Samsung Galaxy M06 5G launched under 10k with all-round features
Samsung Galaxy M06 5G launched in India: ಭಾರತದಲ್ಲಿ ಸ್ಯಾಮ್‌ಸಂಗ್ ಬಜೆಟ್ ವಿಭಾಗದಲ್ಲಿ ತನ್ನ ಹೊಸ Samsung Galaxy M06 5G ಸ್ಮಾರ್ಟ್‌ಫೋನ್ ಕೇವಲ 10,000 ರೂಗಳೊಳಗೆ ಅಮೆಜಾನ್ ಮೂಲಕ ಬಿಡುಗಡೆಗೊಳಿಸಿ ಮಾರಾಟ ಮಾಡಲು ಸಜ್ಜಾಗಿದೆ. Samsung Galaxy M06 5G ಸ್ಮಾರ್ಟ್ಫೋನ್ 5000mAh ಬ್ಯಾಟರಿ ಮತ್ತು 50MP ಪ್ರೈಮರಿ ಕ್ಯಾಮೆರಾದೊಂದಿಗೆ ಅನೇಕ ಲೇಟೆಸ್ಟ್ ಫೀಚರ್ಗಳನ್ನು ಈ Samsung Galaxy M06 ಸ್ಮಾರ್ಟ್ಫೋನ್ ಹೊಂದಿದೆ. ಸ್ಯಾಮ್‌ಸಂಗ್ ಇದರೊಂದಿಗೆ ದೇಶದಲ್ಲಿ ಕೈಗೆಟುಕುವ ಬೆಲೆಗೆ ಈ 5G ಫೋನ್‌ಗಳ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ.
Also Read: ಅಬ್ಬಬ್ಬಾ! ಸ್ಯಾಮ್‌ಸಂಗ್‌ನಿಂದ Galaxy M16 ಸ್ಮಾರ್ಟ್ಫೋನ್ ಬಿಡುಗಡೆ! ಆಫರ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಭಾರತದಲ್ಲಿ ಇಂದು ಬಿಡುಗಡೆಯಾದ ಈ ಹೊಸ Samsung Galaxy M06 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಇದನ್ನು ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ 9,499 ರೂಗಳಿಗೆ ಪರಿಚಯಿಸಿದೆ. ಈ Samsung Galaxy M06 5G ಫೋನ್ ಇದೆ 7ನೇ ಮಾರ್ಚ್ 2025 ರಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಇಂಡಿಯಾದಿಂದ ಪ್ರತ್ಯೇಕವಾಗಿ ಲಭ್ಯವಿರುತ್ತವೆ. ಇವು ಪರಿಚಯಾತ್ಮಕ ಬೆಲೆಗಳು ಎಂದು ಸ್ಯಾಮ್‌ಸಂಗ್ ಹೇಳುತ್ತದೆ ಅಂದರೆ ಮುಂದಿನ ದಿನಗಳಲ್ಲಿ ಬೆಲೆಗಳನ್ನು ಹೆಚ್ಚಿಸುವುದನ್ನು ಗಮನಿಸಬಹುದು.
ಈ Samsung Galaxy M06 5G ಸ್ಮಾರ್ಟ್ಫೋನ್ 6.7 ಇಂಚಿನ ಡಿಸ್ಪ್ಲೇಯನ್ನು LCD ಟೆಕ್ನಾಲಜಿಯೊಂದಿಗೆ HD+ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 800 nits ಗರಿಷ್ಠ ಹೊಳಪನ್ನು ಹೊಂದಿದೆ. ಇಮೇಜಿಂಗ್ ವಿಷಯದಲ್ಲಿ Galaxy M06 5G ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದೆ. 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್. ಸೆಲ್ಫಿಗಳಿಗಾಗಿ ನೀವು 8MP ಕ್ಯಾಮೆರಾವನ್ನು ಪಡೆಯುತ್ತೀರಿ.
Samsung ಇದನ್ನು MediaTek Dimensity 6300 ಪ್ರೊಸೆಸರ್ನೊಂದಿಗೆ ಪ್ಯಾಕ್ ಮಾಡಿದೆ ಮತ್ತು Android 15-ಆಧಾರಿತ One UI 7.0 ನೊಂದಿಗೆ ಫೋನ್ ಅನ್ನು ರವಾನಿಸುತ್ತಿದೆ. ಈ ಫೋನ್ 25W ಚಾರ್ಜಿಂಗ್ ವೇಗದೊಂದಿಗೆ 5000mAh ಬ್ಯಾಟರಿ ಮತ್ತು ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ ಎಸಿ, ಬ್ಲೂಟೂತ್ 5.3, ಜಿಪಿಎಸ್ ಮತ್ತು 3.5mm ಆಡಿಯೊ ಜ್ಯಾಕ್ ಸೇರಿವೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದೆ.