Representative Image
ಟೆಕ್ ದಿಗ್ಗಜ ಸಂಸ್ಥೆ ಎನಿಸಿರುವ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S ಸರಣಿಯ ಮುಂದಿನ ಉತ್ತರಾಧಿಕಾರಿಯಾಗಿ Galaxy S26 ಲೈನ್‌ಅಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇನ್ನು ಶೀಘ್ರದಲ್ಲೇ ಲಾಂಚ್ ಆಗಲಿರುವ Galaxy S26 ಸರಣಿಯು ಮೂರು ವೇರಿಯಂಟ್‌ಗಳನ್ನು ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಸರಣಿಯು ಮೂರು ದೈತ್ಯ ಪ್ರೀಮಿಯಂ ಫೋನ್‌ಗಳು ಬಿಗ್ ಡಿಸ್‌ಪ್ಲೇ, ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್, ಪವರ್‌ಪುಲ್ ಬ್ಯಾಟರಿ ಬ್ಯಾಕ್‌ಅಪ್‌ನಂತಹ ಅಪ್‌ಗ್ರೇಡ್‌ಗಳೊಂದಿಗೆ ಲಗ್ಗೆ ಇಡಲಿವೆ ಎಂದು ಲೀಕ್ ವರದಿಗಳಿಂದ ತಿಳಿಯಬಹುದು. ಆದರೆ ಅಧಿಕೃತವಾಗಿ ಇನ್ನು ಯಾವುದೇ ಮಾಹಿತಿ ಬಹಿರಂಗ ಆಗಿಲ್ಲ. ಈ ಬಗ್ಗೆ ಇತ್ತೀಚಿಗಿನ ಕೆಲವು ಅಪ್‌ಡೇಟ್ ಬಗ್ಗೆ ಮುಂದೆ ನೋಡೋಣ.
Also Read : Moto Watch ಭಾರತದಲ್ಲಿ ಬಿಡುಗಡೆ; 13 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ
ಕೆಲವು ಲೀಕ್ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸರಣಿಯನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಬರುವ ಫೆಬ್ರವರಿ 25, 2026 ರಂದು ಲಾಂಚ್ ಮಾಡುವ ಸಾಧ್ಯತೆಗಳು ಇವೆ. ಇನ್ನು ಸ್ಯಾಮ್‌ಸಂಗ್ ಕಂಪನಿಯ ಗ್ಯಾಲಕ್ಸಿ S26 ಸರಣಿಯ ಫೋನ್‌ಗಳು ಮಾರ್ಚ್ 2026 ವೇಳೆ ಖರೀದಿಗೆ ಲಭ್ಯ ಆಗಲಿವೆ ಎಂದು ಲೀಕ್ ವರದಿಗಳಿಂದ ತಿಳಿದು ಬಂದಿದೆ.
ಹೌದು ಸ್ಯಾಮ್‌ಸಂಗ್ ಸಂಸ್ಥೆಯಿಂದ ಮುಂಬರಲಿರುವ Samsung Galaxy S26 ಸ್ಮಾರ್ಟ್‌ಫೋನ್ ಸರಣಿಯು Samsung Galaxy S26, Samsung Galaxy S26 Plus ಮತ್ತು Samsung Galaxy S26 Ultra ಮಾಡೆಲ್‌ಗಳನ್ನು ಒಳಗೊಂಡಿರುವುದು ಪಕ್ಕಾ ಎನ್ನಲಾಗಿದೆ. ಇವುಗಳ ಪೈಕಿ ಅತ್ಯಂತ ಹೈ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎನಿಸಿಕೊಳ್ಳಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಮಾಡೆಲ್ ಸಖತ್ ಪವರ್‌ಫುಲ್ ಫೀಚರ್ಸ್‌ಗಳೊಂದಿಗೆ ಆಗಮಿಸುವ ನಿರೀಕ್ಷೆಗಳು ಇವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಮೊಬೈಲ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಜೊತೆಗೆ 6.9 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಗ್ಯಾಲಕ್ಸಿ S26 ಪ್ಲಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಪಡೆದಿರಲಿದೆ ಹಾಗೂ ಗ್ಯಾಲಕ್ಸಿ S26 ಫೋನ್ 6.3 ಇಂಚಿನ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ. ಅದೇ ರೀತಿ ಗ್ಯಾಲಕ್ಸಿ S26 ಅಲ್ಟ್ರಾ ಮೊಬೈಲ್ 5,400mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ ಫಾಸ್ಟ್ ವೈರ್ಡ್ ಚಾರ್ಜಿಂಗ್ ಸಪೋರ್ಟ್ ಹೊಂದಿರಲಿದೆ. ಹಾಗೆಯೇ ಗ್ಯಾಲಕ್ಸಿ S26 ಪ್ಲಸ್ ಮೊಬೈಲ್ 4,900mAh ಬ್ಯಾಟರಿ ಪವರ್ ಮತ್ತು ಗ್ಯಾಲಕ್ಸಿ S26 ಮಾಡೆಲ್ ಮೊಬೈಲ್ 4,300mAh ಬ್ಯಾಟರಿ ಸಾಮರ್ಥ್ಯದಲ್ಲಿ ಲಗ್ಗೆ ಇಡುವ ನಿರೀಕ್ಷೆಗಳು ಇವೆ.
ಇನ್ನು ಗ್ಯಾಲಕ್ಸಿ S26 ಅಲ್ಟ್ರಾ ಮೊಬೈಲ್ 200MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆರಲಿದ್ದು ಸೆಲ್ಫಿಗಾಗಿ 12MP ಕ್ಯಾಮೆರಾ ಒಳಗೊಂಡಿರಲಿದೆ ಎನ್ನಲಾಗಿದೆ. ಗ್ಯಾಲಕ್ಸಿ S26 ಪ್ಲಸ್ ಹಾಗೂ ಗ್ಯಾಲಕ್ಸಿ S26 ಫೋನ್‌ಗಳು ಸಹ 50MP ಕ್ಯಾಮೆರಾ ರಚನೆ ಪಡೆದಿರುವ ಸಾಧ್ಯತೆಗಳು ಇವೆ.