Samsung Galaxy Unpacked 2026 ಕಾರ್ಯಕ್ರಮಕ್ಕೆ ಮುಹೂರ್ತ ಫೀಕ್ಸ್! ಏನನ್ನು ನಿರೀಕ್ಷಿಸಬಹುದು?
ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ Galaxy Unpacked 2026 ಕಾರ್ಯಕ್ರಮವು ಇದೇ ಜುಲೈ 22, 2026 ರಂದು ಲಂಡನ್‌ನಲ್ಲಿ ನಡೆಯಲಿದೆ ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಈ ಕಾರ್ಯಕ್ರಮದಲ್ಲಿ ಕಂಪನಿಯ ಹೊಸ ತಲೆಮಾರಿನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಾದ Samsung Galaxy Z Fold 8, Galaxy Z Flip 8 ಹಾಗೂ Galaxy Z Fold 8 Ultra ಸ್ಮಾರ್ಟ್‌ಫೋನ್‌ಗಳು ಅನಾವರಣಗೊಳ್ಳುವ ನಿರೀಕ್ಷೆಯಿದೆ. ಅಲ್ಲದೇ ಭಾರತದಲ್ಲಿ ಈ ಹೊಸ ಗ್ಯಾಲಕ್ಸಿ ಫೋನ್‌ಗಳ ಪ್ರಿ-ಬುಕಿಂಗ್ ಅನ್ನು ಸಂಸ್ಥೆಯು ಈಗಾಗಲೇ ಆರಂಭಿಸಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Airtel ಕಂಪನಿಯ 489 ರೂ.ಗಳ ಈ ರೀಚಾರ್ಜ್‌ನಲ್ಲಿ 77 ದಿನಗಳ ವ್ಯಾಲಿಡಿಟಿ ಜೊತೆಗೆ ಡೇಟಾ ಸೌಲಭ್ಯ!
Samsung Galaxy Unpacked 2026 ಯಾವಾಗ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಇದೇ ಜುಲೈ 22, 2026 ರಂದು ಲಂಡನ್‌ನಲ್ಲಿ ನಡೆಯಲಿದೆ. ಇನ್ನು ಈ ಸರಣಿ ಬಿಡುಗಡೆಗೂ ಮುನ್ನವೇ ಕಂಪನಿಯು ಭಾರತದಲ್ಲಿ ಮುಂಬರುವ ಈ ಗ್ಯಾಲಕ್ಸಿ ಫೋನ್‌ಗಳ ಪ್ರಿ-ಬುಕಿಂಗ್ ಪ್ರಾರಂಭ ಮಾಡಿದೆ. ಆಸಕ್ತ ಗ್ರಾಹಕರು ಸ್ಯಾಮ್‌ಸಂಗ್ ಸ್ಟೋರ್ ಮೂಲಕ ಕೇವಲ 999 ರೂ.ಗಳನ್ನು ಪಾವತಿಸಿ ಫೋನ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಕಂಪನಿಯ ಮಾಹಿತಿ ಪ್ರಕಾರ, ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ 2,799 ರೂ.ಗಳ ಮೌಲ್ಯದ ಖಚಿತ ವೋಚರ್ ಕೂಡ ನೀಡಲಾಗುತ್ತದೆ.

ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮ ಹೇಗೆ ವೀಕ್ಷಿಸಬಹುದು?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಕಾರ್ಯಕ್ರಮವು ಜುಲೈ 22 ರಂದು ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ಪ್ರಾರಂಭವಾಗಲಿದೆ. ಸ್ಯಾಮ್‌ಸಂಗ್ ತನ್ನ ಅಧಿಕೃತ ವೆಬ್‌ಸೈಟ್ ಮತ್ತು ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದೆ. ವಿಶ್ವದಾದ್ಯಂತದ ಗ್ರಾಹಕರು ಲೈವ್ ಮೂಲಕ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಅನಾವರಣವನ್ನು ವೀಕ್ಷಿಸಬಹುದಾಗಿದೆ.
💙 Like this post and get a front-row seat to what's next. Can you guess what's coming?
— Samsung Mobile (@SamsungMobile) July 7, 2026
Join us at Samsung Galaxy Unpacked on July 22. A new shape unfolds. pic.twitter.com/Zw4XnP7jSD
ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು
ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಅಲ್ಟ್ರಾ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 8 ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗುವ ಸಾಧ್ಯತೆಗಳು ಇವೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಫೋನ್ ಸ್ನಾಪ್‌ಡ್ರಾಗನ್ 8 ಅಲ್ಟ್ರಾ ಪ್ರೊಸೆಸರ್ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಗ್ಯಾಲಕ್ಸಿ Z ಫೋಲ್ಡ್ 8 ಅಲ್ಟ್ರಾ ಮೊಬೈಲ್ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಒಳಗೊಂಡಿರುವ ನಿರೀಕ್ಷೆಗಳು ಇವೆ. ಹಾಗೆಯೇ ಗ್ಯಾಲಕ್ಸಿ Z ಫ್ಲಿಪ್ 8 ಮೊಬೈಲ್ 12GB RAM ವೇರಿಯಂಟ್ ಆಯ್ಕೆಯಲ್ಲಿ ಲಗ್ಗೆ ಇಡುವ ಸಾಧ್ಯತೆಗಳು ಇವೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
