ನಾಳೆ ಎಂಟ್ರಿ ಕೊಡಲಿದೆ Tecno Spark 50 5G ಸ್ಮಾರ್ಟ್‌ಫೋನ್! 6500mAh ಬ್ಯಾಟರಿ ಖಚಿತ
ನಾಳೆ (ಮಾರ್ಚ್ 27 ರಂದು) ಟೆಕ್ನೋ ಸ್ಪಾರ್ಕ್ 50 5G ಬಿಡುಗಡೆ
ಟೆಕ್ನೋ ಸ್ಪಾರ್ಕ್ 50 5G ಫೋನ್ 6,500mAh ಬ್ಯಾಟರಿ ಪಡೆದಿರಲಿದೆ
ಮುಂಬರುವ ಈ ಫೋನ್ ಕುರಿತು ಅಮೆಜಾನ್‌ನಲ್ಲಿ ಮೈಕ್ರೋಸೈಟ್ ತೆರೆಯಲಾಗಿದೆ
Tecno ಕಂಪನಿಯು ನೂತನವಾಗಿ Tecno Spark 50 5G ಮೊಬೈಲ್ ಅನ್ನು ನಾಳೆ (ಮಾರ್ಚ್ 27 ರಂದು) ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನೂತನ ಮೊಬೈಲ್ ಲಾಂಚ್ ಕುರಿತು ಅಮೆಜಾನ್ ತಾಣದಲ್ಲಿ ಮೈಕ್ರೋಸೈಟ್ ಕೂಡಾ ತೆರೆಯಲಾಗಿದೆ. ಇನ್ನು ಮುಂಬರುವ ಈ ಮೊಬೈಲ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಪಕ್ಕಾ ಆಗಿದೆ. ಅದಕ್ಕೆ ಪೂರಕವಾಗಿ 45W ಚಾರ್ಜಿಂಗ್ ವ್ಯವಸ್ಥೆ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ ನಾಲ್ಕು ಆಕರ್ಷಕ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ. ಅಲ್ಲದೇ ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿಲಿದೆ. ಹಾಗಾದರೆ ಟೆಕ್ನೋ ಸ್ಪಾರ್ಕ್ 50 5G ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
SurveyAlso Read : Realme 16 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುಹೂರ್ತ ನಿಗದಿ! ನಿರೀಕ್ಷಿತ ಫೀಚರ್ಸ್ ಗಮನಿಸಿ
Tecno Spark 50 5G ಲಾಂಚ್ ಡೇಟ್ ಹಾಗೂ ಕಲರ್
ಟೆಕ್ನೋ ಸಂಸ್ಥೆಯ ಮುಂಬರುವ ನೂತನ ಟೆಕ್ನೋ ಸ್ಪಾರ್ಕ್ 50 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಮೊಬೈಲ್ ನಾಳೆ (ಮಾರ್ಚ್ 27 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಮೊಬೈಲ್ ಬಿಡುಗಡೆ ಬಳಿಕ ಅಮೆಜಾನ್ ತಾಣದ ಮೂಲಕ ಮಾರಾಟಕ್ಕೆ ಬರಲಿದೆ ಎಂದು ದೃಢಪಡಿಸಿದೆ. ಹಾಗೆಯೇ ಭಾರತದಲ್ಲಿ ಈ ಫೋನ್ ಫ್ಯಾಂಟಸಿ ಪರ್ಪಲ್, ಮಿಂಟ್ ಗ್ರೀನ್, ಇಂಕ್ ಬ್ಲ್ಯಾಕ್ ಮತ್ತು ಷಾಂಪೇನ್ ಗೋಲ್ಡ್ ಕಲರ್ ಆಯ್ಕೆಗಳೊಂದಿಗೆ ಲಗ್ಗೆ ಇಡುವುದು ಬಹುತೇಕ ಖಚಿತ ಆಗಿದೆ. ಈ ಫೋನ್ ಬೆಲೆಯ ಬಗ್ಗೆ ಕಂಪನಿಯು ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ಟೆಕ್ನೋ ಸ್ಪಾರ್ಕ್ 50 5G ಮೊಬೈಲ್‌ನ ನಿರೀಕ್ಷಿತ ಫೀಚರ್ಸ್
ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಟೆಕ್ನೋ ಸ್ಪಾರ್ಕ್ 50 5G ಮೊಬೈಲ್ ನೋಡಲು ಐಫೋನ್ ಏರ್ ಮಾದರಿಯಂತೆ ಕಾಣಿಸುತ್ತದೆ. ಇದರ ಹಿಂಭಾಗದಲ್ಲಿ ಲಂಬವಾದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಒಟ್ಟಿಗೆ ಜೋಡಿಸಲಾಗಿದೆ ಅದರ ಬಲಭಾಗದಲ್ಲಿ LED ಫ್ಲ್ಯಾಷ್ ನೀಡಲಾಗಿದೆ. ಇನ್ನು ಈ ಮೊಬೈಲ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಪಕ್ಕಾ ಆಗಿದೆ. ಅದಕ್ಕೆ ಪೂರಕವಾಗಿ 45W ಚಾರ್ಜಿಂಗ್ ವ್ಯವಸ್ಥೆ ಪಡೆದುಕೊಂಡಿದೆ.
ಟೆಕ್ನೋ ಸ್ಪಾರ್ಕ್ 50 5G ಮೊಬೈಲ್ 1.5 ಮಿಲಿಯನ್ ಡ್ರಾಪ್ ರೆಸಿಸ್ಟೆನ್ಸ್‌ಗಾಗಿ MIL-STD ಪ್ರಮಾಣೀಕರಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಫೋನ್ ಪ್ರಾದೇಶಿಕ ಭಾಷೆಗಳಲ್ಲಿ ಎಲ್ಲಾ AI ಅಸಿಸ್ಟಂಟ್‌ಗಳನ್ನು ಸಹ ಪಡೆಯುತ್ತಿದೆ. ಹಾಗೆತಯೇ ಇದು ಫ್ಯಾಂಟಸಿ ಪರ್ಪಲ್, ಮಿಂಟ್ ಗ್ರೀನ್, ಇಂಕ್ ಬ್ಲ್ಯಾಕ್ ಮತ್ತು ಷಾಂಪೇನ್ ಗೋಲ್ಡ್ ಬಣ್ಣಗಳ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹಾಗೆಯೇ ಇದು ಅಪ್‌ಗ್ರೇಡೆಡ್ ಸಿಗ್ನಲ್ ಬೂಸ್ಟಿಂಗ್ UPS 3.0 ತಂತ್ರಜ್ಞಾನ ಪಡೆದುಕೊಂಡಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile