ಟೆಕ್ನೋ ಮೊಬೈಲ್ ಸಂಸ್ಥೆಯ ಹೊಸ TECNO POP X ಮೊಬೈಲ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಟೆಕ್ನೋ ಪಾಪ್ X ಮೊಬೈಲ್‌ನ ಸೇಲ್ ಇಂದಿನಿಂದ ( ಮಾರ್ಚ್ 6 ರಂದು ) ಪ್ರಾರಂಭವಾಗಲಿದೆ. ಈ ಮೊಬೈಲ್ ಕ್ವಾಲ್ಕಾಮ್ 1.8 GHz ಆಕ್ಟಾ-ಕೋರ್ UNISOC T7250 12nm ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು ಜೊತೆಗೆ 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ. ಇಂದು ಮಾರಾಟ ಶುರು ಮಾಡಲಿರುವ ಟೆಕ್ನೋ ಪಾಪ್ X ಮೊಬೈಲ್ ಎರಡು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಟೆಕ್ನೋ ಪಾಪ್ X ಮೊಬೈಲ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಇಂದು Motorola Edge 70 Fusion ಆರಂಭಿಕ ಸೇಲ್! ಕಂಪ್ಲೀಟ್ ಮಾಹಿತಿ ಇಲ್ಲಿದೆ
ಟೆಕ್ನೋ ಪಾಪ್ X ಮೊಬೈಲ್ ಇಂದಿನಿಂದ (ಮಾರ್ಚ್ 6 ರಂದು) ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭ ಮಾಡಲಿದೆ. ಇದರ 4GB + 64GB ವೇರಿಯಂಟ್ ಬೆಲೆ 8,499 ರೂಗಳು ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಚಿಲ್ಲಿ ಗ್ರೀನ್ ಮತ್ತು ವೈಟ್ ಕಲರ್ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಖರೀದಿಸಬಹುದಾಗಿದೆ. ಗ್ರಾಹಕರು HDFC ಬ್ಯಾಂಕ್ ಆಫರ್ ಪಡೆದುಕೊಂಡರೆ ಈ ಫೋನ್ ಅನ್ನು 7,749 ರೂಗಳಿಗೆ ಖರೀದಿಸಬಹುದು.
ಹೊಸ ಟೆಕ್ನೋ ಪಾಪ್ X ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಮೊಬೈಲ್ 20:9 ಸ್ಕ್ರೀನ್ ಅನುಪಾತ ಹೊಂದಿರುವ ಜೊತೆಗೆ 1600 x 720 ಪಿಕ್ಸೆಲ್ ರೆಸಲ್ಯೂಶನನ್ನು ಪಡೆದಿದೆ. ಹಾಗೆಯೇ ಈ ನೂತನ ಫೋನ್ ಕ್ವಾಲ್ಕಾಮ್ 1.8 GHz ಆಕ್ಟಾ-ಕೋರ್ UNISOC T7250 12nm ಪ್ರೊಸೆಸರ್‌ಸಾಮರ್ಥ್ಯ ಪಡೆದಿದ್ದು ಇದಕ್ಕೆ ಪೂರಕವಾಗಿ 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ.
ಇನ್ನು ಹೊಸ ಟೆಕ್ನೋ ಪಾಪ್ X ಮೊಬೈಲ್ 15W ವೈರ್ಡ್ ಚಾರ್ಜಿಂಗ್ ಬೆಂಬಲಿತ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಪಡೆದುಕೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ ಹಾಗೂ ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಇದರ ಜೊತೆಗೆ ಈ ಮೊಬೈಲ್ ಧೂಳು ಮತ್ತು ಸ್ಪ್ಲಾಶ್ ನಿರೋಧಕಕ್ಕಾಗಿ IP64 ರೇಟಿಂಗ್ ಪಡೆದುಕೊಂಡಿದೆ.