಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು ಸಿದ್ಧವಾಗಿದ್ದು ಭಾರತದಲ್ಲಿ ತನ್ನ ಬಹುನಿರೀಕ್ಷಿತ ಮೋಟೋರೋಲದ ಸಿಗ್ನೇಚರ್ (Motorola Signature) ಸರಣಿಯನ್ನು ಮುಂದಿನ ತಿಂಗಳು 7ನೇ ಜನವರಿ 2026 ರಂದು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಈ ಹೊಸ ಸರಣಿಯು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ Motorola Edge 70 Ultra ಫೋನಿನ ಭಾರತೀಯ ಆವೃತ್ತಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಈ ಸರಣಿಯಲ್ಲಿ ಯಾವೆಲ್ಲಾ ಮಾದರಿಗಳು ಬರಲಿವೆ ಎಂಬ ಬಗ್ಗೆ ಕಂಪನಿ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಆದರೆ ಇದರ ಬಿಡುಗಡೆಯ ನಂತರ ಇದು ಪ್ರತ್ಯೇಕವಾಗಿ ಪ್ರಮುಖ ಇ-ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಮತ್ತು ಮೋಟೋರೋಲಾದ ಅಧಿಕೃತ ಆನ್‌ಲೈನ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರಲಿವೆ. ಬೆಲೆಯ ವಿಚಾರಕ್ಕೆ ಬರುವುದಾದರೆ ಕಂಪನಿಯು ಇನ್ನೂ ಅಧಿಕೃತವಾಗಿ ಇದರ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಇದು Motorola Edge 70 Ultra ಫೋನಿನ ಸುಧಾರಿತ ಆವೃತ್ತಿಯಾದ್ದರಿಂದ ಇದರ ಬೆಲೆಯು ಸರಿಸುಮಾರು 60,000 ರೂಪಾಯಿಗಳ ಆಸುಪಾಸಿನಲ್ಲಿ ಅಥವಾ ಅದಕ್ಕಿಂತ ತುಸು ಹೆಚ್ಚಾಗಿ ಇರುವ ಸಾಧ್ಯತೆಯಿದೆ.
ಈ ಫೋನ್ ನೋಡಲು ಸುಂದರವಾಗಿದ್ದು ಇದರಲ್ಲಿ 6.7 ಇಂಚಿನ ದೊಡ್ಡ ಸ್ಕ್ರೀನ್ ಇರಲಿದ್ದು ಸಿನಿಮಾ ನೋಡಲು ಮತ್ತು ಗೇಮ್ ಆಡಲು ಫೋನ್ ಬಹಳ ಸ್ಮೂತ್ ಆಗಿ ಕೆಲಸ ಮಾಡುತ್ತದೆ. ಇದರ ಪ್ರೊಸೆಸರ್ ಅತ್ಯಂತ ಪವರ್ಫುಲ್ ‘Snapdragon 8 Gen 5’ ಆಗಿರುವುದರಿಂದ ಫೋನ್ ಎಲ್ಲೂ ಹ್ಯಾಂಗ್ ಆಗುವುದಿಲ್ಲ. ಅಲ್ಲದೆ ಇದು ಬಲಿಷ್ಠವಾಗಿದ್ದು ನೀರು ಮತ್ತು ಧೂಳಿನಿಂದ ಹಾಳಾಗದಂತೆ IP68/69 ರೇಟಿಂಗ್ ವಿನ್ಯಾಸಗೊಳಿಸಲಾಗಿದೆ. ಇದು ಬಿದ್ದರೂ ಅಷ್ಟು ಸುಲಭವಾಗಿ ಒಡೆಯುವುದಿಲ್ಲ. ಇದರಲ್ಲಿ ಬರೆಯಲು ಮತ್ತು ಕೆಲಸ ಮಾಡಲು ‘ಸ್ಟೈಲಸ್ ಪೆನ್’ ಬಳಸುವ ಅವಕಾಶವೂ ಇರಲಿದೆ.
ಕ್ಯಾಮೆರಾ ಮತ್ತು ಫೋಟೋಗ್ರಫಿ ಫೋಟೋ ಪ್ರಿಯರಿಗಾಗಿ ಈ ಫೋನಿನಲ್ಲಿ ಮೂರು ಅದ್ಭುತ ಕ್ಯಾಮೆರಾಗಳಿವೆ. ಮುಖ್ಯ ಕ್ಯಾಮೆರಾ 50MP ಸಾಮರ್ಥ್ಯ ಹೊಂದಿದ್ದು, ಫೋಟೋ ಅಥವಾ ವಿಡಿಯೋ ಮಾಡುವಾಗ ಕೈ ಅಲುಗಾಡಿದರೂ ಚಿತ್ರಗಳು ಸ್ಪಷ್ಟವಾಗಿ ಬರುವಂತೆ (OIS) ತಂತ್ರಜ್ಞಾನ ಬಳಸಲಾಗಿದೆ. ದೂರದಲ್ಲಿರುವ ವಸ್ತುಗಳನ್ನು ಹತ್ತಿರವಾಗಿ ಮತ್ತು ಸ್ಪಷ್ಟವಾಗಿ ಫೋಟೋ ತೆಗೆಯಲು ಇದರಲ್ಲಿ ವಿಶೇಷ ‘ಪೆರಿಸ್ಕೋಪ್ ಲೆನ್ಸ್’ ಕೂಡ ಇರಲಿದೆ. ಇದು ದೊಡ್ಡ ಕಂಪನಿಗಳ ದುಬಾರಿ ಫೋನ್‌ಗಳಿಗೆ ಸಮನಾದ ಗುಣಮಟ್ಟವನ್ನು ನೀಡಲಿರುವುದಾಗಿ ನಿರೀಕ್ಷಿಸಲಾಗಿದೆ.