Tecno Spark Go 5G Launch
Tecno Spark Go 5G Launch: ಭಾರತದಲ್ಲಿ ಇಂದು ಟೆಕ್ನೋ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ ಅನ್ನು ಕೇವಲ 10,000 ರೂಗಳೊಳಗೆ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಈ ಸ್ಮಾರ್ಟ್ಫೋನ್ ಅತಿ ತೆಳ್ಳಗಿನ ಮತ್ತು ಹಗುರವಾದ ಅಂದ್ರೆ ಈ ಬಜೆಟ್ ಸ್ಮಾರ್ಟ್‌ಫೋನ್ ಕೇವಲ 7.99mm ದಪ್ಪ ಮತ್ತು ಕೇವಲ 194g ತೂಕವನ್ನು ಹೊಂದಿದೆ. ಈ ಟೆಕ್ನೋ ಸ್ಪಾರ್ಕ್ ಗೋ 5G ಸ್ಮಾರ್ಟ್ ಫೋನ್ ಅತ್ಯುತ್ತಮ ಲುಕ್ ಮತ್ತು ಡಿಸೈನ್ ಹೊಂದಿರುವ ಈ ಟೆಕ್ನೋ ಬಜೆಟ್ ಸ್ಮಾರ್ಟ್ಫೋನ್ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಮಾರಾಟದ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಹಾಗಾದ್ರೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಫೀಚರ್ಗಳೇನು ಮತ್ತು ಮೊದಲ ಮಾರಾಟ ಯಾವಾಗ ಎಂಬ ಸಂಪೂರ್ಣ ಮಾಹಿತಿಗಳನ್ನು ಈ ಕೆಳಗೆ ತಿಳಿಯಬಹುದು.
ಟೆಕ್ನೋ ಸ್ಪಾರ್ಕ್ ಗೋ 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.74 ಇಂಚಿನ HD+ ಫ್ಲಾಟ್ LCD ಸ್ಕ್ರೀನ್ ಅನ್ನು ಹೊಂದಿದ್ದು ಸುಗಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಫೋಟೋಗ್ರಾಫಿಗಾಗಿ ಇದು 50MP ಸಿಂಗಲ್ ಹಿಂಬದಿಯ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಟೆಕ್ನೋ ಸ್ಪಾರ್ಕ್ ಗೋ 5G ಹಿಂಬದಿಯ ಕ್ಯಾಮೆರಾ 30fps ನಲ್ಲಿ 2K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ಟೆಕ್ನೋ ಈ ಫೋನ್‌ನಲ್ಲಿ AI ಕ್ಯಾಮೆರಾ ವೈಶಿಷ್ಟ್ಯಗಳು, ಸರ್ಕಲ್ ಟು ಸರ್ಚ್, AI ಬರವಣಿಗೆ ಸಹಾಯಕ ಮುಂತಾದ ಹೆಚ್ಚಿನ ವೈಶಿಷ್ಟ್ಯಗಳನ್ನು ಸಹ ಒದಗಿಸಿದೆ.
ಈ ಸ್ಮಾರ್ಟ್ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 4GB LPDDR4X RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಅಲ್ಲದೆ 4GB ಭೌತಿಕ RAM, 4GB ವರ್ಚುವಲ್ RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಯಾಗಿದೆ. ಇದನ್ನು ಮೈಕ್ರೋ SD ಮೂಲಕ ವಿಸ್ತರಿಸಬಹುದು. ಟೆಕ್ನೋ ಸ್ಪಾರ್ಕ್ ಗೋ 5G ಫೋನ್ 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ದೊಡ್ಡ 6000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು ಟೆಕ್ನೋದ HiOS 15 ಜೊತೆಗೆ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
Also Read: Vivo V60 vs OPPO Reno 14 ಸ್ಮಾರ್ಟ್ ಫೋನ್ಗಳ ಕ್ಯಾಮೆರಾ, ಡಿಸ್ಪ್ಲೇ ಬ್ಯಾಟರಿ ಮತ್ತು ಬೆಲೆಯಲ್ಲಿ ಯಾವುದು ಬೆಸ್ಟ್?
ಭಾರತದಲ್ಲಿ ಇಂದು ಬಿಡುಗಡೆಯಾದ ಈ ಟೆಕ್ನೋ ಸ್ಪಾರ್ಕ್ ಗೋ 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ ಕೇವಲ 9,999 ರೂ.ಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್‌ನ ಮೊದಲ ಮಾರಾಟ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಇದೆ 21ನೇ ಆಗಸ್ಟ್ 2025 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.