Samsung Galaxy F55 5G Price Cut
ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿರುವ ಈ Samsung Galaxy F55 5G ಸ್ಮಾರ್ಟ್ಫೋನ್ 50MP Selfie ಜೊತೆಗೆ ಸೂಪರ್ ಲುಕ್ ಡಿಸೈನಿಂಗ್ ಜೊತೆಗೆ ಫಾಸ್ಟ್ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳಿಂದ ತುಂಬಿರುವ ಸ್ಮಾರ್ಟ್‌ಫೋನ್ ಅನ್ನು ಈಗ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಕಂಪನಿ ನೀಡುತ್ತಿದೆ. ಈ Samsung Galaxy F55 5G ಸ್ಮಾರ್ಟ್ಫೋನ್ ಕೇವಲ 20,999 ರೂಗಳಿಗೆ ಲಭ್ಯವಿದೆ. ಈ ಫೋನ್ ಕೇವಲ ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುವುದಿಲ್ಲ. ಇದು ಸೂಪರ್ ಸ್ಲೀಕ್ ಮತ್ತು ಪ್ರೀಮಿಯಂ ಆಗಿ ಕಾಣುತ್ತದೆ. ಈಗ ನೀವು ತಿಳಿದುಕೊಳ್ಳಬೇಕಾಗಿರುವುದು ಈ ಅಜೇಯ ಕೊಡುಗೆಯನ್ನು ಕಳೆದುಕೊಳ್ಳುವ ಮೊದಲು ಅದನ್ನು ಹೇಗೆ ಪಡೆದುಕೊಳ್ಳುವುದು.
Samsung Galaxy F55 5G ನಿಜವಾದ MRP ಬೆಲೆ 28,999 ರೂಗಳಾಗಿವೆ ಆದರೆ ಈಗ ಫ್ಲಿಪ್ಕಾರ್ಟ್ ಮೂಲಕ ಕೇವಲ 20,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಂದ್ರೆ ಬರೋಬ್ಬರಿ 8000 ರೂಗಳ ಸ್ಪೆಷಲ್ ಡಿಸ್ಕೌಂಟ್ ನೀಡುವುದರೊಂದಿಗೆ ಬೆಲೆಯನ್ನು ಕಡಿಮೆಗೊಳಿಸಿದೆ. ಈ ವಿನಿಮಯ ಕೊಡುಗೆಯು ನಿಮ್ಮ ಮೊಬೈಲ್ ಸ್ಥಿತಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನ ಪ್ರಸ್ತುತ ಮೌಲ್ಯವನ್ನು ಆಧರಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ನಿಮ್ಮ ಸ್ಮಾರ್ಟ್ಫೋನ್ ವಿನಿಮಯ ಮೌಲ್ಯವನ್ನು ಪರಿಶೀಲಿಸಬಹುದು.
ಹೆಚ್ಚುವರಿಯಾಗಿ ಆಸಕ್ತ ಬಳಕೆದಾರರು 9 ತಿಂಗಳ ನೋ-ಕಾಸ್ಟ್ EMI ಆಯ್ಕೆಯೊಂದಿಗೆ ನೀವು ಈ ಡೀಲ್ ಅನ್ನು ಪಡೆದುಕೊಳ್ಳಬಹುದು. ಇದು ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ. ಜೊತೆಗೆ 20,200 ರೂಗಳವರೆಗೆ ವಿನಿಮಯ ಕೊಡುಗೆಯನ್ನು ಸಹ ಪಡೆಯಿರಿ ಮತ್ತು ವಿನಿಮಯ ಡೀಲ್‌ಗಳ ಮೂಲಕ ಈ ಸ್ಮಾರ್ಟ್‌ಫೋನ್‌ಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯಬಹುದು.
Samsung Galaxy F55 5G ಅದ್ಭುತವಾದ 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ ರೋಮಾಂಚಕ ಬಣ್ಣಗಳು ಮತ್ತು ಸುಗಮ ದೃಶ್ಯಗಳನ್ನು ಒದಗಿಸುತ್ತದೆ. Qualcomm Snapdragon 7 Gen 1 ಚಿಪ್‌ಸೆಟ್‌ನಿಂದ ನಡೆಸಲ್ಪಡುವ ಈ ಫೋನ್ ಬಹುಕಾರ್ಯಕ ಮತ್ತು ಗೇಮಿಂಗ್‌ಗಾಗಿ ಪ್ರಬಲ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇದು 12GB ವರೆಗೆ RAM ಮತ್ತು 256GB ವರೆಗೆ ಇಂಟರ್ನಲ್ ಸ್ಟೋರೇಜ್ ಜೊತೆಗೆ ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಸ್ಟೋರೇಜ್ ಅನ್ನು ನೀಡುತ್ತದೆ. ಟ್ರಿಪಲ್-ಕ್ಯಾಮೆರಾ ಸೆಟಪ್ 50MP ಪ್ರೈಮರಿ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಉತ್ತಮ ಫೋಟೋಗಳಿಗಾಗಿ 2MP ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿದೆ. 5000mAh ಬ್ಯಾಟರಿಯು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಇದು ತ್ವರಿತ ರೀಚಾರ್ಜ್‌ಗಳನ್ನು ಖಚಿತಪಡಿಸುತ್ತದೆ.