Samsung Galaxy S26: ದಕ್ಷಿಣ ಕೊರಿಯಾದ ಟೆಕ್ ದೊಡ್ಡಣ್ಣ ಸ್ಯಾಮ್‌ಸಂಗ್ ಕಂಪನಿಯು ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಫೋನ್ ಅನ್ನು ಇಂದು (ಫೆಬ್ರವರಿ 25 ರಂದು) ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2026 ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಅಂದಹಾಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಫೋನ್ Exynos 2600 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದ ಪಡೆದಿದೆ. ಹಾಗೆಯೇ ಈ ಮೊಬೈಲ್ 50MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಜೊತೆಗೆ 4,300mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದೆ. ಅಲ್ಲದೇ ಆಕರ್ಷಕ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನುಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಮೊಬೈಲ್‌ನ ಲಭ್ಯತೆ, ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Xiaomi 17 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆಗೆ ದಿನಾಂಕ ನಿಗದಿ; ಅಚ್ಚರಿಯ ಫೀಚರ್ಸ್ ಖಚಿತ!
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಮೊಬೈಲ್ 6.7 ಇಂಚಿನ FHD+ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇದರ ಸ್ಕ್ರೀನ್ ವಿಷನ್ ಬೂಸ್ಟರ್ ಜೊತೆಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಹೊಂದಿದೆ. ಹಾಗೆಯೇ ಈ ಮೊಬೈಲ್ ಕಂಪನಿಯ Exynos 2600 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ರನ್ ಆಗಲಿದೆ. ಇನ್ನು ಪ್ರೊಸೆಸರ್‌ಗೆ ಪೂರಕವಾಗಿ ಇದು One UI 8.5 ಒಳಗೊಂಡ Android 16 ಓಎಸ್ ಬೆಂಬಲ ಸಹ ಒಳಗೊಂಡಿದೆ. ಈ ಮೊಬೈಲ್ 12 + 512GB ಮತ್ತು 12 + 256GB ಆಂತರೀಕ ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾವು 50MP ವೈಡ್ ಲೆನ್ಸ್ ಸೌಲಭ್ಯ ಪಡೆದಿದೆ. ಅದೇ ರೀತಿ ದ್ವಿತೀಯ ಕ್ಯಾಮೆರಾವು 12MP ಅಲ್ಟ್ರಾ ವೈಡ್ ಲೆನ್ಸ್ ಸಾಮರ್ಥ್ಯದಲ್ಲಿ ಇದ್ದು, ಮೂರನೇ ಕ್ಯಾಮೆರಾವು 10MP ಟೆಲಿಫೋಟೋ ಲೆನ್ಸ್ ಸಾಮರ್ಥ್ಯದಲ್ಲಿ ಇವೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 12MP ಕ್ಯಾಮೆರಾ ರಚನೆಯನ್ನು ನೀಡಲಾಗಿದೆ.
ಹಾಗೆಯೇ ಈ ಸ್ಮಾರ್ಟ್‌ಫೋನ್ 4,300mAh ಬ್ಯಾಟರಿ ಬ್ಯಾಕ್‌ಅಪ್ ಬೆಂಬಲದ ಜೊತೆಗೆ 25W ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇದು ಸುಮಾರು 30 ನಿಮಿಷಗಳ ಚಾರ್ಜ್‌ನಲ್ಲಿ 55% ವರೆಗೆ ಚಾರ್ಜ್ ಭರ್ತಿ ಮಾಡಬಲ್ಲದು. ಹಾಗೆಯೇ ಸೂಪರ್ ಫಾಸ್ಟ್ ವೈರ್‌ಲೆಸ್ ಚಾರ್ಜಿಂಗ್ ಹಾಗೂ ವೈರ್‌ಲೆಸ್ ಪವರ್‌ಶೇರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇದರೊಂದಿಗೆ 5G, LTE, ವೈ-ಫೈ 7, ವೈ-ಫೈ ಡೈರೆಕ್ಟ್ ಹಾಗೂ ಬ್ಲೂಟೂತ್ v 6.0 ನಂತಹ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದುಕೊಂಡಿದೆ. ಅಲ್ಲದೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಸೌಲಭ್ಯ ಹೊಂದಿದೆ.
ಭಾರತೀಯ ಮಾರುಕಟ್ಟೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸರಣಿಯ ಲಗ್ಗೆ ಇಟ್ಟಿದೆ. ಈ ಸರಣಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸ್ಮಾರ್ಟ್‌ಫೋನ್ ಇಂದಿನಿಂದ (ಫೆ 25 ರಿಂದ) ಪ್ರಿ-ಆರ್ಡರ್‌ಗೆ ಲಭ್ಯವಿರುತ್ತದೆ. ಭಾರತದಲ್ಲಿ 12 + 512GB ವೇರಿಯಂಟ್ ಬೆಲೆ 87999 ರೂ.ಗಳು ಆಗಿದೆ. ಈ ಸ್ಮಾರ್ಟ್‌ಫೋನ್ ಕೋಬಾಲ್ಟ್ ವೈಲೇಟ್, ವೈಟ್, ಬ್ಲ್ಯಾಕ್ ಹಾಗೂ ಸ್ಕೈ ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಎಕ್ಸ್‌ಕ್ಲೂಸಿವ್‌ಗಾಗಿ ಪಿಂಕ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಸಹ ಲಭ್ಯವಾಗಲಿದೆ.