ಅಬ್ಬಬ್ಬಾ! ಸ್ಯಾಮ್‌ಸಂಗ್‌ನಿಂದ Galaxy M16 ಸ್ಮಾರ್ಟ್ಫೋನ್ ಬಿಡುಗಡೆ! ಆಫರ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

Updated on 27-Feb-2025
HIGHLIGHTS

ಸ್ಯಾಮ್‌ಸಂಗ್‌ನ ಈ Galaxy M16 ಸ್ಮಾರ್ಟ್ಫೋನ್ ಆರಂಭಿಕ ಕೇವಲ 11,499 ರೂಗಳಿಗೆ ಪರಿಚಯವಾಗಿದೆ.

Samsung Galaxy M16 5G ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾದೊಂದಿಗೆ ಬಿಡುಗಡೆ.

ಸ್ಯಾಮ್‌ಸಂಗ್ ಬಜೆಟ್ ವಿಭಾಗದಲ್ಲಿ ಕೈಗೆಟುಕುವ ಬೆಲೆಗೆ ಹೊಸ 5G ಫೋನ್‌ಗಳ ಬೇಡಿಕೆಯನ್ನು ಪೂರೈಸುವ ಗುರಿ ಹೊಂದಿದೆ.

Samsung Galaxy M16 5G launched in India: ಭಾರತದಲ್ಲಿ ಸ್ಯಾಮ್‌ಸಂಗ್ ಬಜೆಟ್ ವಿಭಾಗದಲ್ಲಿ ತನ್ನ ಹೊಸ Samsung Galaxy M16 5G ಸ್ಮಾರ್ಟ್‌ಫೋನ್ ಕೇವಲ 10,000 ರೂಗಳೊಳಗೆ ಅಮೆಜಾನ್ ಮೂಲಕ ಬಿಡುಗಡೆಗೊಳಿಸಿ ಮಾರಾಟ ಮಾಡಲು ಸಜ್ಜಾಗಿದೆ. Samsung Galaxy M16 5G ಸ್ಮಾರ್ಟ್ಫೋನ್ 5000mAh ಬ್ಯಾಟರಿ ಮತ್ತು 50MP ಪ್ರೈಮರಿ ಕ್ಯಾಮೆರಾದೊಂದಿಗೆ ಅನೇಕ ಲೇಟೆಸ್ಟ್ ಫೀಚರ್ಗಳನ್ನು ಈ Samsung Galaxy M16 ಸ್ಮಾರ್ಟ್ಫೋನ್ ಹೊಂದಿದೆ. ಸ್ಯಾಮ್‌ಸಂಗ್ ಇದರೊಂದಿಗೆ ದೇಶದಲ್ಲಿ ಕೈಗೆಟುಕುವ ಬೆಲೆಗೆ ಈ 5G ಫೋನ್‌ಗಳ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ.

Also Read: Realme P3x 5G ಮೊದಲ ಮಾರಾಟ ನಾಳೆ ಮಧ್ಯಾಹ್ನದಿಂದ ಶುರು! ಫೀಚರ್ ಮತ್ತು ಆಫರ್ ಬೆಲೆ ಎಷ್ಟು ತಿಳಿಯಿರಿ!

ಭಾರತದಲ್ಲಿ Samsung Galaxy M16 5G ಆಫರ್ ಬೆಲೆ ಮತ್ತು ಲಭ್ಯತೆಯ ಮಾಹಿತಿ!

ಭಾರತದಲ್ಲಿ ಇಂದು ಬಿಡುಗಡೆಯಾದ ಈ ಹೊಸ Samsung Galaxy M16 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಇದನ್ನು ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ 11,499 ರೂಗಳಿಗೆ ಪರಿಚಯಿಸಿದೆ. ಈ Samsung Galaxy M16 5G ಫೋನ್‌ ಇದೆ 5ನೇ ಮಾರ್ಚ್ 2025 ರಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಇಂಡಿಯಾದಿಂದ ಪ್ರತ್ಯೇಕವಾಗಿ ಲಭ್ಯವಿರುತ್ತವೆ. ಇವು ಪರಿಚಯಾತ್ಮಕ ಬೆಲೆಗಳು ಎಂದು ಸ್ಯಾಮ್‌ಸಂಗ್ ಹೇಳುತ್ತದೆ ಅಂದರೆ ಮುಂದಿನ ದಿನಗಳಲ್ಲಿ ಬೆಲೆಗಳನ್ನು ಹೆಚ್ಚಿಸುವುದನ್ನು ಗಮನಿಸಬಹುದು.

Sumsung Galaxy M16 launched in India

Samsung Galaxy M16 5G ಫೀಚರ್ ಮತ್ತು ವಿಶೇಷಣಗಳೇನು?

ಭಾರತದಲ್ಲಿ ಇಂದು ಬಿಡುಗಡೆಯಾದ ಈ Samsung Galaxy M16 5G ಸ್ಮಾರ್ಟ್ಫೋನ್ ಫೀಚರ್ ಬಗ್ಗೆ ಮಾತನಾಡುವುದಾದರೆ ಇದು 6.7 ಇಂಚಿನ ಡಿಸ್ಪ್ಲೇಯನ್ನು ಸೂಪರ್ AMOLED ಸ್ಕ್ರೀನ್ ಜೊತೆಗೆ ಫುಲ್ HD+ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 800 nits ಗರಿಷ್ಠ ಹೊಳಪನ್ನು ಹೊಂದಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ Samsung Galaxy M16 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತೊಂದು 5MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಸೆನ್ಸಾರ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ.

Sumsung Galaxy M16 launched in India

ಅಲ್ಲದೆ ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಜೊತೆಗೆ ಉತ್ತಮ ಗುಣಮಟ್ಟದ ಸೆಲ್ಫಿಗಳಿಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದು ಡೈಮೆನ್ಸಿಟಿ 6300 ಅನ್ನು ಪ್ಯಾಕ್ ಮಾಡುತ್ತದೆ ಮತ್ತು ಆಂಡ್ರಾಯ್ಡ್ 15-ಆಧಾರಿತ One UI 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅತ್ಯಾಕರ್ಷಕ ವಿಷಯವೆಂದರೆ ಸ್ಯಾಮ್‌ಸಂಗ್ ಆರು OS ಅಪ್‌ಗ್ರೇಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗೆ ಆರು ವರ್ಷಗಳ ಭದ್ರತಾ ನವೀಕರಣಗಳನ್ನು ನೀಡಲಿದೆ. ಫೋನ್ 25W ವರೆಗೆ ಚಾರ್ಜ್ ಮಾಡಲು ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :