12GB RAM ವರೆಗಿನ Realme C61 ಸ್ಮಾರ್ಟ್ಫೋನ್ ಕೇವಲ 9000 ರೂಗಳಿಗೆ ಲಭ್ಯ! ಹೊಸ ಆಫರ್ ಮತ್ತು ಫೀಚರ್ಗಳೇನು?

Updated on 03-Feb-2025
HIGHLIGHTS

ಪ್ರಸ್ತುತ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ಅತ್ಯುತ್ತಮ ಡೀಲ್ ನೀಡುತ್ತಿದೆ.

Realme C61 ಸ್ಮಾರ್ಟ್ಫೋನ್ 12GB RAM ಫೋನ್‌ 9,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ.

ಹೆಚ್ಚುವರಿಯಾಗಿ ನೀವು ಈ ಸ್ಮಾರ್ಟ್ಫೋನ್ ಮೇಲೆ ವಿನಿಮಯ ಬೋನಸ್‌ನೊಂದಿಗೆ ಸಹ ಪಡೆಯಬಹುದು.

Realme C61: ನೀವು ಕೈಗೆಟುಕುವ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಹೊಸ ಫೋನ್ ಖರೀದಿಸಲು ಬಯಸಿದರೆ ನೀವು ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ಅನ್ನು ತಪ್ಪಿಸಿಕೊಳ್ಳಬಾರದು. ಈ ಸೇಲ್‌ನಲ್ಲಿ 12GB RAM ವರೆಗಿನ ಫೋನ್‌ 9,000 ರೂಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಕಂಪನಿಯು ಈ Realme C61 ಫೋನ್‌ಗಳ ಮೇಲೆ ಬ್ಯಾಂಕ್ ರಿಯಾಯಿತಿಗಳ ಜೊತೆಗೆ ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡುತ್ತಿದೆ. ನೀವು ಈ ಸ್ಮಾರ್ಟ್ಫೋನ್ ವಿನಿಮಯ ಬೋನಸ್‌ನೊಂದಿಗೆ ಸಹ ಖರೀದಿಸಬಹುದು.

ಭಾರತದಲ್ಲಿ Realme C61 ಆಫರ್ ಬೆಲೆ:

ಇದರ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ Realme C61 ರೂಪಾಂತರದ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 8,199 ರೂ.ಗಳಿಗೆ ಲಭ್ಯವಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಫೋನ್‌ಗೆ ಪಾವತಿಸಿದರೆ ನಿಮಗೆ 5% ಕ್ಯಾಶ್‌ಬ್ಯಾಕ್ ಸಿಗುತ್ತದೆ. ನೀವು ಈ ಸ್ಮಾರ್ಟ್ಫೋನ್ ಅನ್ನು ತಿಂಗಳಿಗೆ ಕೇವಲ 299 ರೂ.ಗಳ ಆರಂಭಿಕ EMI ನಲ್ಲಿ ಖರೀದಿಸಬಹುದು. ವಿನಿಮಯ ಕೊಡುಗೆಯಲ್ಲಿ ನೀವು 7,650 ರೂ.ಗಳವರೆಗೆ ಪ್ರಯೋಜನವನ್ನು ಪಡೆಯಬಹುದು.

ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Realme C61 ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 5,550 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: 8000 ರೂಗಳಲ್ಲಿ ಖರೀದಿಸಿ 50MP AI ಕ್ಯಾಮೆರಾದೊಂದಿಗೆ 8GB RAM ಮತ್ತು 5000mAh ಸ್ಮಾರ್ಟ್ಫೋನ್!

Realme C61 ಸ್ಮಾರ್ಟ್ಫೋನ್ ಫೀಚರ್ ವಿವರಗಳು

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಈ Realme C61 ಫೋನ್‌ನಲ್ಲಿ ನೀವು 6GB ನೈಜ ಮತ್ತು 6GB ವರ್ಚುವಲ್ RAM ನ ಬೆಂಬಲವನ್ನು ಪಡೆಯುತ್ತೀರಿ. ಇದು ಫೋನಿನ ಒಟ್ಟು RAM ಅನ್ನು 12GB ಗೆ ಹೆಚ್ಚಿಸುತ್ತದೆ. 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ Unisoc T612 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನೀವು 6.74 ಇಂಚಿನ HD+ ಡಿಸ್ಪ್ಲೇಯನ್ನು ಪಡೆಯುತ್ತೀರಿ.

ಈ ಡಿಸ್ಪ್ಲೇ 90Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಫೋಟೋಗ್ರಾಫಿಗಾಗಿ ಫೋನ್‌ನ ಹಿಂಭಾಗದಲ್ಲಿ 32-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಒದಗಿಸಲಾಗಿದೆ. ಅದೇ ಸಮಯದಲ್ಲಿ ಸೆಲ್ಫಿಗಾಗಿ ಕಂಪನಿಯು ಈ ಫೋನ್‌ನಲ್ಲಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒದಗಿಸುತ್ತಿದೆ. ಫೋನ್‌ಗೆ ಶಕ್ತಿ ತುಂಬಲು ಇದು 5000mAh ಬ್ಯಾಟರಿಯನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :