ಇಂದು Motorola Edge 70 Fusion ಆರಂಭಿಕ ಸೇಲ್! ಕಂಪ್ಲೀಟ್ ಮಾಹಿತಿ ಇಲ್ಲಿದೆ
ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮೊಟೊರೊಲಾ ಎಡ್ಜ್ 70 ಫ್ಯೂಷನ್ Early Bird Sale
ಮೊಟೊರೊಲಾ ಎಡ್ಜ್ 70 ಫ್ಯೂಷನ್ 7000mAh ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ
ಮೊಟೊರೊಲಾ ಎಡ್ಜ್ 70 ಫ್ಯೂಷನ್ 50MP ಸೋನಿ LYT-710 ಸೆನ್ಸಾರ್ ಕ್ಯಾಮೆರಾ ಪಡೆದಿರಲಿದೆ
ಮೊಟೊರೊಲಾ ಕಂಪನಿಯು ಹೊಸದಾಗಿ Motorola Edge 70 Fusion 5G ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದೆ. ಈಗಾಗಲೇ ಈ ಮೊಬೈಲ್ ಗ್ರಾಹಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನ ಮೈಕ್ರೋಸೈಟ್ ಮೂಲಕ ಕಂಪನಿಯು ಹೊಸ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್‌ನ ಆರಂಭಿಕ ಮಾರಾಟವನ್ನು (Early Bird Sale) ಇಂದು ಮಾರ್ಚ್ 6 ರಂದು ಪ್ರಾರಂಭಿಸಲಿದೆ. ಅಂದಹಾಗೆ ಈ ಮೊಬೈಲ್ ಮೊಟೊ AI ಬೆಂಬಲಿತ 50MP ಸೋನಿ LYT-710 ಮುಖ್ಯ ಸೆನ್ಸಾರ್ ಪಡೆದಿರುವುದು ಪ್ರಮುಖ ಹೈಲೈಟ್ ಅಂಶಗಳಲ್ಲಿ ಒಂದಾಗಿದೆ. ಅಲ್ಲದೇ ಇದು Snapdragon 7s Gen 3 SoC ಪ್ರೊಸೆಸರ್ ಒಳಗೊಂಡಿರುವ ಸಾಧ್ಯತೆಗಳು ಇವೆ. ಇನ್ನುಳಿದಂತೆ ಮುಂಬರುವ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್‌ನ ಇನ್ನಷ್ಟು ವಿವರಗಳನ್ನು ಮುಂದೆ ತಿಳಿಯೋಣ.
SurveyAlso Read : ಭಾರತದಲ್ಲಿ Nothing Phone 4a ಸರಣಿ ಬಿಡುಗಡೆ! ವೇಗದ ಪ್ರೊಸೆಸರ್, 50MP ಕ್ಯಾಮೆರಾ ಸೌಲಭ್ಯ
Motorola Edge 70 Fusion ಆರಂಭಿಕ ಮಾರಾಟ
ಮೊಟೊ ಕಂಪನಿಯು ಮೊಟೊರೊಲಾ ಎಡ್ಜ್ 70 ಸರಣಿಯಲ್ಲಿ ಪರಿಚಯಿಸಲಿರುವ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಈಗಾಗಲೇ ಟ್ರೆಂಡ್ ಹೆಚ್ಚಿಸಿದೆ. ಫ್ಲಿಪ್‌ಕಾರ್ಟ್ ಮೈಕ್ರೋಸೈಡರ್ ಈ ಮೊಬೈಲ್‌ನ ಆರಂಭಿಕ ಮಾರಾಟ ಇಂದು (ಮಾರ್ಚ್ 6 ರಂದು) ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದೆ. ಇನ್ನು ಫ್ಲಿಪ್‌ಕಾರ್ಟ್ ಲಿಮಿಟೆಡ್ ಸ್ಟಾಕ್ ಓನ್ಲಿ ಎಂದಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಪ್ಯಾಂಟೋನ್ ಸಿಲೂಯೆಟ್, ಪ್ಯಾಂಟೋನ್ ಬ್ಲೂ ಸರ್ಫ್ ಮತ್ತು ಪ್ಯಾಂಟೋನ್ ಕಂಟ್ರಿ ಏರ್ ಕಲರ್ ಆಯ್ಕೆ ಪಡೆದಿರಬಹುದು ಎನ್ನಲಾಗಿದೆ. ಆದರೆ ಅಧಿಕೃತ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.

ಮೊಟೊರೊಲಾ ಎಡ್ಜ್ 70 ಫ್ಯೂಷನ್ ನಿರೀಕ್ಷಿತ ಫೀಚರ್ಸ್
ಮೊಟೊರೊಲಾದ ಈ ಮೊಬೈಲ್ 6.78 ಇಂಚಿನ ಕ್ವಾಡ್ ಕರ್ವ್ OLED ಮಾದರಿಯ ಡಿಸ್‌ಪ್ಲೇ ಹೊಂದಿರಲಿದೆ. ಹಾಗೆಯೇ ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಒಳಗೊಂಡಿರುವ ಸಾಧ್ಯತೆಗಳು ಇವೆ ಜೊತೆಗೆ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಣೆ ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಫೋನ್ Snapdragon 7s Gen 3 SoC ಚಿಪ್‌ಸೆಟ್ ಪ್ರೊಸೆಸರ್ ಬಲ ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ Hello UI ಸಪೋರ್ಟ್ ಜೊತೆಗೆ ಇತ್ತೀಚಿನ ಆಂಡ್ರಾಯ್ಡ್ 16 OS ನಲ್ಲಿ ರನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಾಗೆಯೇ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ 50MP ಸೋನಿ LYT-710 ಸೆನ್ಸಾರ್ ಕ್ಯಾಮೆರಾ ಪಡೆದಿರುವ ಸಾಧ್ಯತೆಗಳು ಅಧಿಕ. ಇದರೊಂದಿಗೆ ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾ ವೈಡ್ ಸೆನ್ಸಾರ್ ಪಡೆದಿರಲಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಒದಗಿಸುವ ಸೂಚನೆಗಳು ಇವೆ. ಅಂದಹಾಗೆ ಎಲ್ಲಾ ಕ್ಯಾಮೆರಾಗಳಿಗೆ 4K ಸಪೋರ್ಟ್ ಇರಲಿದೆ ಎನ್ನಲಾಗಿದೆ. ಇನ್ನು ಈ ಫೋನ್ 7000 mAh ಬ್ಯಾಟರಿ ಸಪೋರ್ಟ್ ಜೊತೆಗೆ 68W ಟರ್ಬೊ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರುವುದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile